ರೂರ್ಕೆಲಾ(ಒಡಿಶಾ): 47 ವರ್ಷಗಳ ನಂತರ ಮತ್ತೆ ಇತಿಹಾಸ ಸೃಷ್ಠಿಸಲು ಭಾರತಕ್ಕೆ ವೇದಿಕೆ ಸಜ್ಜಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದ ತಂಡ ಮತ್ತೆ ಗೋಲ್ಡನ್ ಕ್ಷಣಗಳನ್ನು ಕಟ್ಟಿಕೊಟ್ಟಿದೆ. 15ನೇ ಆವೃತ್ತಿಯ ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಭಾರತ ಸ್ಪೇನ್ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿದೆ.
ಆರಂಭದಲ್ಲಿ ಎರಡೂ ತಂಡಗಳು ಸಮಬಲದ ಹೋರಾಟವನ್ನು ನೀಡಿದ್ದರು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಭಾರತ ತನ್ನ ಮೊದಲ ಗೋಲು ಗಳಿಸಿತು. ಭಾರತದ ಉಪನಾಯಕ ಮಿತ್ ರೋಹಿದಾಸ್ ಈ ವಿಶ್ವಕಪ್ನ ಮೊದಲ ಗೋಲನ್ನು ಭಾರತಕ್ಕೆ ತಂದಿತ್ತರು. ಮೊದಲ ಕ್ವಾರ್ಟರ್‌ನಲ್ಲಿ ಅಂತ್ಯಕ್ಕೆ ಭಾರತವು ಸ್ಪೇನ್ ವಿರುದ್ಧ 1-0 ಗೋಲ್ನಿಂದ ಮುನ್ನಡೆ ಸಾಧಿಸಿತ್ತು.
-
First game, first win. ✅
— Hockey India (@TheHockeyIndia) January 13, 2023 " class="align-text-top noRightClick twitterSection" data="
Team India began the World Cup with a victory. 🤩🤩💥
🇮🇳 IND 2:0 ESP 🇪🇸#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/xq2PJ0QLdy
">First game, first win. ✅
— Hockey India (@TheHockeyIndia) January 13, 2023
Team India began the World Cup with a victory. 🤩🤩💥
🇮🇳 IND 2:0 ESP 🇪🇸#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/xq2PJ0QLdyFirst game, first win. ✅
— Hockey India (@TheHockeyIndia) January 13, 2023
Team India began the World Cup with a victory. 🤩🤩💥
🇮🇳 IND 2:0 ESP 🇪🇸#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/xq2PJ0QLdy
ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಹಾರ್ದಿಕ್ ಸಿಂಗ್ ಗೋಲುಗಳಿಸಿದರು. ನಂತರದ ಎರಡು ಕ್ವಾರ್ಟರ್ ಸ್ಪೇನ್ ಗೋಲ್ಗಾಗಿ ಸೆಣಸಿದರೂ ಪ್ರಯೋಜನ ವಾಗಲಿಲ್ಲ. ಭಾರತ ಯಶಸ್ವೀಯಾಗಿ ಸ್ಪೇನ್ ದಾಳಿಯನ್ನು ಪ್ರತಿರೋಧಿಸಿತು. ಬ್ಲೂ ಟೀಮ್ ಯಾವುದೇ ನೀಡದೇ 2-0 ಗೋಲ್ನಿಂದ ಗೆಲುವು ದಾಖಲಿಸಿತು.
ಭಾರತ ಐದು ಪೆನಾಲ್ಟಿ ಕಾರ್ನರ್‌ಗಳು ಮತ್ತು ಎರಡನೆಯದರಿಂದ ಗೋಲು ಗಳಿಸಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಕೂಡ ಮೂರನೇ ಕ್ವಾರ್ಟರ್‌ನಲ್ಲಿ ಪೆನಾಲ್ಟಿ ಸ್ಟ್ರೋಕ್ ತಪ್ಪಿಸಿಕೊಂಡರು. ಗೋಲ್‌ಕೀಪರ್ ಕ್ರಿಶನ್ ಬಹದ್ದೂರ್ ಪಾಠಕ್ ಅವರು ಪೆನಾಲ್ಟಿ ಕಾರ್ನರ್‌ಗಳು ಸೇರಿದಂತೆ ಕೆಲವು ಉತ್ತಮ ಸೇವ್‌ಗಳನ್ನು ಮಾಡಿದರು. ಈ ಮೂಲಕ ಆರನೇ ಶ್ರೇಯಾಂಕದಲ್ಲಿರುವ ಭಾರತವು ಯುರೋಪಿಯನ್ ಎದುರಾಳಿಗಳಿಗೆ ತಮ್ಮ ಆಟವನ್ನು ಆಡಲು ಅವಕಾಶ ನೀಡಲಿಲ್ಲ. ಇಂದಿನ ಗೆಲುವಿಗೆ ಕಾರಣರಾದ ದೇಶಕ್ಕೆ ಮೊದಲ ಗೋಲ್ ಗಳಿಸಿದ ಉಪನಾಯಕ ಅಮಿತ್ ರೋಹಿದಾಸ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
-
Amit Rohidas, who scored a booming first goal to put Team India ahead, is named the Player of the Match. 💯#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/OMSHsfztRM
— Hockey India (@TheHockeyIndia) January 13, 2023 " class="align-text-top noRightClick twitterSection" data="
">Amit Rohidas, who scored a booming first goal to put Team India ahead, is named the Player of the Match. 💯#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/OMSHsfztRM
— Hockey India (@TheHockeyIndia) January 13, 2023Amit Rohidas, who scored a booming first goal to put Team India ahead, is named the Player of the Match. 💯#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @IndiaSports @Media_SAI pic.twitter.com/OMSHsfztRM
— Hockey India (@TheHockeyIndia) January 13, 2023
ಟೀಮ್ ಇಂಡಿಯಾ ಆಡಿದ 11 ಆಟಗಾರರು: ಹರ್ಮನ್‌ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್ (ಉಪನಾಯಕ), ಸುರೇಂದರ್ ಕುಮಾರ್, ಮನ್‌ಪ್ರೀತ್ ಸಿ, ಹಾರ್ದಿಕ್ ಸಿ, ದನ್‌ದೀಪ್ ಸಿ, ಪಿಆರ್ ಶ್ರೀಜೇಶ್ (ಗೋಲ್‌ಕೀಪರ್), ಸಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶ್ ದೀಪ್ ಸಿಂಗ್, ಸುಖಜಿತ್ ಸಿಂಗ್.
ಸ್ಪೇನ್ ಆಡಿದ 11 ಆಟಗಾರರು: ಮಿರಾಲ್ಸ್ ಮಾರ್ಕ್ (ನಾಯಕ), ಅಲೋನ್ಸೊ ಅಲೆಜಾಂಡ್ರೊ, ಜೇವಿಯರ್ ಗಿಸ್ಪಾರ್ಟ್, ಎನ್ರಿಕ್ ಗೊನ್ಜಾಲೆಜ್, ಅಲ್ವಾರ್ ಇಗ್ಲೇಷಿಯಸ್, ಜೋರ್ಡಿ ಬನಾಸ್ಟ್ರೆ, ಪೆಪ್ ಕುನಿಲ್, ಜೋಕ್ವಿನ್ ಮೆನಿನಿ, ಆಡ್ರಿಯನ್ ರಫಿ (ಗೋಲ್‌ಕೀಪರ್), ಇಗ್ನಾಸಿಯೊ ರೊಡ್ರಿಗಸ್, ಲಕ್ಲಿ ಬೋರ್ಜಾ.
ಡಿ ಪೋಲ್ನ ಇಂಗ್ಲೆಂಡ್ಗೆ ಗೆಲುವು: ಡಿ ಗುಂಪಿನ ಭಾರತ ಮತ್ತು ಸ್ಪೇನ್ ಆಡುವ ಮೊದಲು ಇಂಗ್ಲೆಂಡ್ ಮತ್ತು ವೇಲ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ 5 ಗೋಲ್ ಗಳಿಸಿ ಗೆಲುವು ಸಾಧಿಸಿತು. ಮೂರನೇ 15 ನಿಮಿಷದ ಆಟದಲ್ಲಿ ಎರಡು ಗೋಲ್ ಮತ್ತು ಮತ್ತಿನ ಎಲ್ಲ ಕ್ವಾರ್ಟರ್ಗಳಲ್ಲೂ ಒಂದೊಂದು ಗೋಲುಗಳನ್ನು ಗಳಿಸಿತು. ವೇಲ್ಸ್ ವಿರುದ್ಧ ಬಲಾಢ್ಯ ಪ್ರದರ್ಶನ ನೀಡಿ ಡಿ ಗುಂಪಿನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿತು.
-
Here are the standings after the first day of FIH Odisha Hockey Men's World Cup 2023 Bhubaneswar-Rourkela.#IndiaKaGame #HockeyIndia #StarsBecomeLegends #HWC2023 @CMO_Odisha @sports_odisha @Media_SAI @IndiaSports pic.twitter.com/nfNoKdN7V7
— Hockey India (@TheHockeyIndia) January 13, 2023 " class="align-text-top noRightClick twitterSection" data="
">Here are the standings after the first day of FIH Odisha Hockey Men's World Cup 2023 Bhubaneswar-Rourkela.#IndiaKaGame #HockeyIndia #StarsBecomeLegends #HWC2023 @CMO_Odisha @sports_odisha @Media_SAI @IndiaSports pic.twitter.com/nfNoKdN7V7
— Hockey India (@TheHockeyIndia) January 13, 2023Here are the standings after the first day of FIH Odisha Hockey Men's World Cup 2023 Bhubaneswar-Rourkela.#IndiaKaGame #HockeyIndia #StarsBecomeLegends #HWC2023 @CMO_Odisha @sports_odisha @Media_SAI @IndiaSports pic.twitter.com/nfNoKdN7V7
— Hockey India (@TheHockeyIndia) January 13, 2023
ಎ ಪೋಲ್ನ ಪಂದ್ಯಗಳು: ಭುವನೇಶ್ವರದ ಬಿರ್ಸಾ ಮುಂಡಾ ಕ್ರಿಡಾಂಗಣದಲ್ಲಿ ನಡೆದ ಎರಡು ಎ ಪೋಲ್ನ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. 15ನೇ ಹಾಕಿ ವಿಶ್ವಕಪ್ನ ಉದ್ಘಾಟನಾ ಪಂದ್ಯದಲ್ಲಿ ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾ ಎದುರಾದವು. ಇದರಲ್ಲಿ 1-0 ಗೋಲ್ನಿಂದ ಅರ್ಜೆಂಟೀನಾ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ನಡವೆ ನಡೆದ ಎರಡನೇ ಪಂದ್ಯದಲ್ಲಿ ಕಾಂಗರೂ ರಾಷ್ಟ್ರ 8-0ಯಿಂದ ಗೆಲುವು ಸಾಧಿಸಿತು.
ಇದನ್ನೂ ಓದಿ: ಹಾಕಿ ವಿಶ್ವಕಪ್: ಭಾರತಕ್ಕೆ ಇಂದು ಸ್ಪೇನ್ ಎದುರಾಳಿ, ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಣಿಸಿದ ಅರ್ಜೆಂಟೀನಾ