ಹೈದರಾಬಾದ್: ದೇಶದ ಸ್ಟಾರ್ ಅಥ್ಲೀಟ್ ಹಿಮಾದಾಸ್ ಟೋಕಿಯೋ ಒಲಿಂಪಿಕ್ಸ್ನಿಂದ ಹೊರಬಿದ್ದಿದ್ದಾರೆ. ಜಾಗತಿಕ ಮಹತ್ವದ ಕ್ರೀಡಾಕೂಟದಲ್ಲಿ ಭಾಗಿಯಾಗುವ ಮೊದಲ ಅವಕಾಶ ಅವರ ಕೈತಪ್ಪಿದೆ.
- — Hima (mon jai) (@HimaDas8) July 6, 2021 " class="align-text-top noRightClick twitterSection" data="
— Hima (mon jai) (@HimaDas8) July 6, 2021
">— Hima (mon jai) (@HimaDas8) July 6, 2021
ಕಳೆದ ತಿಂಗಳು ನಡೆದಿದ್ದ ರಾಷ್ಟ್ರೀಯ ಅಂತಾರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ 100 ಮೀಟರ್ ಓಟದ ವೇಳೆ ಮಂಡಿ ನೋವಿಗೊಳಗಾಗಿದ್ದು, ಚೇತರಿಸಿಕೊಳ್ಳಲು ಕೆಲ ತಿಂಗಳ ಅವಶ್ಯಕತೆ ಇದೆ. ಹೀಗಾಗಿ ಒಲಿಂಪಿಕ್ಸ್ನಿಂದ ಅವರು ಹೊರಗುಳಿಯುತ್ತಿದ್ದಾರೆ.
ಈ ಸಂಬಂಧ ಟ್ವಿಟ್ ಮಾಡಿರುವ ಹಿಮಾದಾಸ್, ಗಾಯದ ಸಮಸ್ಯೆಯಿಂದಾಗಿ ನಾನು ಮೊದಲ ಒಲಿಂಪಿಕ್ಸ್ ಕ್ರೀಡಾಕೂಟ ತಪ್ಪಿಸಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಿಷ್ಠಳಾಗಿ ಕಮ್ಬ್ಯಾಕ್ ಮಾಡುವೆ ಎಂದಿದ್ದಾರೆ.
ಇದ್ರ ಜತೆಗೆ, 2022ರ ಕಾಮನ್ವೆಲ್ತ್, ಏಷ್ಯನ್ ಗೇಮ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗಿಯಾಗುವ ಇರಾದೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿರಿ: 'ಧೋನಿ ಫ್ರಾಂಚೈಸಿಯ 'ಮಹಾರಾಜ'...CSK ಯಾವುದೇ ಕಾರಣಕ್ಕೂ ಅವರನ್ನು ಕೈಬಿಡಲ್ವಂತೆ!
21 ವರ್ಷದ ಹಿಮಾದಾಸ್ 2018ರ ವಿಶ್ವ ಅಂಡರ್ 20 ಚಾಂಪಿಯನ್ಶಿಪ್ನ 200 ಮೀಟರ್ ಓಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು.