ಟೋಕಿಯೊ: ಟೋಕಿಯೊ ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೋ ಮೋರಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ನಂತರ ನಾನು ರಾಜೀನಾಮೆ ನೀಡುವುದಿಲ್ಲ, ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ.
"ನಾನು ರಾಜೀನಾಮೆ ನೀಡಲು ಯೋಚಿಸುತ್ತಿಲ್ಲ" ಎಂದು ಮೋರಿ ಹೇಳಿದ್ದಾರೆ. "ನಾನು ಏಳು ವರ್ಷಗಳಿಂದ ಶ್ರಮಿಸುತ್ತಿದ್ದೇನೆ ಮತ್ತು ಶ್ರದ್ಧೆಯಿಂದ ಸಹಾಯ ಮಾಡಿದ್ದೇನೆ. ನಾನು ರಾಜೀನಾಮೆ ನೀಡುವುದಿಲ್ಲ" ಎಂದು ಹೇಳಿದರು.
ವಾರದ ಆರಂಭದಲ್ಲಿ ಜಪಾನಿನ ಒಲಿಂಪಿಕ್ ಸಮಿತಿಯ ನಿರ್ದೇಶಕರ ಮಂಡಳಿಯ ಆನ್‌ಲೈನ್ ಸಭೆಯಲ್ಲಿ ಮಾತನಾಡಿದ ಮೋರಿ, "ಮಹಿಳೆಯರು ಸಭೆಗಳಲ್ಲಿ ಹೆಚ್ಚು ಮಾತನಾಡುತ್ತಾರೆ. ಅವರ ಕಾಮೆಂಟ್‌ಗಳು ಜಪಾನ್‌ನಲ್ಲಿ ಬಿರುಗಾಳಿಯನ್ನು ಸೃಷ್ಟಿಸಿವೆ. ಅಲ್ಲಿ ಮಹಿಳೆಯರು ರಾಜಕೀಯದಲ್ಲಿ ಮತ್ತು ಬೋರ್ಡ್ ರೂಮ್‌ಗಳಲ್ಲಿ ಹೆಚ್ಚು ಪ್ರಾತಿನಿಧ್ಯವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ, ಮಹಿಳೆಯರು ತುಂಬಾ ಸ್ಪರ್ಧಾತ್ಮಕರಾಗಿದ್ದಾರೆ. ಅವರಲ್ಲಿ ಒಬ್ಬರು ಕೈ ಎತ್ತಿದಾಗ, ಇತರರೂ ಕೂಡ ಏನನ್ನಾದರೂ ಹೇಳಬೇಕು ಎಂದು ಭಾವಿಸುತ್ತಾರೆ. ತದನಂತರ ಏನನ್ನಾದರೂ ಹೇಳುತ್ತಾರೆ. ಅವರ ಮಾತಿನ ಮಿತಿಯನ್ನು ನಿಗದಿಪಡಿಸಬೇಕು. ಇಲ್ಲವಾದಲ್ಲಿ ಮುಗಿಸಲು ಸಾಧ್ಯವಿಲ್ಲ" ಎಂದು ನಗುತ್ತಾ ಹೇಳಿರುವುದಾಗಿ ದೈನಂದಿನ ದಿನಪತ್ರಿಕೆ ಅಸಾಹಿ ಶಿಂಬುನ್ ವರದಿ ಮಾಡಿದೆ.
ಇನ್ನು ಈ ಹೇಳಿಕೆ ಬಗ್ಗೆ ವಿರೋಧ ವ್ಯಕ್ತವಾದ ಬೆನ್ನಲ್ಲೇ, "ನಾನು ತೀವ್ರವಾಗಿ ಪಶ್ಚಾತ್ತಾಪ ಪಡುತ್ತೇನೆ. ನಾನು ಈ ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ಬಯಸುತ್ತೇನೆ. ಎಲ್ಲರಲ್ಲೂ ಕ್ಷಮೆಯಾಚಿಸಲು ನಾನು ಬಯಸುತ್ತೇನೆ" ಎಂದರು.
ಟೋಕಿಯೊ ಒಲಿಂಪಿಕ್ಸ್ ಈಗಾಗಲೇ ಸಮಸ್ಯೆಗಳಿಂದ ಕೂಡಿದೆ. ಶೇ. 80 ಜಪಾನಿಯರು ಸಾಂಕ್ರಾಮಿಕ ರೋಗದ ಮಧ್ಯೆ ಆಟಗಳನ್ನು ಮುಂದೂಡಬೇಕು ಅಥವಾ ರದ್ದುಗೊಳಿಸಬೇಕು ಎಂದು ವೋಟಿಂಗ್ ಪ್ರಕ್ರಿಯೆಯಲ್ಲಿ ಹೇಳಿದ್ದಾರೆ. ಈ ಒಲಿಂಪಿಕ್ಸ್‌ಗಾಗಿ 25 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮೊತ್ತವನ್ನು ವ್ಯಯಿಸಬಹುದಾಗಿದೆ.