ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಅಥ್ಲೀಟ್‌ಗಳ ಅಮೋಘ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾರತದ ವೇಟ್‌ಲಿಫ್ಟರ್ ಹರ್ಜಿಂದರ್ ಕೌರ್ ಸೋಮವಾರ ನಡೆದ ಮಹಿಳೆಯರ 71 ಕೆಜಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇಂಗ್ಲೆಂಡ್‌ನ ಸಾರಾ ಡೇವಿಸ್ ಒಟ್ಟು 229 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರೆ, ಕೆನಡಾದ ಅಲೆಕ್ಸಿಸ್ ಆಶ್ವರ್ತ್ 214 ಕೆ.ಜಿ.ಗಳೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
-
9️⃣th medal for 🇮🇳 at @birminghamcg22 🤩🤩
— SAI Media (@Media_SAI) August 1, 2022 " class="align-text-top noRightClick twitterSection" data="
After high voltage 🤯 drama India's #HarjinderKaur bags 🥉 in Women's 71kg Final with a total lift of 212Kg 🏋♂️ at #B2022
Snatch- 93kg
Clean & Jerk- 119kg
With this #TeamIndia🇮🇳 wins its 7️⃣th Medal in 🏋♀️🏋♂️ 💪💪#Cheer4India🇮🇳 pic.twitter.com/D13FqCqKYs
">9️⃣th medal for 🇮🇳 at @birminghamcg22 🤩🤩
— SAI Media (@Media_SAI) August 1, 2022
After high voltage 🤯 drama India's #HarjinderKaur bags 🥉 in Women's 71kg Final with a total lift of 212Kg 🏋♂️ at #B2022
Snatch- 93kg
Clean & Jerk- 119kg
With this #TeamIndia🇮🇳 wins its 7️⃣th Medal in 🏋♀️🏋♂️ 💪💪#Cheer4India🇮🇳 pic.twitter.com/D13FqCqKYs9️⃣th medal for 🇮🇳 at @birminghamcg22 🤩🤩
— SAI Media (@Media_SAI) August 1, 2022
After high voltage 🤯 drama India's #HarjinderKaur bags 🥉 in Women's 71kg Final with a total lift of 212Kg 🏋♂️ at #B2022
Snatch- 93kg
Clean & Jerk- 119kg
With this #TeamIndia🇮🇳 wins its 7️⃣th Medal in 🏋♀️🏋♂️ 💪💪#Cheer4India🇮🇳 pic.twitter.com/D13FqCqKYs
ಹರ್ಜಿಂದರ್ ಸ್ನ್ಯಾಚ್‌ನಲ್ಲಿ 90 ಕೆಜಿಯ ಮೊದಲ ಪ್ರಯತ್ನ ವಿಫಲವಾಯಿತು. ಆದರೆ, ಎರಡನೇ ಪ್ರಯತ್ನದಲ್ಲಿ ಅದನ್ನು ಯಶಸ್ವಿಯಾಗಿ ಎತ್ತಿದ ನಂತರ ಅವರು ಮೂರನೇ ಪ್ರಯತ್ನದಲ್ಲಿ 93 ಕೆಜಿ ಎತ್ತಿದರು. ನಂತರ ಕ್ಲೀನ್ ಮತ್ತು ಜರ್ಗ್‌ನಲ್ಲಿ 113, 116 ಮತ್ತು 119 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಹರ್ಜಿಂದರ್ ಒಟ್ಟು 212 (ಸ್ನ್ಯಾಚ್‌ನಲ್ಲಿ 93, ಕ್ಲೀನ್ ಮತ್ತು ಜರ್ಕ್‌ನಲ್ಲಿ 119) ತೂಕ ಎತ್ತುವ ಮೂಲಕ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಈ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ನ ಸಾರಾ ಮೂರು ಹೊಸ ದಾಖಲೆಗಳನ್ನು ಮಾಡಿದ್ದಾರೆ. ಸ್ನ್ಯಾಚ್‌ನಲ್ಲಿ 103 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 126 ಕೆಜಿ ಜೊತೆಗೆ ಒಟ್ಟು 229 ಕೆಜಿ ಭಾರ ಎತ್ತುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಆಶ್ ವರ್ತ್ ಒಟ್ಟು 214 (91 ಕೆಜಿ ಮತ್ತು 123 ಕೆಜಿ) ಎತ್ತಿದರು.
ಟೆಬಲ್ ಟೆನಿಸ್: ಲೆಜೆಂಡರಿ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಅವರು ವಿಶ್ವ 15ನೇ ಶ್ರೇಯಾಂಕದ ಅರುಣಾ ಖಾದ್ರಿ ವಿರುದ್ಧ ಅದ್ಭುತ ಜಯ ದಾಖಲಿಸಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ನ ಟೇಬಲ್ ಟೆನಿಸ್ ಪುರುಷರ ಟೀಮ್ ಈವೆಂಟ್‌ನ ಸೆಮಿಫೈನಲ್‌ನಲ್ಲಿ ಭಾರತವು ನೈಜೀರಿಯಾವನ್ನು 3-0 ಅಂತರದಿಂದ ಸೋಲಿಸಿದೆ. ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಭಾರತದ ವಿರುದ್ಧ ಸಿಂಗಾಪುರ ಸವಾಲನ್ನು ಎದುರಿಸಲಿದೆ.
ಜಿ ಸತ್ಯನ್ ಮತ್ತು ಹರ್ಮೀತ್ ದೇಸಾಯಿ ಜೋಡಿಯು ಮೊದಲ ಡಬಲ್ಸ್ ಪಂದ್ಯದಲ್ಲಿ ಒಲಾಜಿಡೆ ಒಮೊಟೊಯೊ ಮತ್ತು ಅಬ್ಯೋದುನ್ ಬೋಡೆ ವಿರುದ್ಧ ಗೆಲುವಿನ ಮೂಲಕ ಭಾರತಕ್ಕೆ ಉತ್ತಮ ಆರಂಭ ದೊರೆಯಿತು. ಇದಾದ ಬಳಿಕ 40ರ ಹರೆಯದ ಶರತ್ ಸಿಂಗಲ್ಸ್ ಪಂದ್ಯದಲ್ಲಿ ಭಾರತಕ್ಕೆ ಅತಿ ದೊಡ್ಡ ಗೆಲುವು ತಂದುಕೊಟ್ಟರು. ಅವರು ಖಾದ್ರಿ ವಿರುದ್ಧ 11-9, 7-11, 11-8, 15-13 ಗೆಲುವು ದಾಖಲಿಸಿದರು. ಭಾರತದ ಅತ್ಯುನ್ನತ ಶ್ರೇಯಾಂಕದ ಆಟಗಾರ ಜಿ ಸತ್ಯನ್ ಒಮೊಟೊಯೊ ಅವರನ್ನು 11-9, 4-11, 11-6, 11-8 ಸೆಟ್‌ಗಳಿಂದ ಸೋಲಿಸಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.
-
FINAL BOUND! 🏓
— SAI Media (@Media_SAI) August 1, 2022 " class="align-text-top noRightClick twitterSection" data="
Our Men's #TableTennis team have made it to the final of #CWG2022 following a hard-fought 3-0 win against Nigeria in Semis 🔥@HarmeetDesai /@sathiyantt (MD), @sharathkamal1 (MS) & Sathiyan (MS) have sealed the victory for 🇮🇳
Up against 🇸🇬 in FINAL on 3rd Aug pic.twitter.com/5ioyX781vQ
">FINAL BOUND! 🏓
— SAI Media (@Media_SAI) August 1, 2022
Our Men's #TableTennis team have made it to the final of #CWG2022 following a hard-fought 3-0 win against Nigeria in Semis 🔥@HarmeetDesai /@sathiyantt (MD), @sharathkamal1 (MS) & Sathiyan (MS) have sealed the victory for 🇮🇳
Up against 🇸🇬 in FINAL on 3rd Aug pic.twitter.com/5ioyX781vQFINAL BOUND! 🏓
— SAI Media (@Media_SAI) August 1, 2022
Our Men's #TableTennis team have made it to the final of #CWG2022 following a hard-fought 3-0 win against Nigeria in Semis 🔥@HarmeetDesai /@sathiyantt (MD), @sharathkamal1 (MS) & Sathiyan (MS) have sealed the victory for 🇮🇳
Up against 🇸🇬 in FINAL on 3rd Aug pic.twitter.com/5ioyX781vQ
ಇವರ ಗಮನಾರ್ಹ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದು, ದೇಶದ ಹಿರಿಮೆ ಹೆಚ್ಚಿಸಿದಕ್ಕಾಗಿ ಶುಭ ಹಾರೈಸಿದ್ದಾರೆ. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 3 ಚಿನ್ನ, 3 ಬೆಳ್ಳಿ ಹಾಗೂ ಮೂರು ಕಂಚು ಸೇರಿ 9 ಪದಕ ಸಂಪಾದಿಸಿದೆ.
ಓದಿ: ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮತ್ತೆರಡು ಪದಕ; ಬೆಳ್ಳಿ ಗೆದ್ದ ಸುಶೀಲಾ, ಕಂಚಿಗೆ ಮುತ್ತಿಕ್ಕಿದ ವಿಜಯ್