ETV Bharat / sports

Asian games: ಭಾರತಕ್ಕೆ ಮತ್ತೊಂದು ಪದಕ... ವುಶು ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ ನವೋರೆಮ್ - ಮಹಿಳೆಯರ 60 ಕೆಜಿ ವುಶು ಫೈನಲ್‌

Asian Games: ಹ್ಯಾಂಗ್‌ಝೌನಲ್ಲಿ ಇಂದು (ಗುರುವಾರ) ನಡೆದ ಏಷ್ಯನ್ ಗೇಮ್ಸ್​ನ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

Asian Games
ಏಷ್ಯನ್ ಗೇಮ್ಸ್: ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್​ಗೆ ಬೆಳ್ಳಿ
author img

By PTI

Published : Sep 28, 2023, 7:59 AM IST

Updated : Sep 28, 2023, 10:18 AM IST

ಹ್ಯಾಂಗ್‌ಝೌ: ಇಲ್ಲಿ ಇಂದು (ಗುರುವಾರ) ನಡೆದ ಏಷ್ಯನ್ ಗೇಮ್ಸ್​ನ ಮಹಿಳೆಯರ 60 ಕೆಜಿ ವುಶು ಫೈನಲ್‌ನಲ್ಲಿ ಭಾರತದ ರೋಶಿಬಿನಾ ದೇವಿ ನವೋರೆಮ್ ಅವರು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಮಹಿಳೆಯರ 60 ಕೆಜಿ ವುಶು ಸಂಡಾ ಫೈನಲ್‌ನಲ್ಲಿ ಭಾರತದ ನವೋರೆಮ್ ರೋಶಿಬಿನಾ ದೇವಿ ಅವರು ಚೀನಾದ ಹೆವಿವೇಟ್ ವು ಕ್ಸಿಯಾವೊಯ್ ವಿರುದ್ಧ 0-2 ಅಂತರದ ಸೋಲಿನ ನಂತರ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ.

ಈ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಆಗಿರುವ ವು ಕ್ಸಿಯಾವೊಯಿ ವಿರುದ್ಧ ಭಾರತೀಯ ಆಟಗಾರ್ತಿ ಕಠಿಣ ಹೋರಾಟ ನಡೆಸಿದರು. ಚೀನಾದ ಆಟಗಾರ್ತಿಗೆ ಬಲವಾದ ಆರಂಭವನ್ನು ಪಡೆಯಲು ಅವಕಾಶ ಮಾಡಿಕೊಟ್ಟರು. ಎರಡು ಸುತ್ತುಗಳ ನಂತರ ತೀರ್ಪುಗಾರರು ವು ಕ್ಸಿಯಾವೊಯಿ ಅವರನ್ನು ವಿಜೇತರೆಂದು ಘೋಷಿಸಿದರು. ತನ್ನ ಎದುರಾಳಿಯನ್ನು ಮಣಿಸಲು ಪ್ರಯತ್ನಿಸಿದರು. ಮೊದಲ ಸುತ್ತು ಆಕ್ರಮಣಕಾರಿ ಆಗಿತ್ತು. ರೋಶಿಬಿನಾ ಅವರನ್ನು ವು ಕ್ಸಿಯಾವೊಯಿ ತಡೆಯಲು ಪ್ರಾರಂಭಿಸಿದರು. ಆದರೂ ಮಣಿಪುರಿ ಅಥ್ಲೀಟ್ ಪುಟಿದೇಳಲು ಪ್ರಯತ್ನಿಸಿದರು. ಆದರೆ, ಮೊದಲ ಸುತ್ತಿನಲ್ಲಿ ವು ಕ್ಸಿಯಾವೊಯಿ 1-0 ಮುನ್ನಡೆ ಸಾಧಿಸಿದರು.

  • REMARKABLE ROSHIBINA🥈🌟

    Roshibina won a sparkling Silver medal in the Wushu women’s 60 kg category at the #AsianGames2022

    Interestingly, Roshibina upgraded the color of her medal from bronze, which she won in 2018, Jakarta AG, to Silver this time.🔥🫡

    Kudos, champ!… pic.twitter.com/5uygAMK8Ta

    — SAI Media (@Media_SAI) September 28, 2023 " class="align-text-top noRightClick twitterSection" data=" ">

ವು ಎರಡನೇ ಸುತ್ತಿನಲ್ಲಿ ರೋಶಿಬಿನಾ ದೇವಿಯ ಮೇಲೆ ಪ್ರಬಲವಾದ ದಾಳಿ ಮಾಡುವ ಮೂಲಕ ಚಿನ್ನ ಗಳಿಸಿದರು. ಜಕಾರ್ತದಲ್ಲಿ ನಡೆದ 2018ರ ಆವೃತ್ತಿಯಲ್ಲಿ ರೋಶಿಬಿನಾ ಕಂಚು ಗೆದ್ದಿದ್ದರು. ಇದೀಗ ಬೆಳ್ಳಿಗೆ ಮುತ್ತಿಕ್ಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ: ''ಸಮರ್ಪಿತ ಮತ್ತು ಪ್ರತಿಭಾವಂತ ರೋಶಿಬಿನಾ ದೇವಿ ನವೋರೆಮ್ ಅವರು ಮಹಿಳೆಯರ ವುಶು 60 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಅವರು ಅಸಾಧಾರಣ ಪ್ರತಿಭೆ ಮತ್ತು ಶ್ರೇಷ್ಠತೆಯಿಂದ ಕೂಡಿದ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಶಿಸ್ತು ಮತ್ತು ಸಂಕಲ್ಪ ಕೂಡ ಮೆಚ್ಚುವಂತದ್ದು. ಅವರಿಗೆ ಅಭಿನಂದನೆಗಳು'' ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂದಿದ್ದಾರೆ.

  • Our dedicated and talented Roshibina Devi Naorem has won a Silver Medal in Wushu, Women’s Sanda 60 kg. She has showcased extraordinary talent and relentless pursuit of excellence. Her discipline and determination are also admirable. Congratulations to her. pic.twitter.com/CYiT8Mjyq2

    — Narendra Modi (@narendramodi) September 28, 2023 " class="align-text-top noRightClick twitterSection" data=" ">

ಪುರುಷರ 10 ಮೀ ಏರ್ ಪಿಸ್ತೂಲ್​ನಲ್ಲಿ ಚಿನ್ನ: ಪುರುಷರ 10 ಮೀ ಏರ್ ಪಿಸ್ತೂಲ್​ ಟೀಮ್ ಈವೆಂಟ್‌ನಲ್ಲಿ ಭಾರತ ತಂಡದ ಅರ್ಜುನ್ ಚೀಮಾ, ಸರಬ್ಜೋತ್ ಸಿಂಗ್, ಶಿವ ನರ್ವಾ ಅವರು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದಾರೆ. ಗುರುವಾರ ನಡೆದ ವೈಯಕ್ತಿಕ ಫೈನಲ್‌ನಲ್ಲಿ ಭಾರತ ತಂಡವು ಚೀನಾ ತಂಡವನ್ನು ಮಣಿಸಿ ವಿಜೇತರಾಗಿ ಹೊರಹೊಮ್ಮಿತು. ಶೂಟಿಂಗ್​ನಲ್ಲಿ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ದೊರೆತಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್: 50 ಮೀಟರ್ ರೈಫಲ್​ನಲ್ಲಿ ಸಿಫ್ಟ್ ಕೌರ್ ಸಮ್ರಾಗೆ ವಿಶ್ವದಾಖಲೆಯ ಚಿನ್ನ; ಆಶಿ ಚೌಕ್ಸೆಗೆ ಕಂಚು

Asian Games: ಪುರುಷರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಭಾರತಕ್ಕೆ ಸ್ವರ್ಣ ಪದಕ

BWF World Junior Championships: ಜಯದ ಓಟ ಮುಂದುವರೆಸಿದ ಜೂನಿಯರ್ಸ್​.. ಬ್ರೆಜಿಲ್ ವಿರುದ್ಧ ಭಾರತಕ್ಕೆ ಗೆಲುವು

Last Updated : Sep 28, 2023, 10:18 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.