ಅಹ್ಮದಾಬಾದ್: ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಮನೆಮಾತಾಗಿರುವ ಜಾವಲಿನ್ ಥ್ರೋವರ್ ನೀರಜ್ ಚೋಪ್ರಾ ಡಿಸೆಂಬರ್ 4, 2021ರಂದು ಅಹ್ಮದಾಬಾದ್ನ ಸಂಸ್ಕಾರಧಾಮ ಶಾಲೆಯಲ್ಲಿ ಪ್ರಧಾನಿ ಮೋದಿ ಅವರ ಫಿಟ್ನೆಸ್ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಅವರು ಈ ಅಭಿಯಾನದ ಮೂಲಕ ಗುಜರಾತಿನಾದ್ಯಂತ ಮಕ್ಕಳೊಂದಿಗೆ ಆರೋಗ್ಯ, ಫಿಟ್ನೆಸ್ ಮತ್ತು ಆಹಾರದ ಸಮತೋಲನ ಕಾಪಾಡುಕೊಳ್ಳುವುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ.
"ಪ್ರಧಾನಿ ಮೋದಿ ಅವರು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಡಯೆಟ್, ಫಿಟ್ನೆಸ್, ಕ್ರೀಡೆ ಮತ್ತು ಆರೋಗ್ಯ ಸೇರಿದಂತೆ ಹಲವು ವಿಚಾರಗಳ ಮಹತ್ವವನ್ನು ಮಕ್ಕಳೊಂದಿಗೆ ಚರ್ಚಿಸಿ ಎಂದು ಒಲಿಂಪಿಯನ್ ಮತ್ತು ಪ್ಯಾರಾಲಿಂಪಿಯನ್ಗಳಿಗೆ ಕರೆ ನೀಡಿದ್ದಾರೆ.
ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೊಪ್ರಾ ಅಹ್ಮದಾಬಾದ್ ಸಂಸ್ಕಾರಧಾಮ ಶಾಲೆಯಲ್ಲಿ ಈ ಮಿಷನ್ಗೆ ಡಿಸೆಂಬರ್ 4ರಂದು ಚಾಲನೆ ನೀಡಲಿದ್ದಾರೆ" ಎಂದು ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವಾ ಅನುರಾಗ್ ಠಾಕೂರ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಅಭಿಯಾನದ ಬಗ್ಗೆ ಮಾತನಾಡಿರುವ ನೀರಜ್ ಚೋಪ್ರಾ, "ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಈ ವಿಶಿಷ್ಟ ಮಿಷನ್ ಭಾಗವಾಗಲು ನಾನು ತುಂಬಾ ಸಂತೋಷ ಮತ್ತು ಉತ್ಸುಕನಾಗಿದ್ದೇನೆ. ಈ ಅಭಿಯಾನ ಫಿಟ್ನೆಸ್, ಡಯೆಟ್ ಮತ್ತು ನಮ್ಮ ದೈನಂದಿನ ಜೀವನದಲ್ಲಿ ದೈಹಿಕ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು ಹೆಚ್ಚಿನ ಜಾಗೃತಿ ಆಧರಿಸಿದೆ.
ಕ್ರೀಡಾಪಟುಗಳಾದ ನಾವು ಯುವಕರನ್ನು ಆರೋಗ್ಯಕರ ಜೀವನ ನಡೆಸಲು ಪ್ರೇರೇಪಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು. ನಾನು ಶನಿವಾರದಂದು ಸಂಸ್ಕೃತಧಾಮ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ.
ನೀರಜ್ ಚೋಪ್ರಾ ನಂತರ, ತರುಣ್‌ದೀಪ್ ರೈ (ಆರ್ಚರಿ), ಸಾರ್ಥಕ್ ಭಾಂಬ್ರಿ (ಅಥ್ಲೆಟಿಕ್ಸ್), ಸುಶೀಲಾ ದೇವಿ (ಜೂಡೋ), ಕೆಸಿ ಗಣಪತಿ ಮತ್ತು ವರುಣ್ ಠಕ್ಕರ್ (ಸೈಲಿಂಗ್) ಮುಂದಿನ 2 ತಿಂಗಳಲ್ಲಿ ದೇಶದ ಇತರ ಭಾಗಗಳ ಶಾಲೆಗಳಿಗೆ ಭೇಟಿ ನೀಡಲಿದ್ದಾರೆ. ಪ್ಯಾರಾಲಿಂಪಿಯನ್‌ಗಳಾದ ಅವ್ನಿ ಲೆಖರಾ (ಪ್ಯಾರಾ ಶೂಟಿಂಗ್), ಭಾವನಾ ಪಟೇಲ್ (ಪ್ಯಾರಾ ಟೇಬಲ್ ಟೆನಿಸ್) ಮತ್ತು ದೇವೇಂದ್ರ ಜಜಾರಿಯಾ (ಪ್ಯಾರಾ ಅಥ್ಲೆಟಿಕ್ಸ್) ಈ ಅಭಿಯಾನಕ್ಕೆ ಕೈ ಜೋಡಿಸಲಿದ್ದಾರೆ. ಇವರಲ್ಲದೇ ಟೋಕಿಯೋ ಒಲಿಂಪಿಯನ್ಸ್ ಮತ್ತು ಪ್ಯಾರಾಲಿಂಪಿಯನ್ಸ್ ಕೂಡ ಭಾಗವಹಿಸಲಿದ್ದಾರೆ.
ಇದನ್ನೂ ಓದಿ:ಒಂದೆರಡು ದಿನಗಳಲ್ಲಿ ಕೊಹ್ಲಿಯ ODI ನಾಯಕತ್ವದ ಭವಿಷ್ಯ ನಿರ್ಧಾರ