ETV Bharat / sports

Hockey World Cup: ಫೈನಲ್​ ಶೂಟೌಟ್​ನಲ್ಲಿ ಜರ್ಮನಿಗೆ ಗೆಲುವು, ಮೂರನೇ ಬಾರಿಗೆ ಕಪ್​ ಮುಡಿಗೆ

author img

By

Published : Jan 29, 2023, 9:41 PM IST

Updated : Jan 29, 2023, 11:03 PM IST

ಮೂರನೇ ಬಾರಿ ಕಪ್​ ಗೆದ್ದ ಜರ್ಮನಿ - ಹಾಲಿ ಚಾಂಪಿಯನ್​ಗೆ ಸೋಲು - 15ನೇ ಆವೃತ್ತಿಯ ವಿಶ್ವಕಪ್​ ಗೆದ್ದ ಜರ್ಮನ್ನರು.

Hockey World Cup Final
ಮೂರನೇ ಬಾರಿಗೆ ಕಪ್​ ಮುಡಿಗೆ

ಭುವನೇಶ್ವರ(ಒಡಿಶಾ): ಹಾಲಿ ವಿಶ್ವಕಪ್​ ಹಾಗೂ ಒಲಿಂಪಿಕ್​ ಚಾಂಪಿಯನ್​ ಬೆಲ್ಜಿಯಂ ಅನ್ನು ಜರ್ಮನಿ ಸೋಲಿಸುವ ಮೂಲಕ ಮೂರನೇ ಬಾರಿಗೆ ಹಾಕಿ ವಿಶ್ವಕಪ್​ನ್ನು ತನ್ನ ಮುಡಿಗೇರಿಸಿಕೊಂಡಿದೆ. ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ 5-4 ಗೋಲುಗಳಿಂದ ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಸೋಲಿಸಿತು. ಪಂದ್ಯದ ನಿಗದಿತ ಸಮಯದಲ್ಲಿ ಎರಡು ತಂಡಗಳು 3-3 ರಿಂದ ಸಮಬಲ ಸಾಧಿಸಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಒಂದು ಗೋಲ್​ನ ಮುನ್ನಡೆ ಪಡೆದ ಜರ್ಮನಿ ಮೂರನೇ ಬಾರಿ ಕಪ್​ ಗೆದ್ದು ಸಂಭ್ರಮಿಸಿದೆ.

ಭಾನುವಾರ ಭುವನೇಶ್ವರದಲ್ಲಿ ನಡೆದ ಶೂಟೌಟ್‌ನಲ್ಲಿ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು 5-4 ಗೋಲುಗಳಿಂದ ಸೋಲಿಸಿದ ಜರ್ಮನಿ ತನ್ನ ಮೂರನೇ ಪುರುಷರ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿರಾಮದ ವೇಳೆಗೆ 0-2 ಹಿನ್ನಡೆಯಲ್ಲಿದ್ದ ಜರ್ಮನಿ ದ್ವಿತೀಯಾರ್ಧದಲ್ಲಿ ಮೂರು ಗೋಲು ಗಳಿಸಿ 3-2 ಮುನ್ನಡೆ ಸಾಧಿಸಿತು. ಆದಾಗ್ಯೂ, ಬೆಲ್ಜಿಯಂ ಪೆನಾಲ್ಟಿ ಕಾರ್ನರ್‌ನಿಂದ ಸಾಮಾನ್ಯ ಸಮಯದ ಸಮಬಲ ಸಾಧಿಸಿತು. ಪೆನಾಲ್ಟಿ ಶೂಟೌಟ್‌ನಲ್ಲಿ ಜರ್ಮನಿ 5-4 ಗೋಲುಗಳಿಂದ ಮೇಲುಗೈ ಸಾಧಿಸಿತು.

ನಿಗದಿತ ಸಮಯದಲ್ಲಿ ಜರ್ಮನಿ ಪರ ನಿಕ್ಲಾಸ್ ವೆಲೆನ್ (29ನೇ), ಗೊನ್ಜಾಲೊ ಪೆಯ್ಲಾಟ್ (41ನೇ ನಿ) ಮತ್ತು ನಾಯಕ ಮ್ಯಾಟ್ಸ್ ಗ್ರಾಮ್‌ಬುಷ್ (48ನೇ ನಿ) ಗೋಲು ದಾಖಲಿಸಿದರೆ, ಫ್ಲೋರೆಂಟ್ ವ್ಯಾನ್ ಆಬೆಲ್ ಫ್ಲೋರೆಂಟ್ (10ನೇ), ಟ್ಯಾಂಗುಯ್ ಕೊಸಿನ್ಸ್ (11ನೇ) ಮತ್ತು ಟಾಮ್ ಬೂನ್ (59ನೇ) ಬೆಲ್ಜಿಯಂಗೆ ಗೋಲ್​ ಗಳಿಸಿದರು.

ಮೊದಲಾರ್ಧ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಯಿತು. ಐದನೇ ನಿಮಿಷದಲ್ಲಿ ಜರ್ಮನಿಯು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಪಡೆದರೂ ಬೆಲ್ಜಿಯಂ ಡಿಫೆಂಡರ್‌ಗಳು ಆ ಅವಕಾಶಗಳನ್ನು ವಿಫಲಗೊಳಿಸಿದರು. ಬೆಲ್ಜಿಯಂ ತಕ್ಷಣವೇ ಪ್ರತೀಕಾರ ತೀರಿಸಿಕೊಂಡಿತು ಮತ್ತು ವಾನ್ ಆಬೆಲ್ ಫ್ಲೋರೆಂಟ್ ಒಂಬತ್ತನೇ ನಿಮಿಷದಲ್ಲಿ ಅದ್ಭುತ ಫೀಲ್ಡ್ ಗೋಲ್ ಮೂಲಕ ರೆಡ್ ಲಯನ್ಸ್ ಖಾತೆಯನ್ನು ತೆರೆದರು. ಮೊದಲ ಕ್ವಾರ್ಟರ್‌ನ ಕೊನೆಯ ಭಾಗದಲ್ಲಿ ಜರ್ಮನಿ ಪುಟಿದೇಳಲು ಪ್ರಯತ್ನಿಸಿತಾದರೂ ಬೆಲ್ಜಿಯಂ 2-0 ಅಂತರದಲ್ಲಿ ಕೊನೆಗೊಂಡಿತು.

ಎರಡನೇ ಕ್ವಾರ್ಟರ್‌ನಲ್ಲಿಯೂ, ಬೆಲ್ಜಿಯಂ ತನ್ನ ಅಧಿಕಾರವನ್ನು ಅಧಿಪತ್ಯವನ್ನು ಮುಂದುವೆರೆಸಿತು. ಜರ್ಮನಿಗೆ 15 ನೇ ನಿಮಿಷದಲ್ಲಿ ಮೊದಲ ಪೆನಾಲ್ಟಿ ಕಾರ್ನರ್ ಸಿಕ್ಕಿತಾದರೂ ಗೋಲ್​ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. 28ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್‌ಅನ್ನು ಜರ್ಮನಿಯ ನಿಕ್ಲಾಸ್ ವೆಲೆನ್ ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮೊದಲ ಅಂಕ ಗಳಿಸಿದರು. ಮೊದಲಾರ್ಧಕ್ಕೆ 1-2 ರಿಂದ ಜರ್ಮನಿ ಹಿನ್ನಡೆ ಅನುಭವಿಸಿತ್ತು.

ಮೂರನೇ ಕ್ವಾರ್ಟರ್​ನಲ್ಲಿ ಬಿಗುವಿನ ಪಂದ್ಯ ನಡೆಯಿತು. ಎರಡು ತಂಡದ ಆಟಗಾರರ ಉದ್ವೇಗಕ್ಕೆ ಹಸಿರು ಕಾರ್ಡ್​ ತೋರಿಸಲಾಯಿತು. ಈ ನಡುವೆ ಜರ್ಮನಿ 40ನೇ ನಿಮಿಷಲ್ಲಿ ಪೆನಾಲ್ಟಿ ಕಾರ್ನರನ್ನು ಗೋಲ್​ ಮಾಡಿಕೊಂಡಿತು. 47ನೇ ನಿಮಿಷದಲ್ಲಿ ಜರ್ಮನಿ ಮುನ್ನಡೆ (3-2) ಸಾಧಿಸಿತು. ರೆಡ್ ಲಯನ್ಸ್ ತಂಡವು ಸಂಪೂರ್ಣ ಆಕ್ರಮಣಕಾರಿ ಪ್ರವೃತ್ತಿಯೊಂದಿಗೆ 57 ಮತ್ತು 58 ನೇ ನಿಮಿಷದಲ್ಲಿ ಒಟ್ಟು ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಸೃಷ್ಟಿಸಿತು. ಇದರಲ್ಲಿ ಒಂದನ್ನು ಸದುಪಯೋಗ ಪಡಿಸಿಕೊಂಡು 58ನೇ ನಿಮಿಷದಲ್ಲಿ ಗೋಲ್​ ಗಳಿಸಿ 3-3 ರಿಂದ ಪಂದ್ಯ ಟೈ ಆಯಿತು.

ಪಂದ್ಯವು ನಿಗದಿತ ಸಮಯದಲ್ಲಿ 3-3 ರಿಂದ ಕೊನೆಯಾಗಿದ್ದರಿಂದ ಪೆನಾಲ್ಟಿ ಶೂಟ್-ಔಟ್‌ನಲ್ಲಿ ಇಬ್ಬರೂ ತಮ್ಮ ಐದು ಅವಕಾಶಗಳಿಂದ ಮೂರು ಗೋಲುಗಳನ್ನು ಗಳಿಸಿದರು. ಅಂತಿಮವಾಗಿ ಹಠಾತ್ ಗೋಲು ಗಳಿಸಿದ ಜರ್ಮನಿ ಬೆಲ್ಜಿಯಂ ಅನ್ನು ಸೋಲಿಸಿ ಕಪ್​ ಗೆದ್ದುಕೊಂಡಿತು.

ಕಂಚಿನಗೆ ಸಮಾಧಾನ ಪಟ್ಟ ನೆದರ್ಲ್ಯಾಂಡ್ಸ್: ಕಳಿಂಗ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ಲೇ-ಆಫ್ ಪಂದ್ಯದಲ್ಲಿ 3-1 ರಿಂದ ಅಸಾಧಾರಣ ಆಸ್ಟ್ರೇಲಿಯನ್ ತಂಡವನ್ನು ಸೋಲಿಸಿದ ನಂತರ ನೆದರ್ಲ್ಯಾಂಡ್ಸ್ ಮೂರನೇ ಸ್ಥಾನಕ್ಕೆ ಹಾಗೂ ಹಾಕಿ ವಿಶ್ವಕಪ್ 2023 ರಲ್ಲಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿತು.

ಥಿಯೆರಿ ಬ್ರಿಂಕ್‌ಮನ್ (34ನೇ, 39ನೇ ನಿಮಿಷ) ಎರಡು ಗೋಲು ಗಳಿಸಿದರೆ, ಜಿಪ್ ಜಾನ್ಸೆನ್ (32ನೇ ನಿ.) ವಿಜಯಿ ತಂಡದ ಪರ ಮತ್ತೊಂದು ಗೋಲು ಬಾರಿಸಿದರು. ಮತ್ತೊಂದೆಡೆ ಜೆರೆಮಿ ಹೇವಾರ್ಡ್ 12ನೇ ನಿಮಿಷದಲ್ಲಿ ಆಸ್ಟ್ರೇಲಿಯಕ್ಕೆ 1 ಗೋಲ್​ ಗಳಿಸಿದರು. ಮೂರು ಬಾರಿ ಕಪ್ ​ಗೆದ್ದಿದ್ದ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ಇದನ್ನೂ ಓದಿ: AUS Open: ಜೋಕೊವಿಚ್​ ಮುಡಿಗೆ 22ನೇ ಗ್ರಾನ್​ಸ್ಲಾಂ, ನಡಾಲ್​ ದಾಖಲೆ ಸರಿಗಟ್ಟಿದ ನೊವಾಕ್

Last Updated : Jan 29, 2023, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.