ETV Bharat / sports

ಇಂದಿನಿಂದ ಕಾಲ್ಚೆಂಡಿನ ಕ್ವಾರ್ಟರ್ - ಫೈನಲ್: ಪೋರ್ಚುಗಲ್ ಬಿಡುತ್ತಿಲ್ಲ ರೊನಾಲ್ಡೊ ​ - Ronaldo is not leaving Portugal

ಫಿಫಾ ವಿಶ್ವಕಪ್ 2022 ರಲ್ಲಿ ಕೊನೆಯ 16ರ ಘಟ್ಟದ ಪಂದ್ಯಗಳು ಮುಕ್ತಾಯವಾಗಿದೆ. ಈಗ ಈ ಟೂರ್ನಿಯಲ್ಲಿ ಕೇವಲ ಎಂಟು ತಂಡಗಳು ಮಾತ್ರ ಉಳಿದಿವೆ. ಈಗ ಗೆದ್ದ ತಂಡಗಳು ಸೆಮಿಫೈನಲ್ ತಲುಪಲಿವೆ. ಇದೇ ವೇಳೆ ಸೋತ ನಾಲ್ಕು ತಂಡಗಳ ಪಯಣ ಈ ಟೂರ್ನಿಯಲ್ಲಿ ಕೊನೆಗೊಳ್ಳಲಿದೆ.

Fdgfhgfjghfifa-world-cup-quarter-final-ronaldo-is-not-leaving-portugal
czcvzsdvಇಂದಿನಿಂದ ಕಾಲ್ಚೆಂಡಿನ ಕ್ವಾರ್ಟರ್-ಫೈನಲ್: ಪೋರ್ಚುಗಲ್ ಬಿಡುತ್ತಿಲ್ಲ ರೊನಾಲ್ಡೊ ​
author img

By

Published : Dec 9, 2022, 1:35 PM IST

ದೋಹಾ(ಕತಾರ್​): ಪೋರ್ಚುಗಲ್ ಪ್ರಿ ಕ್ವಾರ್ಟರ್-ಫೈನಲ್​ ಪಂದ್ಯದಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ತಂಡದಿಂದ ಹೊರಗಿಟ್ಟಿತ್ತು. ಇದಾದ ನಂತರ ರೊನಾಲ್ಡೊ ಅವರು ರಾಷ್ಟ್ರೀಯ ತಂಡವನ್ನು ತ್ಯಜಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಈ ಸುದ್ದಿಯನ್ನು ಪೋರ್ಚುಗಲ್ ಫುಟ್‌ಬಾಲ್ ಫೆಡರೇಶನ್ ತಳ್ಳಿಹಾಕಿದೆ.

ರೊನಾಲ್ಡೊ ಪೋರ್ಚುಗಲ್‌ನ ಪರವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. ಸ್ವಿಟ್ಜರ್ಲೆಂಡ್ ವಿರುದ್ಧದ ಅವರ ಮೊದಲ ನಾಕೌಟ್ ಪಂದ್ಯಕ್ಕೆ ವಿಶ್ರಾಂತಿ ನೀಡಲಾಯಿತು. ರೊನಾಲ್ಡೊ ಬದಲಿ ಆಟಗಾರನಾಗಿ ಗೊನ್ಕಾಲೊ ರಾಮೋಸ್ ಅವರನ್ನು ಕಣಕ್ಕಿಳಿಸಲಾಗಿತ್ತು. ಈ ಪಂದ್ಯದಲ್ಲಿ ಪೋರ್ಚುಗಲ್‌ 6-1ರಿಂದ ಗೆದ್ದರು. ರಾಮೋಸ್ ಹ್ಯಾಟ್ರಿಕ್​ ಗೋಲ್​ನ್ನು ತಂಡಕ್ಕೆ ನೀಡಿ ಗೆಲುವಿಗೆ ಪಾತ್ರರಾದರು.

ಇಂದಿನಿಂದ ಕ್ವಾರ್ಟರ್-ಫೈನಲ್: ಫಿಫಾ ವಿಶ್ವಕಪ್ 2022 ರಲ್ಲಿ ಕೊನೆಯ 16 ಪಂದ್ಯಗಳು ಮುಕ್ತಾಯವಾಗಿದೆ. ಈಗ ಈ ಟೂರ್ನಿಯಲ್ಲಿ ಕೇವಲ ಎಂಟು ತಂಡಗಳು ಮಾತ್ರ ಉಳಿದಿವೆ. ಈಗ ಗೆದ್ದ ತಂಡಗಳು ಸೆಮಿಫೈನಲ್ ತಲುಪಲಿವೆ. ಇದೇ ವೇಳೆ, ಸೋತ ನಾಲ್ಕು ತಂಡಗಳ ಪಯಣ ಈ ಟೂರ್ನಿಯಲ್ಲಿ ಕೊನೆಗೊಳ್ಳಲಿದೆ.

ಎಂಟು ತಂಡಗಳ ವಿಶೇಷತೆ:

ಅರ್ಜೆಂಟೀನಾ: ಅರ್ಜೆಂಟೀನಾ ತಂಡ ಈ ಬಾರಿಯ ವಿಶ್ವಕಪ್‌ನ ಅತ್ಯಂತ ನೆಚ್ಚಿನ ತಂಡವಾಗಿದೆ. ಅರ್ಜೆಂಟೀನಾ ತಂಡವು ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಜಯಗಳಿಸುವ ಮೂಲಕ ಕ್ವಾರ್ಟರ್-ಫೈನಲ್ ಟಿಕೆಟ್ ಅನ್ನು ಖಚಿತಪಡಿಸಿತು. ಕಳೆದ ವಿಶ್ವಕಪ್‌ನಿಂದ ನಾಯಕ ಲಿಯೋನೆಲ್ ಮೆಸ್ಸಿ ಅವರ ಪ್ರದರ್ಶನಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಮೆಸ್ಸಿ ಈ ವಿಶ್ವಕಪ್‌ನಲ್ಲಿ ಇದುವರೆಗೆ ಮೂರು ಗೋಲುಗಳನ್ನು ಗಳಿಸಿದ್ದಾರೆ. ಮೆಸ್ಸಿಯನ್ನು ಹೊರತುಪಡಿಸಿ, ಅರ್ಜೆಂಟೀನಾ ತಂಡವು ಅಲೆಕ್ಸಿಸ್ ಮೆಕ್‌ಅಲಿಸ್ಟರ್, ಎಂಜೊ ಫೆರ್ನಾಂಡಿಸ್ ಮತ್ತು ಜೂಲಿಯನ್ ಅಲ್ವಾರೆಜ್ ಅವರಂತಹ ಆಟಗಾರರನ್ನು ಹೊಂದಿದೆ. ಅವರ ಮೇಲು ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಯನ್ನು ಇಟ್ಟಿದ್ದಾರೆ.

ಬ್ರೆಜಿಲ್: ಕ್ವಾರ್ಟರ್ ಫೈನಲ್‌ನ ಮೊದಲ ಪಂದ್ಯ ಇಂದು ನಡೆಯಲಿದೆ. ಇದರಲ್ಲಿ ಕ್ರೊವೇಷಿಯಾ ಮತ್ತು ಬ್ರೆಜಿಲ್ ತಂಡಗಳು ಸೆಣಸಲಿವೆ. ಬ್ರೆಜಿಲ್ ತಂಡವು ನೇಮರ್, ರಿಚರ್ಡ್ಸನ್ ಮತ್ತು ವಿನಿಸಿಯಸ್ ಜೂನಿಯರ್ ಅವರಂತಹ ಗೋಲ್​ಗಳಿಸುವ ಸ್ಟಾರ್​ ಆಟಗಾರರಾಗಿದ್ದಾರೆ. ಫಿಫಾ ವಿಶ್ವಕಪ್‌ನ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಬ್ರೆಜಿಲ್ 4-1 ಗೋಲುಗಳಿಂದ ದಕ್ಷಿಣ ಕೊರಿಯಾವನ್ನು ಸೋಲಿಸಿತು.

ನಾಲ್ಕು ಗೋಲುಗಳನ್ನು ಮೊದಲಾರ್ಧದಲ್ಲೇ ಬ್ರೆಜಿಲ್ ಗಳಿಸಿತು. ಮೊದಲಾರ್ಧದಲ್ಲಿ ಬ್ರೆಜಿಲ್ ಎರಡನೇ ಬಾರಿಗೆ ನಾಲ್ಕು ಗೋಲುಗಳನ್ನು ಗಳಿಸಿದ ದಾಖಲೆ ಮಾಡಿತು. ಇದಕ್ಕೂ ಮುನ್ನ ಬ್ರೆಜಿಲ್ 1954ರಲ್ಲಿ ಮೆಕ್ಸಿಕೊ ವಿರುದ್ಧ ಈ ಸಾಧನೆ ಮಾಡಿತ್ತು.

ಕ್ರೊಯೇಷಿಯಾ: ಕಳೆದ ಫಿಫಾ ವಿಶ್ವಕಪ್‌ನ ರನ್ನರ್ ಅಪ್ ಕ್ರೊಯೇಷಿಯಾ ಇಂದು ಬ್ರೆಜಿಲ್​ನೊಂದಿಗೆ ಸೆಣಸುತ್ತಿದೆ. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೋಲ್​ ಗಳಿಸಿ ಜಪಾನ್ ತಂಡವನ್ನು ಸೋಲಿಸಿತು. ತಂಡದ ಸ್ಟಾರ್ ಆಟಗಾರ ಲೂಕಾ ಮಾಡ್ರಿಕ್ ಗೋಲ್​ ಗಳಿಸುವ ಒತ್ತಡದಲ್ಲಿದ್ದಾರೆ. ಅವರಿಗೆ ಇವಾನ್ ಪೆರಿಸಿಕ್ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಈ ಬಾರಿ ಕ್ರೊವೇಷಿಯಾ ತಂಡ 2018ರ ಫೈನಲ್ ತಲುಪಿದ ತಂಡದಂತೆ ಆಟವನ್ನು ಗೆಲ್ಲುತ್ತಾ ಬಂದಿದೆ. ಈ ಬಾರಿಯೂ ಫೈನಲ್​ ಏರುತ್ತಾ ಎಂಬ ಕುತೂಹಲ ಇದೆ.

ಇಂಗ್ಲೆಂಡ್: ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊನೆಯ ಪಂದ್ಯ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೂ ಅತ್ಯಂತ ಮಹತ್ವದ್ದಾಗಿದೆ. 1966ರ ನಂತರ ಟ್ರೋಫಿ ಗೆಲ್ಲುವ ಅವಕಾಶವನ್ನು ಇಂಗ್ಲೆಂಡ್ ನಿರ್ಮಿಸಿಕೊಂಡಿದೆ. ಕೊನೆಯ-16 ರಲ್ಲಿ ಸೆನೆಗಲ್ ಅನ್ನು ಸೋಲಿಸುವ ಮೂಲಕ ತಂಡವು ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್, ಜೋರ್ಡಾನ್ ಹೆಂಡರ್ಸನ್, ಬುಕಾಯೊ ಸಕಾ ಮತ್ತು ಫಿಲ್ ಫೋಡೆನ್ ಸ್ಥಿರವಾಗಿ ಆಡುತ್ತಿದ್ದಾರೆ.

ಫ್ರಾನ್ಸ್: ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಕ್ವಾರ್ಟರ್-ಫೈನಲ್​ನ ಕೊನೆ ಪಂದ್ಯ ಇದಾದ್ದರಿಂದ ಯಾರು ಸೆಮಿಸ್​ ಆಡುತ್ತಾರೆ ಎಂಬುದು ನಿರ್ಣಯ ಆಗುವ ಪಂದ್ಯವಾಗಿರುತ್ತದೆ. ಸೆಮಿಫೈನಲ್ ತಲುಪಬೇಕಾದರೆ ಹಾಲಿ ಚಾಂಪಿಯನ್ ಫ್ರಾನ್ಸ್ ಇಂಗ್ಲೆಂಡ್ ತಂಡವನ್ನು ಸೋಲಿಸಲೇಬೇಕು. ಈ ವಿಶ್ವಕಪ್‌ನಲ್ಲಿ ಹೆಚ್ಚು ಗೋಲ್ (5) ಗಳಿಸಿರುವ ಕೈಲಿಯನ್ ಎಂಬಪ್ಪೆ ಫ್ರಾನ್ಸ್​ನ ಬಲ. ಇವರೊಂದಿಗೆ ಒಸ್ಮಾನ್ ಡೆಂಬೆಲೆ, ಆಂಟೊನಿ ಗ್ರೀಜ್‌ಮನ್ ಮತ್ತು ಒಲಿವಿಯರ್ ಗಿರೌಡ್ ಅವರನ್ನು ಸಹ ಒಳಗೊಂಡಿದೆ.

ಮೊರಾಕೊ: ಮೊರಾಕ್ಕೊ ಪೆನಾಲ್ಟಿ ಶೂಟೌಟ್‌ನಲ್ಲಿ 3-0 ಗೋಲ್​ ಗಳಿಸಿ ಸ್ಪೇನ್ ಅನ್ನು ಸೋಲಿಸಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಮೊರಾಕೊ ಪರ ಅಬ್ದೆಲ್‌ಹಮಿದ್ ಸಬಿರಿ, ಹಕಿಮ್ ಝೀಚ್ ಮತ್ತು ಅಶ್ರಫ್ ಹಕಿಮಿ ಗೋಲು ಗಳಿಸಿದರು. ಸ್ಪೇನ್ ಸೋಲಿಸಿದ ಪಂದ್ಯ ಮೊರಾಕೊಗೆ ಆತ್ಮಸ್ಥೈರ್ಯ ಹೆಚ್ಚಿಸಿದೆ.

ನೆದರ್ಲ್ಯಾಂಡ್ಸ್: ಕೊನೆಯ-16 ರಲ್ಲಿ, ನೆದರ್ಲ್ಯಾಂಡ್ಸ್ ಯುಎಸ್ಎ ತಂಡವನ್ನು 3-1 ರಿಂದ ಸೋಲಿಸುವ ಮೂಲಕ ಕ್ವಾರ್ಟರ್-ಫೈನಲ್ ಪ್ರವೇಶಿಸಿತು. ಸೆಮಿಸ್​ಗೆ ಹೋಗಲು ನೆದರ್ಲೆಂಡ್ಸ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವನ್ನು ಸೋಲಿಸಬೇಕಾಗಿದೆ. ಕತಾರ್‌ನಲ್ಲಿ ಇಲ್ಲಿಯವರೆಗೆ ಡಚ್ಚರು ಬಹಳ ಪ್ರಬಲರಾಗಿದ್ದಾರೆ. ಎ ಗುಂಪಿನಲ್ಲಿ ಅಗ್ರಸ್ಥಾನಿ ಮತ್ತು ಅಮೆರಿಕವನ್ನು ಸೋಲಿಸಿದ ನಂತರ, ಕೋಚ್ ಲೂಯಿಸ್ ವ್ಯಾನ್ ಗಾಲ್ ಅವರು ಮುಂದಿನ ಪಂದ್ಯಗಳನ್ನು ಗೆಲ್ಲುವ ಭರವಸೆ ನೀಡಿದ್ದಾರೆ. ನೆದರ್ಲ್ಯಾಂಡ್ಸ್ ವರ್ಜಿಲ್ ವ್ಯಾನ್ ಡಿಜ್ಕ್ ಅವರಂತಹ ಸ್ಟಾರ್ ಡಿಫೆಂಡರ್ ಅನ್ನು ಹೊಂದಿದೆ.

ಪೋರ್ಚುಗಲ್: ರೊನಾಲ್ಡೊ ನಾಯಕತ್ವದ ಪೋರ್ಚುಗಲ್ ಸೆಮಿಫೈನಲ್ ಟಿಕೆಟ್‌ಗಾಗಿ ಮೊರಾಕೊವನ್ನು ಸೋಲಿಸಬೇಕಾಗಿದೆ. ಕೊನೆಯ-16 ರಲ್ಲಿ ಪೋರ್ಚುಗಲ್ 6-1 ರಲ್ಲಿ ಸ್ವಿಟ್ಜರ್ಲೆಂಡ್ ಅನ್ನು ಸೋಲಿಸಿತ್ತು. ಪೋರ್ಚುಗಲ್ ತಂಡವು 16 ವರ್ಷಗಳ ನಂತರ ಅಂದರೆ 2006 ರ ನಂತರ ಕ್ವಾರ್ಟರ್ ಫೈನಲ್ ತಲುಪಿದೆ. ಸ್ವಿಟ್ಜರ್ಲೆಂಡ್ ವಿರುದ್ಧದ ಆರಂಭಿಕ ಹನ್ನೊಂದರಲ್ಲಿ ರೊನಾಲ್ಡೊ ಅವರನ್ನು ಆಡಿಸಿರಲ್ಲಿಲ್ಲ, ಬದಲಿಯಾಗಿ ಗೊನ್ಕಾಲೊ ರಾಮೋಸ್ ಸ್ಥಾನ ನೀಡಲಾಗಿತ್ತು. ಅವರು ಪ್ರಿ ಕ್ವಾರ್ಟರ್-ಫೈನಲ್​ನಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿ ಸಂಚಲನ ಮೂಡಿಸಿದ್ದರು. ರೊನಾಲ್ಡೊ ಮತ್ತು ರೊಮೊಸ್ ಹೊರತುಪಡಿಸಿ, ತಂಡವು ಜೋವೊ ಫೆಲಿಕ್ಸ್ ಮತ್ತು ಬರ್ನಾರ್ಡೊ ಸಿಲ್ವಾ ಅವರನ್ನು ನೆಚ್ಚಿಕೊಂಡಿದೆ.

ಕ್ವಾರ್ಟರ್ ಫೈನಲ್ ಪಂದ್ಯದ ವೇಳಾಪಟ್ಟಿ: (ಭಾರತೀಯ ಕಾಲಮಾನ)

9 ಡಿಸೆಂಬರ್ 8:30 PM ಕ್ರೊಯೇಷಿಯಾ vs ಬ್ರೆಜಿಲ್.

10 ಡಿಸೆಂಬರ್ 12:30 AM ನೆದರ್ಲ್ಯಾಂಡ್ಸ್ vs ಅರ್ಜೆಂಟೀನಾ.

10 ಡಿಸೆಂಬರ್ 8:30 PM ಮೊರಾಕೊ vs ಪೋರ್ಚುಗಲ್.

11 ಡಿಸೆಂಬರ್ 12:30 AM ಇಂಗ್ಲೆಂಡ್ vs ಫ್ರಾನ್ಸ್.

ಇದನ್ನೂ ಓದಿ: ಬ್ರೆಜಿಲಿಯನ್ ಸಂಸ್ಕೃತಿ ಮುಂದುವರಿಸ ಬಯಸುತ್ತೇವೆ: ಬ್ರೆಜಿಲ್ ಕೋಚ್ ಟೈಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.