ETV Bharat / sports

ಫಿಫಾ ವಿಶ್ವಕಪ್‌: ಡೆನ್ಮಾರ್ಕ್ ಸೋಲಿಸಿ ನಾಕೌಟ್ ತಲುಪಿದ ಮೊದಲ ತಂಡ ಫ್ರಾನ್ಸ್​

author img

By

Published : Nov 27, 2022, 9:16 AM IST

ಡೆನ್ಮಾರ್ಕ್ ವಿರುದ್ಧ 2-1 ಗೋಲುಗಳಿಂದ ಪಂದ್ಯ ಗೆದ್ದ ಬಲಿಷ್ಠ ಫ್ರಾನ್ಸ್‌ ಫಿಫಾ ವಿಶ್ವಕಪ್​ನ ನಾಕೌಟ್ ಹಂತ ಪ್ರವೇಶಿಸಿತು.

FIFA World Cup: Denmark lost against France
ಫಿಫಾ ವಿಶ್ವಕಪ್​: ಫ್ರಾನ್ಸ್ ವಿರುದ್ಧ ಡೆನ್ಮಾರ್ಕ್ ಸೋಲು

ದೋಹಾ(ಕತಾರ್): ಫ್ರಾನ್ಸ್​​ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 4-1 ಗೋಲುಗಳ ಅಂತರದಿಂದ ಗೆದ್ದು ಬೀಗಿದ ಬಳಿಕ ತನ್ನ ಓಟ ಮುಂದುವರೆಸಿದೆ. ನಿನ್ನೆ ಡೆನ್ಮಾರ್ಕ್ ವಿರುದ್ಧದ ಪಂದ್ಯವನ್ನು 2-1 ರಿಂದ ಕೈವಶ ಮಾಡಿಕೊಂಡು ಇದೀಗ ಫಿಫಾ ವಿಶ್ವಕಪ್​ನ ನಾಕೌಟ್ ಹಂತಕ್ಕೆ ಲಗ್ಗೆ ಇಟ್ಟಿತು. ಗೆಲುವಿಗಾಗಿ ಜಿದ್ದಾಜಿದ್ದಿನಲ್ಲಿ ಎರಡೂ ತಂಡಗಳು ಹೋರಾಡಿದವು. ಆದರೆ ಅಂತಿಮವಾಗಿ ಫ್ರಾನ್ಸ್​ ಗೆಲುವಿನ ಕೇಕೆ ಹಾಕಿತು.

ಕರೀಮ್ ಬೆಂಜೆಮಾ ಕಾಲಿನ ಗಾಯದಿಂದಾಗಿ ಪಂದ್ಯದಿಂದ ಹೊರಗುಳಿದ ಕಾರಣ ಕೈಲಿಯನ್​ ಎಂಬಪ್ಪೆ ಫ್ರಾನ್ಸ್​ ತಂಡವನ್ನು ಮುನ್ನಡಿಸಿದರು. ಮೊದಲಾರ್ಧದಲ್ಲಿ ಎರಡೂ ತಂಡಗಳು ಗೋಲು ಗಳಿಸಲಿಲ್ಲ. ನಂತರ ರಣೋತ್ಸಾಹದಿಂದ ಮುನ್ನುಗ್ಗಿದ ಕೈಲಿಯನ್​ ಎಂಬಪ್ಪೆ 61 ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಆಟ ಸಾಗುತ್ತಿದಂತೆ ಡೆನ್ಮಾರ್ಕ್ ಡಿಫೆಂಡರ್ ಆಂಡ್ರಿಯಾಸ್ ಕ್ರಿಸ್ಟೇನ್ಸನ್ 68ನೇ ನಿಮಿಷದಲ್ಲಿ ಹೆಡರ್​ ಮೂಲಕ ಗೋಲು ಗಳಿಸಿ ತಂಡಕ್ಕೆ 1-1 ರಿಂದ ಸಮಬಲ ಸಾಧಿಸಿದರು.

ಚೆಂಡಿನ ಮೇಲೆ ಬಿಗಿ ಹಿಡಿತ ಸಾಧಿಸಿದ ​ಎಂಬಪ್ಪೆ 86ನೇ ನಿಮಿಷದಲ್ಲಿ ಡೆನ್ಮಾರ್ಕ್‌ನ ಗೋಲ್‌ಕೀಪರ್ ಕ್ಯಾಸ್ಪರ್ ಸ್ಮಿಚೆಲ್‌ ತಪ್ಪಿಸಿ ಮತ್ತೊಂದು ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು. ಇದಾದ ನಂತರ ಫ್ರಾನ್ಸ್‌ 2-1 ರಿಂದ ಮುನ್ನಡೆಯಲ್ಲಿ ಸಾಗಿ ಗೆಲುವು ಪಡೆಯಿತು.

ಇದನ್ನೂ ಓದಿ: ಫಿಫಾ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಬಗ್ಗುಬಡಿದ ಹಾಲಿ ಚಾಂಪಿಯನ್‌ ಫ್ರಾನ್ಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.