ದೋಹಾ(ಕತಾರ್): ಕತಾರ್ನಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಫ್ರಾನ್ಸ್ ಗೆಲ್ಲುವ ಮೂಲಕ ಸೆಮಿಫೈನಲ್ ತಂಡಗಳು ಯಾವೆಂಬ ನಿಖರತೆ ಹೊರಬಿದ್ದಿದೆ. ಈಗಾಗಲೇ ಅರ್ಜೆಂಟೀನಾ, ಕ್ರೊವೇಷಿಯಾ ಮೊದಲೆರಡು ತಂಡಗಳಾಗಿ ಎಂಟ್ರಿ ಕೊಟ್ಟಿದ್ದರೆ, ನಿನ್ನೆ ರಾತ್ರಿ ನಡೆದ ಪಂದ್ಯಗಳಲ್ಲಿ ಗೆದ್ದ ಮೊರಾಕ್ಕೊ, ಫ್ರಾನ್ಸ್ ಸೆಮೀಸ್ಗೆ ತಲುಪಿವೆ.
ಸೆಮೀಸ್ ತಲುಪಿದ ಮೊದಲ ತಂಡವಾದ ಅರ್ಜೆಂಟೀನಾ ಕ್ರೊವೇಷಿಯಾ ವಿರುದ್ಧ ಡಿಸೆಂಬರ್ 14 ರಂದು ನಡೆಯುವ ಮೊದಲ ಹೋರಾಟದಲ್ಲಿ ಸೆಣಸಾಡಿದರೆ, ಮರುದಿನ ನಡೆಯುವ ಎರಡನೇ ಸೆಮೀಸ್ನಲ್ಲಿ ಫ್ರಾನ್ಸ್ ಮತ್ತು ಮೊರಾಕ್ಕೊ ಅಂತಿಮ ಸುತ್ತಿಗಾಗಿ ಸೆಣಸಾಡಲಿವೆ.
ಕ್ವಾರ್ಟರ್ಫೈನಲ್ನ ಮೊದಲೆರಡು ಪಂದ್ಯಗಳಲ್ಲಿ ಪೈಪೋಟಿ ನಡೆಸಿದ ಕ್ರೊವೇಷಿಯಾ ಮತ್ತು ಬ್ರೆಜಿಲ್, ಅರ್ಜೆಂಟೀನಾ ಮತ್ತು ನೆದರ್ಲ್ಯಾಂಡ್ಸ್ ಪಂದ್ಯಗಳು ಪೆನಾಲ್ಟಿ ಕಾರ್ನರ್ ಮೂಲಕ ಫಲಿತಾಂಶ ಪಡೆದರೆ, ಮೊರಾಕ್ಕೊ-ಪೋರ್ಚುಗಲ್, ಇಂಗ್ಲೆಂಡ್-ಫ್ರಾನ್ಸ್ ತಂಡಗಳು ನಿಗದಿತ ಸಮಯದಲ್ಲೇ ಗೆಲ್ಲುವ ಮೂಲಕ ನೇರವಾಗಿ ಅರ್ಹತೆ ಪಡೆದಿವೆ.
-
The final four teams are set! 🇦🇷🇭🇷🇫🇷🇲🇦#FIFAWorldCup | #Qatar2022
— FIFA World Cup (@FIFAWorldCup) December 10, 2022 " class="align-text-top noRightClick twitterSection" data="
">The final four teams are set! 🇦🇷🇭🇷🇫🇷🇲🇦#FIFAWorldCup | #Qatar2022
— FIFA World Cup (@FIFAWorldCup) December 10, 2022The final four teams are set! 🇦🇷🇭🇷🇫🇷🇲🇦#FIFAWorldCup | #Qatar2022
— FIFA World Cup (@FIFAWorldCup) December 10, 2022
ತಂಡಗಳ ಬಲಾಬಲ: ಕೊನೆಯ ವಿಶ್ವಕಪ್ ಆಡುತ್ತಿರುವ ವಿಶ್ವಶ್ರೇಷ್ಠ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಮೊದಲ ಪಂದ್ಯದಲ್ಲೇ ಸೌದಿ ಅರೇಬಿಯಾ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿತು. ಬಳಿಕ ಪುಟಿದೆದ್ದ ತಂಡ ನಂತರದ ಎಲ್ಲ ಪಂದ್ಯಗಳಲ್ಲಿ ಪಾರಮ್ಯ ಮೆರೆದು ಸೆಮೀಸ್ ಪ್ರವೇಶಿಸಿತು. ಇನ್ನು, ಪ್ರಬಲ ಹೋರಾಟ ನಡೆಸಿದ ಕ್ರೊವೇಷಿಯಾ ಗುಂಪು ಹಂತದಿಂದಲೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಇದು ಅರ್ಜೆಂಟೀನಾಗೆ ಎಚ್ಚರಿಕೆಯ ಗಂಟೆಯೂ ಹೌದು.
ಕ್ರಿಶ್ಚಿಯಾನೊ ರೊನಾಲ್ಡೊ ನೇತೃತ್ವದ ಬಲಿಷ್ಠ ಪಡೆಯನ್ನು ಗೆದ್ದ ಹುಮ್ಮಸ್ಸಿನಲ್ಲಿರುವ ಮೊರಾಕ್ಕೊ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಇದು ಉಭಯ ತಂಡಗಳ ಮೊದಲ ಸೆಮಿಫೈನಲ್ ಮುಖಾಮುಖಿಯಾಗಿದೆ. ಇಲ್ಲಿ ಗೆದ್ದ ತಂಡಗಳು ಫೈನಲ್ನಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.
ಫಿಫಾ ವಿಶ್ವಕಪ್‌ನ ಎರಡು ಸೂಪರ್ ಪವರ್‌ಗಳಾದ ಬ್ರೆಜಿಲ್ ಮತ್ತು ಇಂಗ್ಲೆಂಡ್ ಟೂರ್ನಿಯಿಂದ ಈಗಾಗಲೇ ಹೊರಬಿದ್ದಿವೆ. ಬ್ರೆಜಿಲ್‌ನ ಸೋಲು ಆಟಗಾರರು, ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದರೆ, ಇಂಗ್ಲೆಂಡ್ ದ್ವಿತೀಯಾರ್ಧದಲ್ಲಿ ಸಿಕ್ಕ ಪೆನಾಲ್ಟಿಯನ್ನು ಗೋಲಾಗಿ ಪರಿವರ್ತಿಸದೇ ಟೂರ್ನಿಯಿಂದ ಹೊರಬಿತ್ತು.
ವಿವಿಧ ಕಾರಣಕ್ಕೆ ಫಿಫಾಗೆ ದೂರು: ಟೂರ್ನಿಯಲ್ಲಿ ಕೆಲವು ದೂರುಗಳೂ ಕೇಳಿಬಂದಿವೆ. ಮೈದಾನದ ರೆಫ್ರಿಗಳ ವಿರುದ್ಧ ತಂಡಗಳು ಆರೋಪಗಳನ್ನು ಮಾಡಿವೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅತಿಹೆಚ್ಚು ಕಾರ್ಡ್ಗಳನ್ನು ಪಡೆದ ಅರ್ಜೆಂಟೀನಾ, ಪಕ್ಷಪಾತ ಧೋರಣೆ ಮಾಡಿದ ಆರೋಪ ಮಾಡಿರುವ ಪೋರ್ಚುಗಲ್ ಹಾಗು ಗೋಲಿನ ವಿವಾದಕ್ಕಾಗಿ ಇಂಗ್ಲೆಂಡ್ ಫಿಫಾಗೆ ದೂರು ಸಲ್ಲಿಸಿವೆ.
ಇದನ್ನೂ ಓದಿ: ಪೋರ್ಚುಗಲ್ ಮಣಿಸಿ ಸೆಮೀಸ್ ತಲುಪಿದ ಮೊರಾಕ್ಕೊ; ವಿಶ್ವಕಪ್ ಗೆಲ್ಲದೇ ರೊನಾಲ್ಡೊ ನಿವೃತ್ತಿ?