ಹೈದರಾಬಾದ್: 2000 ಮತ್ತು 2002 ರಲ್ಲಿ ಭಾರತಕ್ಕೆ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಚೆಸ್ ವಿಶ್ವಕಪ್ ಪ್ರಶಸ್ತಿ ಗೆದ್ದಿದ್ದರು. ಎರಡು ದಶಕಗಳ ನಂತರ ಫಿಡೆ ಚೆಸ್ ವಿಶ್ವಕಪ್ ಫೈನಲ್ಗೆ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಪ್ರವೇಶ ಪಡೆದಿದ್ದಾರೆ. ಫೈನಲ್ನಲ್ಲಿ ಇದೀಗ ಐದು ಬಾರಿಯ ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರೊಂದಿಗೆ ಆಡುತ್ತಿದ್ದಾರೆ. ಫೈನಲ್ ಪೈಪೋಟಿ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4:30ಕ್ಕೆ ಆರಂಭವಾಗಿದ್ದು, ಅಜರ್‌ಬೈಜಾನ್ ದೇಶದ ರಾಜಧಾನಿ ಬಾಕುವಿನಲ್ಲಿ ನಡೆಯುತ್ತಿದೆ.
-
Magnus Carlsen or Praggnanandhaa?
— International Chess Federation (@FIDE_chess) August 22, 2023 " class="align-text-top noRightClick twitterSection" data="
World #1 or Indian prodigy?
Who will be the winner of the 2023 #FIDEWorldCup?
The final starts at 13:00 CEST.
Tune in 👉 🔗 https://t.co/QFOcXYYqdn
📷 Anna Shtourman & Maria Emelianova pic.twitter.com/cefTU8c2zm
">Magnus Carlsen or Praggnanandhaa?
— International Chess Federation (@FIDE_chess) August 22, 2023
World #1 or Indian prodigy?
Who will be the winner of the 2023 #FIDEWorldCup?
The final starts at 13:00 CEST.
Tune in 👉 🔗 https://t.co/QFOcXYYqdn
📷 Anna Shtourman & Maria Emelianova pic.twitter.com/cefTU8c2zmMagnus Carlsen or Praggnanandhaa?
— International Chess Federation (@FIDE_chess) August 22, 2023
World #1 or Indian prodigy?
Who will be the winner of the 2023 #FIDEWorldCup?
The final starts at 13:00 CEST.
Tune in 👉 🔗 https://t.co/QFOcXYYqdn
📷 Anna Shtourman & Maria Emelianova pic.twitter.com/cefTU8c2zm
ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಸೆಮಿಫೈನಲ್ನಲ್ಲಿ ಟೈಬ್ರೇಕ್ ಪಂದ್ಯದಲ್ಲಿ 3.5 - 2.5 ಅಂಕಗಳಿಂದ ವಿಶ್ವದ 3ನೇ ಶ್ರೇಯಾಂಕಿತ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದ್ದರು. ಈ ಮೂಲಕ 21 ವರ್ಷದ ಬಳಿಕ ಫಿಡೆ ಚೆಸ್ ವಿಶ್ವಕಪ್ ಫೈನಲ್ನಲ್ಲಿ ಸ್ಥಾನ ಪಡೆದ ಭಾರತೀಯ ಆಟಗಾರ ಎಂಬ ಖ್ಯಾತಿ ಗಳಿಸಿದ್ದಾರೆ.
ಚೆಸ್ ಚತುರ ಪ್ರಜ್ಞಾನಂದ ಸೆಮಿಫೈನಲ್ನಲ್ಲಿ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರನ್ನು ಎದುರಿಸಿದ್ದರು. ಶನಿವಾರ ಮತ್ತು ಭಾನುವಾರ ನಡೆದ ಎರಡು ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದರು. ಸೋಮವಾರ ನಡೆದ ಟೈ ಬ್ರೇಕರ್ನಲ್ಲಿ 25 ನಿಮಿಷದ ಎರಡು ಗೇಮ್ ಆಡಿಸಲಾಯಿತು. ಪಂದ್ಯ ಡ್ರಾ ಆದ ಕಾರಣ 10 ನಿಮಿಷದ ಮತ್ತೆರಡು ಗೇಮ್ ಆಡಿಸಲಾಯಿತು. 10 ನಿಮಿಷದ ಮೊದಲ ಗೇಮ್ನಲ್ಲಿ ಚಾಣಾಕ್ಷ ನಡೆಯಿಂದ ಮೂರನೇ ಶ್ರೇಯಾಂಕಿತ ಆಟಗಾರನನ್ನು ಮಣಿಸಿದರು. ಎರಡನೇ ಆಟದಲ್ಲಿ ಫ್ಯಾಬಿಯಾನೊ ಕರುವಾನಾಗೆ ಗೆಲ್ಲಲು ಅವಕಾಶ ಮಾಡಿಕೊಡದೇ ಡ್ರಾ ಸಾಧಿಸಿದರು. ಇದರಿಂದ ಫೈನಲ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
-
Congrats to @rpragchess—and to his mother. As someone whose proud mama accompanied me to every event, it's a special kind of support! The Chennai Indian defeated two New York cowboys! He has been very tenacious in difficult positions. https://t.co/y8oJ6Z446M
— Garry Kasparov (@Kasparov63) August 21, 2023 " class="align-text-top noRightClick twitterSection" data="
">Congrats to @rpragchess—and to his mother. As someone whose proud mama accompanied me to every event, it's a special kind of support! The Chennai Indian defeated two New York cowboys! He has been very tenacious in difficult positions. https://t.co/y8oJ6Z446M
— Garry Kasparov (@Kasparov63) August 21, 2023Congrats to @rpragchess—and to his mother. As someone whose proud mama accompanied me to every event, it's a special kind of support! The Chennai Indian defeated two New York cowboys! He has been very tenacious in difficult positions. https://t.co/y8oJ6Z446M
— Garry Kasparov (@Kasparov63) August 21, 2023
ಶುಭ ಕೋರಿದ ರಷ್ಯಾದ ಗ್ರ್ಯಾಂಡ್ ಮಾಸ್ಟರ್: ರಷ್ಯಾದ ಗ್ರ್ಯಾಂಡ್ ಮಾಸ್ಟರ್ ಗ್ಯಾರಿ ಕಾಸ್ಪರೋವ್ ಪ್ರಜ್ಞಾನಂದಗೆ ತಮ್ಮ ಎಕ್ಸ್ ಆ್ಯಪ್ ಅಕೌಂಟ್ನಲ್ಲಿ ಶುಭಾಶಯ ತಿಳಿಸಿದ್ದಾರೆ. "ಪ್ರಜ್ಞಾನಂದ ಮತ್ತು ಅವರ ತಾಯಿಗೆ ಶುಭಾಶಯಗಳು. ಪ್ರತಿ ಪಂದ್ಯಕ್ಕೂ ಅವನ ಜೊತೆಗಿರುವ ಹೆಮ್ಮೆಯ ಅಮ್ಮ. ಇದು ವಿಶೇಷ ರೀತಿಯ ಬೆಂಬಲ!" ಎಂದು ಬರೆದಿದ್ದಾರೆ.
ಕ್ಯಾಂಡಿಡೇಟ್ಸ್ ಟೂರ್ನಿಗೆ ಆಯ್ಕೆಯಾದ 2ನೇ ಆಟಗಾರ: ವಿಶ್ವಕಪ್ ಫೈನಲ್ಗೆ ಸ್ಥಾನ ಪಡೆಯುವ ಮೂಲಕ ಪ್ರಜ್ಞಾನಂದ ಕ್ಯಾಡಿಡೇಟ್ಸ್ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದಾರೆ. ಇವರು ಭಾರತದಿಂದ ಈ ಟೂರ್ನಿ ಆಡುತ್ತಿರುವ ಎರಡನೇ ಆಟಗಾರ. ಕ್ಯಾಂಡಿಡೇಟ್ಸ್ ಗೇಮ್ ಕೇವಲ 8 ಆಟಗಾರರ ನಡುವೆ ನಡೆಯುವ ಟೂರ್ನಿ. ಇದಕ್ಕೆ ಚೆಸ್ ವಿಶ್ವಕಪ್ನಲ್ಲಿ ಸ್ಥಾನ ಪಡೆಯುವ ಅಗ್ರ ಮೂವರು ಆಟಗಾರರು ಆಯ್ಕೆಯಾಗುತ್ತಾರೆ. ಇದಲ್ಲದೇ ಟೂರ್ನಿ ಪ್ರವೇಶಿಸಲು ಇನ್ನೂ ಕೆಲವು ಅರ್ಹತಾ ಪಂದ್ಯಗಳು ನಡೆಯುತ್ತವೆ. ಸ್ಪರ್ಧೆ 2024 ಏಪ್ರಿಲ್ 2ರಿಂದ 25ರ ವರೆಗೆ ಕೆನಡಾದ ಟೊರಂಟೊದಲ್ಲಿ ನಡೆಯಲಿದೆ.
ಇದನ್ನೂ ಓದಿ: ಚೆಸ್ ವಿಶ್ವಕಪ್: ಫೈನಲ್ ಪ್ರವೇಶಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಗ್ನಾನಂದನ್!