ಹೈದರಾಬಾದ್ : 7 ಬಾರಿ ಫಾರ್ಮುಲಾ-1 ರೇಸರ್ ಲೂಯಿಸ್ ಹ್ಯಾಮಿಲ್ಟನ್ಗೆ ಕೋವಿಡ್-19 ಸೋಂಕು ತಗುಲಿದೆ. ಇದೇ ವಾರಾಂತ್ಯದಲ್ಲಿ ಬಹ್ರೈನ್‌ನಲ್ಲಿ ನಡೆಯಲಿರುವ ಸಖಿರ್ ಗ್ರಾಂಡ್ ಪ್ರಿಕ್ಸ್‌ನಲ್ಲಿ ಹ್ಯಾಮಿಲ್ಟನ್ ಇಲ್ಲದೆ ಮರ್ಸೆಡಿಸ್ ರೇಸ್ನಲ್ಲಿ ಭಾಗವಹಿಸಬೇಕಿದೆ.
ಈ ಕುರಿತು ಮರ್ಸೆಡಿಸ್ ಹೇಳಿಕೆ ಬಿಡುಗಡೆ ಮಾಡಿದ್ದು, ಹ್ಯಾಮಿಲ್ಟನ್ ಅವರು ಸಣ್ಣ ಪ್ರಮಾಣದ ಕೊರೊನಾ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಹ್ಯಾಮಿಲ್ಟನ್ ಅವರು ಕೋವಿಡ್ -19ನ ಟೆಸ್ಟ್ನಲ್ಲಿ ಪಾಸಿಟಿವ್ ಪಡೆದಿದ್ದಾರೆ ಎಂದು ಘೋಷಿಸಲು ಮರ್ಸೆಡಿಸ್-ಎಎಂಜಿ ಪೆಟ್ರೋನಸ್ ತಂಡ ವಿಷಾದ ವ್ಯಕ್ತಪಡಿಸುತ್ತದೆ. ಈ ಕಾರಣದಿಂದ ವಾರಾಂತ್ಯದಲ್ಲಿ ನಡೆಯಲಿರುವ ಸಖಿರ್ ಜಿಪಿಯಲ್ಲಿ ಅವರು ಭಾಗವಹಿಸುತ್ತಿಲ್ಲ.
ಲೂಯಿಸ್ ಕಳೆದ ವಾರ ಎದುರಿಸಿದ್ದ ಮೂರು ಪರೀಕ್ಷೆಯಲ್ಲೂ ನೆಗೆಟಿವ್ ಪಡೆದಿದ್ದರು. ಆದರೆ, ಭಾನುವಾರ ನಡೆಸಿದ ಪರೀಕ್ಷೆ ಕೊನೆಯದ್ದಾಗಿತ್ತು. ಬೆಳಗ್ಗೆ ಏಳುತ್ತಿದ್ದಂತೆ ಕೆಲ ಸಣ್ಣ ಲಕ್ಷಣಗಳು ಕಾಣಿಸಿದ್ದರಿಂದ ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ ಅವರಿಗೆ ಪಾಸಿಟಿವ್ ದೃಢಪಟ್ಟಿದೆ ಎಂದು ಮರ್ಸೆಡಿಸ್ ತಿಳಿಸಿದೆ.
ಕೋವಿಡ್-19 ಪ್ರೋಟೋಕಾಲ್ಗಳು ಮತ್ತು ಸಾರ್ವಜನಿಕ ಆರೋಗ್ಯ ಪ್ರಾಧಿಕಾರದ ಮಾರ್ಗಸೂಚಿಗಳಿಗೆ ಅನುಸಾರ ಹ್ಯಾಮಿಲ್ಟನ್ ಈಗ ಕ್ವಾರಂಟೈನ್ನಲ್ಲಿದ್ದಾರೆ. ಸಣ್ಣ ರೋಗ ಲಕ್ಷಣಗಳಿರುವುದನ್ನು ಬಿಟ್ಟರೆ ಅವರು ಆರೋಗ್ಯವಾಗಿದ್ದಾರೆ. ಇಡೀ ತಂಡದಿಂದ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಶುಭಾಶಯ ಕೋರುತ್ತೇವೆ " ಎಂದು ಹೇಳಿದೆ.