ಹೈದರಾಬಾದ್: ಎಂಎಂಎ(ಮಿಕ್ಸಡ್ ಮಾರ್ಷಲ್ ಆರ್ಟ್ಸ್) ಜಾಗದಲ್ಲಿ ಭಾರತದ ಓಟವನ್ನು ತ್ವರಿತಗೊಳಿಸಲು ನನ್ನ ಉತ್ಸಾಹ ನಿರ್ಣಾಯಕವಾಗಿದೆ ಎಂದು ಜೊಮೆರೆ ಜೋಮರಿ ಟಾರ್ರೆಸ್ ಅವರನ್ನು ಮಣಿಸುವ ಮೂಲಕ ಒನ್ ಚಾಂಪಿಯನ್ಶಿಪ್ನಲ್ಲಿ ಸತತ ನಾಲ್ಕು ಜಯ ಸಾಧಿಸಿರುವ ರೀತು ಪೋಗಟ್ ಹೇಳಿದ್ದಾರೆ.
ಮಿಕ್ಸಡ್ ಮಾರ್ಷಲ್ ಆರ್ಟ್ಸ್ನಲ್ಲಿ ಈ ಸಾಧನೆ ಮಾಡಿದ ಬಳಿಕ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಭಾರತದ ಹುಲಿ ಎಂದು ಕರೆಯಲ್ಪಡುತ್ತಿರುವ ರೀತು, ಈಟಿವಿ ಭಾರತದ ಜೊತೆ ವಿಶೇಷ ಸಂದರ್ಶನದಲ್ಲಿ ಅವರು ಕುಸ್ತಿಯಲ್ಲಿನ ತಮ್ಮ ಭರವಸೆಯ ವೃತ್ತಿ ಜೀವನವನ್ನು ಏಕೆ ತೊರೆದರು ಮತ್ತು ಎಂಎಂಎ ಫೈಟರ್ ಆಗಿದ್ದ ಹೇಗೆ, ಅದಕ್ಕೇನು ಅಗತ್ಯತೆ ಇದೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
1) ನೀವು ಕುಸ್ತಿಯ ಹಿನ್ನೆಲೆಯಿಂದ ಬಂದಿದ್ದರಿಂದ ಎಂಎಂಎನಲ್ಲಿ ತೊಡಗಿಸಿಕೊಳ್ಳಲು ಅದು ಎಷ್ಟು ನೆರವು ನೀಡಿತು?ಮತ್ತು ಕುಸ್ತಿಯಿಂದ ಎಂಎಂಎಗೆ ಪರಿವರ್ತನೆ ಎಷ್ಟು ಕಷ್ಟಕರವಾಗಿತ್ತು?
ನನ್ನ ಕುಸ್ತಿಯ ಹಿನ್ನೆಲೆ ಎಂಎಂಎಯಲ್ಲಿ ತೊಡಗಿಕೊಳ್ಳಲು ನನಗೆ ದೊಡ್ಡ ಲಾಭವಾಯಿತು. ನಾವು ಎಂಎಂಎನ ಅಗ್ರ ಆರು ಅಥವಾ ಏಳು ಫೈಟರ್ಗಳನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಕುಸ್ತಿಯಲ್ಲಿ ಹಿನ್ನೆಲೆ ಹೊಂದಿದ್ದಾರೆ. ಕುಸ್ತಿಪಟು ಸುಲಭವಾಗಿ ಮಿಕ್ಸಡ್ ಮಾರ್ಷಲ್ ಆರ್ಟ್ಸ್ನಲ್ಲಿ ಪ್ರಯೋಜನ ಪಡೆಯಬಹುದು.
2)ನೀವು ಕುಸ್ತಿಯಿಂದ ಎಂಎಂಎಗೆ ಬದಲಾಗುವಾಗ ನಿಮ್ಮ ತಂದೆಯ ಪ್ರತಿಕ್ರಿಯೆ ಹೇಗಿತ್ತು?
ನಾನು ಯೂಟ್ಯೂಬ್‌ನಲ್ಲಿ ಮಿಕ್ಸಡ್ ಮಾರ್ಷಲ್ ಆರ್ಟ್ಸ್ಅನ್ನು ಸಾಕಷ್ಟು ನೋಡುತ್ತಿದ್ದೆ ಮತ್ತು ಅದು ತುಂಬಾ ವಿಭಿನ್ನವಾಗಿದ್ದು, ನನ್ನನ್ನು ಆಕರ್ಷಿಸಿತು. ಭಾರತದಲ್ಲಿ ಇದರ ತರಬೇತಿ ಕೇಂದ್ರಗಳ ಬಗ್ಗೆ ನನಗೆ ಯಾವುದೇ ಕಲ್ಪನೆ ಇರಲಿಲ್ಲ. ಆದರೆ, ನಾನು ಪಂದ್ಯಗಳನ್ನು ನೋಡುವುದನ್ನು ಇಷ್ಟಪಡುತ್ತಿದ್ದೆ. ನಾನು ಖಬೀಬ್ ಅವರು ವಿರೋಧಿಗಳ ವಿರುದ್ಧ ಸಾಕಷ್ಟು ಫೈಟ್ ಮಾಡುವುದನ್ನು ನೋಡಿದ್ದೇನೆ.
ಆದ್ರೆ ಈ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸುವವರಿಲ್ಲ ಎಂಬುದು ನನಗೆ ಆಶ್ಚರ್ಯವಾಗುತ್ತಿತ್ತು. ನಮ್ಮ ದೇಶದಲ್ಲಿ ಚಾಂಪಿಯನ್ ಅಥವಾ ಫೈಟರ್ ಏಕೆ ಇಲ್ಲ? ಎನ್ನುವುದು ಕಾಡುತ್ತಿತ್ತು. ಆದರೆ, ನಂತರ ಏಷ್ಯಾದ ಅತಿದೊಡ್ಡ ಜಿಮ್‌ನಿಂದ ಒಂದು ಅವಕಾಶ ಬಂದಿತು. ನಾನು ಆ ಆಟದ ಬಗ್ಗೆ ಆಸಕ್ತಿ ಹೊಂದಿದ್ದರಿಂದ ಅವರೊಂದಿಗೆ ಸೇರಲು ಅವರು ನನ್ನನ್ನು ಕೇಳಿದರು.
ಆ ಸಮಯದಲ್ಲಿ ನಾನು ಕುಸ್ತಿಯಲ್ಲಿ ಉತ್ತಮ ಲಯದಲ್ಲಿದ್ದೆ. ಟೋಕಿಯೋ ಒಲಿಂಪಿಕ್ಸ್ ಕೂಡ ತುಂಬಾ ಹತ್ತಿರದಲ್ಲಿತ್ತು. ನಾನು ಮೊದಲು ಇದನ್ನು ನನ್ನ ಸಹೋದರಿಯರಿಗೆ ಹೇಳಿದೆ. ಅವರು ಸಹಾ ಒಲಿಂಪಿಕ್ಸ್ ಬಗ್ಗೆ ಕಾಳಜಿ ವಹಿಸಲು ಹೇಳಿದರು. ಆದರೆ, ನಾನು ಈ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಅವರಿಗೆ ಹೇಳಿದೆ. ನಾನು ಎಂಎಂಎನಲ್ಲಿ ಆಸಕ್ತಿ ಹೊಂದಿರುವುದಾಗಿ ಹೇಳಿದ ನಂತರ ಅವರು ನನಗೆ ಬೆಂಬಲ ನೀಡಿದರು. ಅವರು ನನ್ನ ತಂದೆಯ ಜೊತೆ ಮಾತನಾಡಿದರು. ನಂತರ ತಂದೆ ಕೂಡ ಸಂಪೂರ್ಣ ಬೆಂಬಲ ನೀಡಿದರು. ಅವರು ನೀನು ಎಂಎಂಎ ಅಥವಾ ಕುಸ್ತಿ, ಯಾವುದರಾದರೂ ಆಯ್ಕೆ ಮಾಡಿಕೊ, ಆದರೆ ದೇಶಕ್ಕೆ ಗೌರವ ತಂದುಕೊಡುವತ್ತಾ ಗಮನ ಹರಿಸು ಎಂದು ಪ್ರೋತ್ಸಾಹಿಸಿದರು. ನಾನೂ ಅವರ ಬೆಂಬಲದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ.
3)ನೀವು ಮಹಿಳೆಯರ ಆಟಮ್ ವಿಭಾಗದಲ್ಲಿ, ಭವಿಷ್ಯದಲ್ಲಿ ಯಾರಾದರೂ ನಿರ್ಧಿಷ್ಟ ಫೈಟರ್ ಜೊತೆ ಫೈಟ್ ಮಾಡಲು ಬಯಸುತ್ತೀರಾ?
52 ಕೆಜಿ ತೂಕದ ವಿಭಾಗವು ನನಗೆ ಯಾವಾಗಲೂ ಕಠಿಣವಾಗಿದೆ. ಏಕೆಂದರೆ ನಾನು ಪ್ರತಿ ಹೋರಾಟಗಾರರಿಂದಲೂ ಸದಾ ಹೊಸ ಸವಾಲನ್ನು ಎದುರಿಸುತ್ತೇನೆ. ಹಾಗಾಗಿ ನಾನು ಯಾರನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವರು ಪೂರ್ಣ ಸಿದ್ಧತೆಯೊಂದಿಗೆ ಬರುತ್ತಾರೆ. ಆದರೆ ನಾನು ಕಠಿಣ ಪರಿಶ್ರಮಿ, ಎದುರಾಳಿ ಯಾರೆಂಬುದನ್ನು ಲೆಕ್ಕಿಸದೇ ಅವರ ಸವಾಲನ್ನು ಎದುರಿಸಲು ಸದಾ ಸಿದ್ಧನಾಗಿದ್ದೇನೆ.
4)ನೀವು ಒನ್ ಚಾಂಪಿಯನ್ಶಿಪ್ನಲ್ಲಿ 4 ಪಂದ್ಯಗಳನ್ನು ಗೆದ್ದಿದ್ದೀರಾ. ಅದೊಂದು ಅದ್ಭುತ ಸಾಧನೆ. ಆದರೆ ಭವಿಷ್ಯದ ಪಂದ್ಯಗಳಿಗೆ ಹೇಗೆ ತಯಾರಾಗುತ್ತಿದ್ದೀರಾ ತಿಳಿಸಿ?
ಮೊದಲನೆಯದಾಗಿ ಧನ್ಯವಾದಗಳು, ನಾನು ನಾಲ್ಕು ಪಂದ್ಯಗಳಿಂದ ಸಾಕಷ್ಟು ಕಲಿತಿದ್ದೇನೆ. ಪ್ರತಿ ಪಂದ್ಯದಲ್ಲೂ ನಾನು ಸುಧಾರಣೆಗೆ ನೀವು ಸಾಕ್ಷಿಯಾಗಬಹುದು, ನಾಲ್ಕನೇ ಪಂದ್ಯ ಗೆದ್ದ ಮೇಲೆ ನನ್ನ ಆತ್ಮ ವಿಶ್ವಾಸ ಹೆಚ್ಚಾಗಿದೆ. ನಾನು ಹಂತ ಹಂತವಾಗಿ ನನ್ನ ಗುರಿಯತ್ತಾ ಸಾಗುತ್ತಿದ್ದೇನೆ. ನನ್ನ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುತ್ತಿದ್ದೇನೆ. ಇದಕ್ಕಾಗಿ ನನ್ನ ಕೋಚ್ಗಳು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ನನ್ನ ದೇಶಕ್ಕೆ ಚಾಂಪಿಯನ್‌ಶಿಪ್ ಬೆಲ್ಟ್ ತಂದುಕೊಡುವುದು ನನ್ನ ಕನಸು. ಇದಕ್ಕಾಗಿ ಕನಸು ಕಾಣುತ್ತಿರುವ ದೇಶದ ಜನತೆಗಾಗಿ ನಾನು ಇದನ್ನು ಸಾಧಿಸಲು ಬಯಸುತ್ತೇನೆ. ಅದಕ್ಕಾಗಿ ನನ್ನಲ್ಲಿ ಕೊರತೆಯಿರುವ ಭಾಗಗಳನ್ನು ಸರಿದೂಗಿಸಲು ಸಾಕಷ್ಟು ಕೆಲಸ ಮಾಡುತ್ತಿದ್ದೇನೆ.
ಭಾರತಕ್ಕೆ ಮಾರ್ಷಲ್ ಆರ್ಟ್ಸ್ನಲ್ಲಿ ಬದಕ ತಂದುಕೊಡುವ ಮಹದಾಸೆಯನ್ನು ಹೊಂದಿರುವ ರೀತು ಪೋಗಟ್ ಕ್ರೀಡೆ, ಸಾಧನೆ ಕುರಿತು ಮತ್ತಷ್ಟು ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.