ETV Bharat / sports

ಭಾರತ ಪರ ಆಡಲು ಅವಕಾಶ ಸಿಕ್ಕಾಗಲೆಲ್ಲ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ : ರಾಹುಲ್ ತ್ರಿಪಾಠಿ

author img

By

Published : May 27, 2022, 3:12 PM IST

Updated : May 27, 2022, 3:45 PM IST

ತವರು ರಾಜ್ಯಕ್ಕೆ ಆಗಮಿಸಿದ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ತ್ರಿಪಾಠಿ, ಐಪಿಎಲ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಬಿಸಿಸಿಐಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ..

ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ಅಭಿಮಾನಿಯಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ರೀಡಾಪಟು ರಾಹುಲ್ ತ್ರಿಪಾಠಿ

ಪಲಮು(ಜಾರ್ಖಂಡ್) : ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅವರ ಅಭಿಮಾನಿಯಾಗಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡದ ಕ್ರೀಡಾಪಟು ರಾಹುಲ್ ತ್ರಿಪಾಠಿ ತಮ್ಮ ವೃತ್ತಿ ಜೀವನದ ಬಗ್ಗೆ ಸಂತಸ ಹೊರ ಹಾಕಿದ್ದಾರೆ. ದೇಶ ಪ್ರತಿನಿಧಿಸಲು ಏನಾದರೂ ಆಯ್ಕೆಯಾದರೆ ಭಾರತಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ ಎಂದಿದ್ದಾರೆ.

ತವರು ರಾಜ್ಯಕ್ಕೆ ಆಗಮಿಸಿದ ನಂತರ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ಐಪಿಎಲ್ ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಬಿಸಿಸಿಐಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಟೂರ್ನಮೆಂಟ್ ಆಡಿರುವುದು ನನ್ನ ಅದೃಷ್ಟ, ವಾತಾವರಣ ಚೆನ್ನಾಗಿತ್ತು, ನಾವು ಆನಂದಿಸಿದ್ದೇವೆ ಎಂದು ಹೇಳಿದ್ದಾರೆ.

ತ್ರಿಪಾಠಿ ಅವರು ಈ ಐಪಿಎಲ್‌ನಲ್ಲಿ 14 ಇನ್ನಿಂಗ್ಸ್‌ಗಳಲ್ಲಿ 413 ರನ್ ಗಳಿಸಿದ್ದಾರೆ. ಇದು ಅವರ ವೃತ್ತಿ ಜೀವನದಲ್ಲಿ ನೆನಪಿಡುವ ಪಂದ್ಯಾವಳಿಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲು ಈ ಮೂಲಕ ಎದುರು ನೋಡುತ್ತಿದ್ದಾರೆ. ಐಪಿಎಲ್ ಪಂದ್ಯಾವಳಿಯು ನನಗೆ ಉತ್ತಮ ಕಲಿಕೆಯ ಅನುಭವವಾಗಿದೆ. ನಾವು ತಂಡವಾಗಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲವಾದರೂ ನಾವು ಆಟವನ್ನು ಆನಂದಿಸಿದ್ದೇವೆ ಮತ್ತು ಬಹಳಷ್ಟು ಕಲಿತಿದ್ದೇವೆ. ಐಪಿಎಲ್ ಅಂತಾರಾಷ್ಟ್ರೀಯ ಆಟಗಾರರೊಂದಿಗೆ ಸ್ಪರ್ಧಿಸಲು ಒಂದು ಅವಕಾಶ ಇದಾಗಿತ್ತು. ನಾನು ಇನ್ನಷ್ಟು ಸುಧಾರಿಸಿಕೊಳ್ಳಲು ಬಯಸುತ್ತೇನೆ. ಈ ಪಂದ್ಯಾವಳಿಯ ಮೂಲಕ ನಾನು ಮುಂದೆ ಬಂದಿದ್ದೇನೆ ಎಂದು 31 ವರ್ಷದ ಕ್ರೀಡಾಪಟು ಹೇಳಿದರು.

ಭಾರತ ಪರ ಆಡಲು ಅವಕಾಶ ಸಿಕ್ಕಾಗಲೆಲ್ಲ ಅತ್ಯುತ್ತಮ ಪ್ರದರ್ಶನ ನೀಡುತ್ತೇನೆ : ರಾಹುಲ್ ತ್ರಿಪಾಠಿ

ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಕೇಳಿದಾಗ, ನಾನು ರಾಹುಲ್ ದ್ರಾವಿಡ್ ಅವರನ್ನು ಅನುಸರಿಸುತ್ತೇನೆ ಮತ್ತು ಪ್ರಸ್ತುತ ಆಟಗಾರರನ್ನು ಆಯ್ಕೆ ಮಾಡಲು ನೀವು ನನ್ನನ್ನು ಕೇಳಿದರೆ, ನಾನು ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಎಂದು ಹೇಳುತ್ತೇನೆ ಎಂದರು.

ಇದನ್ನೂ ಓದಿ: ಹೆಡಗೇವಾರ್ ಯಾರು?, ಏನು ಮಾಡಿದ ಅವನು?: ಮಲ್ಲಿಕಾರ್ಜುನ ಖರ್ಗೆ ಕಿಡಿ

Last Updated : May 27, 2022, 3:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.