ಕೋಲ್ಕತ್ತಾ: ಚೆಸ್ ಬೋರ್ಡ್ನಲ್ಲಿ ತಮ್ಮ ಚಾಕಚಕ್ಯತೆ ಮೆರೆದ ಅರ್ಜುನ್ ಎರಿಗೈಸಿ ಮತ್ತು ಆರ್ ವೈಶಾಲಿ ಇಲ್ಲಿ ಭಾನುವಾರ ನಡೆದ ಟಾಟಾ ಸ್ಟೀಲ್ ಚೆಸ್ ಇಂಡಿಯಾ ಟೂರ್ನಿಯ ಬ್ಲಿಟ್ಜ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಭಾರತದ ಚೆಸ್ ಯುವತಾರೆಯಾದ ಅರ್ಜುನ್, ಅಮೆರಿಕದ ಹಿಕಾರು ನಕಮುರಾ ಅವರನ್ನು ಫೈನಲ್ನಲ್ಲಿ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಪಂದ್ಯದಲ್ಲಿ ಅಮೆರಿಕನ್ ಚೆಸ್ ಆಟಗಾರನ ಮೇಲೆ ಪ್ರಾಬಲ್ಯ ಸಾಧಿಸಿದ ಅರ್ಜುನ್ 18 ಅಂಕ ಗಳಿಸಿದರು. ನಕಮುರಾ 12.5 ಅಂಕ ಮಾತ್ರ ಸಂಪಾದಿಸಿದರು. ಆರಂಭದಲ್ಲಿ ಎರಿಗೈಸಿ, ನಕಮುರಾ ವಿರುದ್ಧ ಹಿನ್ನಡೆಯಲ್ಲಿದ್ದರು. ಆದರೆ 30 ನೇ ನಡೆಯಲ್ಲಿ ಅಮೆರಿಕನ್ ಆಟಗಾರ ತಪ್ಪು ಮಾಡಿದರು. ಅಲ್ಲಿಂದ ಅರ್ಜುನ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿ ಗೆಲುವು ಪಡೆದರು.
ವೈಶಾಲಿ ಮಹಿಳಾ ಚಾಂಪಿಯನ್: ಮಹಿಳಾ ವಿಭಾಗದಲ್ಲಿ ಭಾರತದ ರಮೇಶ್ಬಾಬು ವೈಶಾಲಿ ಅವರು ಬ್ಲಿಟ್ಜ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂದ್ಯದಲ್ಲಿ ವೈಶಾಲಿ 13.5 ಅಂಕಗಳನ್ನು ಪಡೆಧರೆ, ಎದುರಾಳಿಯಾದ ಮರಿಯಾ ಮುಝಿಚುಕ್ 12 ಅಂಕಕ್ಕೆ ತೃಪ್ತಿಪಟ್ಟುಕೊಂಡರು.
ಭಾರತದ ಇನ್ನೊಬ್ಬ ಚೆಸ್ ಆಟಗಾರ್ತಿ ಹರಿಕಾ ದ್ರೋಣವಲ್ಲಿ 11 ಅಂಕ ಪಡೆದು ಹಿನ್ನಡೆ ಅನುಭವಿಸಿದರು. ಓಪನ್ ರ್ಯಾಪಿಡ್ ವಿಭಾಗದಲ್ಲಿ ನಿಹಾಲ್ ಸರಿನ್ ಚಾಂಪಿಯನ್ ಆದರೆ, ಮಹಿಳಾ ವಿಭಾಗದಲ್ಲಿ ಅನ್ನಾ ಹುಸೇನಿನಾ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಓದಿ: ಫಿಫಾ ವಿಶ್ವಕಪ್ 2022: ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಫ್ರಾನ್ಸ್-ಇಂಗ್ಲೆಂಡ್