ETV Bharat / sports

Olympicsಗೆ ಅರ್ಹತೆ ಪಡೆಯಲು ದ್ಯುತಿ,ಹಿಮಾ ಸೇರಿ ಟಾಪ್ ಅಥ್ಲೀಟ್​ಗಳಿಗೆ ಇದು ಕೊನೆಯ ಅವಕಾಶ

author img

By

Published : Jun 24, 2021, 9:34 PM IST

ಮಹಿಳೆಯರ 4x100 ಮೀಟರ್​ ರಿಲೇಯಲ್ಲಿ ದ್ಯುತಿ ಚಾಂದ್​, ಹಿಮಾ ದಾಸ್​, ಅರ್ಚನಾ ಸುಸೀಂದ್ರನ್ ಮತ್ತು ಎಸ್​ ಧನಲಕ್ಷ್ಮಿ ಒಳಗೊಂಡ ತಂಡ ಸ್ಪರ್ಧಿಸಲಿದ್ದು, ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು 43.05 ಸೆಕೆಂಡ್​ಗಳಲ್ಲಿ ರಿಲೇ ಪೂರ್ಣಗೊಳಿಸಬೇಕಿದೆ.

ಅಂತಾರಾಜ್ಯ ಚಾಂಪಿಯನ್​ಶಿಪ್
ಅಂತಾರಾಜ್ಯ ಚಾಂಪಿಯನ್​ಶಿಪ್

ಪಟಿಯಾಲ: ಶುಕ್ರವಾರದಿಂದ ಆರಂಭವಾಗಲಿರುವ ಅಂತಾರಾಜ್ಯ ಚಾಂಪಿಯನ್​​ಶಿಪ್​ನಲ್ಲಿ ಭಾರತದ ಮಹಿಳೆಯರ 4x100 ರಿಲೇ ಮತ್ತು ಪುರುಷರ 4x400 ರಿಲೇಯಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯುವುದಕ್ಕೆ ಕೊನೆಯ ಅವಕಾಶವಾಗಿದೆ. ಟೋಕಿಯೋ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ಜೂನ್​ 29 ಕೊನೆಯ ದಿನಾಂಕವಾಗಿದೆ. ಹಾಗಾಗಿ ಆಥ್ಲೀಟ್​ಗಳಿಗೆ ಈ ಟೂರ್ನಿಯೇ ಕೊನೆಯದಾಗಿದೆ.

ಮಹಿಳೆಯರ 4x100 ಮೀಟರ್​ ರಿಲೇಯಲ್ಲಿ ದ್ಯುತಿ ಚಾಂದ್​, ಹಿಮಾ ದಾಸ್​, ಅರ್ಚನಾ ಸುಸೀಂದ್ರನ್ ಮತ್ತು ಎಸ್​ ಧನಲಕ್ಷ್ಮಿ ಒಳಗೊಂಡ ತಂಡ ಸ್ಪರ್ಧಿಸಲಿದ್ದು, ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು 43.05 ಸೆಕೆಂಡ್​ಗಳಲ್ಲಿ ರಿಲೇ ಪೂರ್ಣಗೊಳಿಸಬೇಕಿದೆ.

ಜುಲೈ 13ರಿಂದ ಆರಂಭವಾಗಲಿರುವ ಒಲಿಂಪಿಕ್ಸ್​ನಲ್ಲಿ 4x100 ರಿಲೇಯಲ್ಲಿ ಕೇವಲ ಟಾಪ್ 16 ತಂಡಗಳಿಗೆ ಮಾತ್ರ ಅವಕಾಶವಿದೆ. ಪ್ರಸ್ತುತ ಭಾರತ 20ನೇ ಶ್ರೇಯಾಂಕದಲ್ಲಿದೆ. ಸೋಮವಾರ ಕೊನೆಗೊಂಡ ಇಂಡಿಯನ್ ಗ್ರ್ಯಾಂಡ್​ಫ್ರಿಕ್ಸ್ 4​ನಲ್ಲಿ ಭಾರತ ತಂಡ 43.37 ಸೆಕೆಂಡ್ಸ್​ಗಳಲ್ಲಿ ತಲುಪಿ ರಾಷ್ಟ್ರೀಯ ದಾಖಲೆ ಬರೆದಿತ್ತು. ಆದರೆ, ಈ ದಾಖಲೆ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ಸಾಕಾಗಿಲ್ಲ.

ಪುರುಷರ 4x400 ರಿಲೇ ವಿಭಾಗದಲ್ಲಿ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಬೇಕಾದರೆ, 3 ನಿಮಿಷ 2.50 ಸೆಕೆಂಡ್​ಗಳಲ್ಲಿ ತಲುಪಬೇಕಿದೆ. ಆದರೆ, ಮೊಹಮ್ಮದ್ ಅನಸ್ ಯಾಹಿಯಾ, ಅಮೋಜ್ ಜಾಕೋಬ್, ಅರೋಕಿಯಾ ರಾಜೀವ್, ಮತ್ತು ನೋವಾ ನಿರ್ಮಲ್ ತೋಮ್​ ಮೊನ್ನೆ ನಡೆದ ಇಂಡಿಯನ್ ಗ್ರ್ಯಾಂಡ್​ಫ್ರಿಕ್ಸ್ 4​ನಲ್ಲಿ 3 ನಿಮಿಷ 2.61 ಸೆಕೆಂಡ್​ಗಳಲ್ಲಿ ತಲುಪಿದ್ದರು. ಇದೀಗ ಕೊನೆಯ ಅವಕಾಶವಾಗಿದ್ದು, ತಮ್ಮ ದಾಖಲೆಯನ್ನು ಸುಧಾರಿಸಿಕೊಳ್ಳಬೇಕಿದೆ.

ಇದನ್ನು ಓದಿ:ಒಲಿಂಪಿಕ್ಸ್​​ನಲ್ಲಿ ಚಿನ್ನ ಗೆದ್ದರೆ 6 ಕೋಟಿ ರೂ. ಬಹುಮಾನ... ಈ ರಾಜ್ಯದಿಂದ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.