ETV Bharat / sports

100 ಮೀಟರ್​ ಓಟದಲ್ಲಿ ದ್ಯುತಿ ಚಾಂದ್ ದಾಖಲೆ: ಒಲಿಂಪಿಕ್​ ಅರ್ಹತೆಗೆ ಒಂದೇ ಮೆಟ್ಟಿಲು!

author img

By

Published : Oct 11, 2019, 8:31 PM IST

ಭಾರತದ ಹೆಮ್ಮೆಯ ಕ್ರೀಡಾಪಟು ದ್ಯುತಿ ಚಾಂದ್‌ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಕೇವಲ ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ.

ದ್ಯುತಿ ಚಾಂದ್ ದಾಖಲೆ

ರಾಂಚಿ: ಭಾರತದ ಖ್ಯಾತ ಅಥ್ಲೀಟ್ ದ್ಯುತಿ ಚಾಂದ್ 100 ಮೀಟರ್​ ಓಟದಲ್ಲಿ ಈಗಾಗಲೇ ಅನೇಕ ದಾಖಲೆ ಮುರಿದಿದ್ದು ಸದ್ಯ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.

100 ಮೀಟರ್​ ಓಟದ ಸೆಮಿಫೈನಲ್​ ವೇಳೆ ಕೇವಲ 11.22 ಸೆಕೆಂಡ್​​ನಲ್ಲಿ ಗುರಿ ಮುಟ್ಟುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಈ ಹಿಂದೆ ಅವರೇ 100 ಮೀಟರ್​ ಓಟವನ್ನು 11.26 ಸೆಕೆಂಡ್​​ನಲ್ಲಿ ಮುಟ್ಟಿದ್ದರು.

ಈ ಮೂಲಕ 2020ರಲ್ಲಿ ಜಪಾನ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್‌​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕೇವಲ ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಒಲಂಪಿಕ್ಸ್​​ನಲ್ಲಿ ದ್ಯುತಿ ಚಾಂದ್​ ಅವಕಾಶ ಪಡೆದುಕೊಳ್ಳಬೇಕಾದರೆ 11.07 ಸೆಕೆಂಡ್​​ನಲ್ಲಿ ಗುರಿ ತಲುಪಬೇಕಾಗಿದೆ.

ಈ ಹಿಂದೆ ಇಟಲಿಯ ನೇಪಲ್ಸ್​ನಲ್ಲಿ ನಡೆದ 30ನೇ ವಿಶ್ವ ಯೂನಿವರ್ಸಿಟಿ ಗೇಮ್ಸ್​ನ ಫೈನಲ್​ನಲ್ಲಿ ಚಾಂದ್​ 11.32 ಸೆಕೆಂಡ್​ಗಳಲ್ಲಿ 100 ಮೀಟರ್​ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಜತೆಗೆ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

Intro:Body:

100 ಮೀಟರ್​ ಓಟದಲ್ಲಿ ದ್ಯುತಿ ಚಾಂದ್ ದಾಖಲೆ​... ಒಲಿಂಪಿಕ್​ ಅರ್ಹತೆಗೆ ಒಂದೇ ಮೆಟ್ಟಿಲು! 

ರಾಂಚಿ: ಭಾರತದ ಖ್ಯಾತ ಅಥ್ಲೀಟ್ ತಾರೆ ದ್ಯುತಿ ಚಾಂದ್ 100 ಮೀಟರ್​ ಓಟದಲ್ಲಿ ಈಗಾಗಲೇ ಅನೇಕ ದಾಖಲೆ ನಿರ್ಮಾಣ ಮಾಡಿದ್ದು ಸದ್ಯ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್​​ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ಹಿಂದೆ ನಿರ್ಮಾಣಗೊಂಡಿದ್ದ ರಾಷ್ಟ್ರೀಯ ದಾಖಲೆ ಬ್ರೇಕ್​ ಮಾಡಿದ್ದಾರೆ.

100 ಮೀಟರ್​ ಓಟವನ್ನ  ಸೆಮಿಫೈನಲ್​ ವೇಳೆ ಕೇವಲ 11.22 ಸೆಕೆಂಡ್​​ನಲ್ಲಿ ಮುಟ್ಟುವ ಮೂಲಕ ಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಈ ಹಿಂದೆ ಅವರೇ 100 ಮೀಟರ್​ ಓಟವನ್ನ 11.26 ಸೆಕೆಂಡ್​​ನಲ್ಲಿ ಮುಟ್ಟಿದ್ದರು. ಆದರೆ ಇದೀಗ ಆ ದಾಖಲೆ ಬ್ರೇಕ್​ ಆಗಿದೆ. 

ಈ ದಾಖಲೆ ಮೂಲಕ 2020ರಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಒಲಂಪಿಕ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಕೇವಲ ಒಂದೇ ಒಂದು ಮೆಟ್ಟಿಲು ಬಾಕಿ ಉಳಿದಿದೆ. ಒಲಂಪಿಕ್ಸ್​​ನಲ್ಲಿ ದ್ಯುತಿ ಚಾಂದ್​ ಅವಕಾಶ ಪಡೆದುಕೊಳ್ಳಬೇಕಾದರೆ 11.07 ಸೆಕೆಂಡ್​​ನಲ್ಲಿ ಗುರಿ ತಲುಪಬೇಕಾಗಿದೆ. 

ಈ ಹಿಂದೆ ಇಟಲಿಯ ನೇಪಲ್ಸ್​ನಲ್ಲಿ ನಡೆದ 30ನೇ ವಿಶ್ವ ಯೂನಿವರ್ಸಿಟಿ ಗೇಮ್ಸ್​ನ ಫೈನಲ್​ನಲ್ಲಿ ಚಾಂದ್​ 11.32 ಸೆಕೆಂಡ್​ಗಳಲ್ಲಿ 100 ಮೀಟರ್​ ಪೂರ್ಣಗೊಳಿಸುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಜತೆಗೆ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳಾ ಓಟಗಾರ್ತಿ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.