ಮೆಲ್ಬರ್ನ್, ಆಸ್ಟ್ರೇಲಿಯಾ: ಸರ್ಬಿಯಾದ ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ಆಸ್ಟ್ರೇಲಿಯಾ ಸರ್ಕಾರ ಎರಡನೇ ಬಾರಿ ರದ್ದುಗೊಳಿಸಿದ್ದನ್ನು ಆಕ್ಷೇಪಿಸಿ ನೊವಾಕ್ ಜೊಕೊವಿಕ್ ಮೇಲ್ಮನವಿ ವಿಚಾರಣೆ ನಡೆಸಲಾಗಿದೆ.
ನೊವಾಕ್ ಜೊಕೊವಿಕ್ ಮತ್ತು ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಲಿಖಿತ ವಾದಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ನ್ಯಾಯಾಧೀಶ ಡೇವಿಡ್ ಒ'ಕಲ್ಲಗನ್ ಹೇಳಿದ್ದು, ಭಾನುವಾರ ಬೆಳಗ್ಗೆ ಮತ್ತೊಂದು ವಿಚಾರಣೆಯನ್ನು ನಿಗದಿ ಮಾಡಲಾಗಿದೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ ಆರಂಭವಾಗಲು ಕೇವಲ ಎರಡು ದಿನಗಳು ಬಾಕಿ ಇದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ ಮೇಲೆ ನೊವಾಕ್ ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಲಾಗಿದೆ ಎಂದು ವಲಸೆ ಸಚಿವ ಅಲೆಕ್ಸ್ ಹಾಕ್ ಹೇಳಿದ್ದರು.
ಜೊಕೊವಿಕ್ ಕಳೆದ ವಾರ ಮೆಲ್ಬರ್ನ್ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರ ವೀಸಾವನ್ನು ರದ್ದುಗೊಳಿಸಲಾಗಿತ್ತು. ಎರಡನೇ ಬಾರಿಯೂ ಅವರ ವೀಸಾ ರದ್ದಾದ ಕಾರಣದಿಂದಾಗಿ, ಗಡಿಪಾರು ಭೀತಿ ಜೊಕೊವಿಕ್ಗೆ ಎದುರಾಗಿತ್ತು. ಅವರು ಒಮ್ಮೆ ಗಡಿಪಾರಾದರೆ, ಮೂರು ವರ್ಷಗಳ ಕಾಲ ಆಸ್ಟ್ರೇಲಿಯಾಗೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಜೊಕೊವಿಕ್ ತಮ್ಮ ಪ್ರಯಾಣದ ಘೋಷಣೆಯು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟು ಒಂಭತ್ತು ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಈ ಬಾರಿ 10ನೇ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಒಟ್ಟು 20 ಗ್ರ್ಯಾಂಡ್ಸ್ಲ್ಯಾಮ್ಗಳನ್ನು ಪಡೆದಿರುವ ಅವರು ಈಗ ಜಗತ್ತಿನ ಟೆನ್ನಿಸ್ ಆಟಗಾರರ ಪೈಕಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಫಾರ್ಮುಲಾ 1 ರೇಸ್ ಕನಸಿನತ್ತ ಭಾರತದ ರೇಸರ್ ಜೇಹನ್.. ಮುಟ್ಟುವರೇ ನಿಖರ ಗುರಿ!