ETV Bharat / sports

ಪಿಂಕ್​ ಪ್ಯಾಂಥರ್ಸ್ ಮಣಿಸಿದ ದಬಾಂಗ್​ ಡೆಲ್ಲಿ, ಫಾರ್ಚುನ್​ ವಿರುದ್ಧ ಪಲ್ಟನ್​ಗೆ ಗೆಲುವು! - ಪ್ರೋ ಕಬಡ್ಡಿ ಲೀಗ್​

ದಬಾಂಗ್​ ಡೆಲ್ಲಿ 35-24 ಜೈಪುರ ಪಿಂಕ್​ ಫ್ಯಾಂಥರ್ಸ್ ವಿರುದ್ಧ, ಪುಣೇರಿ ಪಲ್ಟನ್ಸ್​​ 33-31ಅಂಕಗಳ ಅಂತರದಿಂದ ಗುಜರಾತ್​ ಫಾರ್ಚುನ್ಸ್​​ ವಿರುದ್ಧ ಗೆಲುವು ಸಾಧಿಸಿದೆ.

deepak
author img

By

Published : Aug 5, 2019, 11:07 PM IST

ಪಾಟ್ನಾ: 7ನೇ ಆವೃತ್ತಿಯಲ್ಲಿ ಅಜೇಯವಾಗಿದ್ದ ಜೈಪುರ ಪಿಂಕ್​ ಫ್ಯಾಂಥರ್ಸ್​ ವಿರುದ್ಧ ದಬಾಂಗ್​ ಡೆಲ್ಲಿ ಹಾಗೂ ಗುಜರಾತ್​ ಫಾರ್ಚುನ್​ ಜೈಂಟ್ಸ್ ವಿರುದ್ಧ ಪುಣೇರಿ ಪಲ್ಟನ್ಸ್​ ಗೆಲುವು ಸಾಧಿಸಿವೆ.

ಮೊದಲ ಪಂದ್ಯದಲ್ಲಿ ಜೈಪುರ ವಿರುದ್ಧ ಡೆಲ್ಲಿ 35-24 ರಿಂದ ಗಲುವು ಸಾಧಿಸಿತು. ಡೆಲ್ಲಿ ರೈಡರ್​ಗಳಾದ ನವೀನ್​ ಕುಮಾರ್​ 12, ಚಂದ್ರನ್​ ರಂಜಿತ್​ 10 ಅಂಕಗಳಿಸಿದರೆ ಡಿಫೆಂಡರ್​ ರವೀಂದ್ರ ಪಹಲ್ 3 ಅಂಕ ಪಡೆದು ಗೆಲುವಿನ ರೂವಾರಿಗಳಾದರು. ಪಿಂಕ್​ ಫ್ಯಾಂಥರ್ಸ್​ ಪರ ದೀಪಕ್​ ನಿವಾಸ್​ ಹೂಡ 11, ದೀಪಕ್​ ನರ್ವಾಲ್​ 5 ಅಂಕ ಪಡೆದರು ಉತ್ತಮ ಪೈಪೋಟಿ ನೀಡಿದರು.

Pro kabaddi leage
ಪ್ರೋ ಕಬಡ್ಡಿ ಲೀಗ್​

ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್ಸ್​ ಆಲ್​ರೌಂಡ್​ ಪ್ರದರ್ಶನ ತೋರುವ ಮೂಲಕ 33-31 ಅಂಕಗಳ ಅಂತರದಿಂದ ಗೆಲವು ಸಾಧಿಸಿದ್ದಾರೆ. ರೈಡರ್​ ಪವನ್​ 6 ಅಂಕ, ಅಮಿತ್ ಕುಮಾರ್ 6, ಗಿರೀಶ್ 6 ಹಾಗೂ ಮಂಜಿತ್​ 5 ಅಂಕಪಡೆದು ಗೆಲುವಿನ ರೂವಾರಿಯಾದರು.

ಗುಜರಾತ್ ಮೊದಲಾರ್ಧದ ಅಂತ್ಯದಲ್ಲಿ 17-14 ಅಂಕಗಳ ಮುನ್ನಡೆ ಸಾಧಿಸಿತು. ಆದರೆ ದ್ವಿತಿಯಾರ್ಧದಲ್ಲಿ ಗುಜರಾತ್ ತಂಡವನ್ನು ಆಲೌಟ್ ಮಾಡಿದ ಪುಣೇರಿ 20-18 ಅಂಕಗಳ ಮುನ್ನಡೆ ಪಡೆದುಕೊಂಡಿದ್ದಲ್ಲದೆ ಅಂದೇ ಮುನ್ನಡೆಯನ್ನು ಕೊನೆಯವರೆಗೂ ಸಾಧಿಸಿ 2 ಅಂಕಗಳಿಂದ ರೋಚಕ ಗೆಲುವು ಸಾಧಿಸಿತು.

ಗುಜರಾತ್​ ಪರ ಸಚಿನ್​ 9, ರೋಹಿತ್​ ಗುಳಿಯಾ 6, ಮೋರೆ ಜಿಬಿ 5 ಅಂಕಗಳಿಸಿ ಉತ್ತಮ ಪ್ರದರ್ಶನ ನೀಡಿದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.