ಪ್ರೇಗ್ (ಝೆಕ್ ಗಣರಾಜ್ಯ): ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಟ್ಯಾಬರ್ ಅಥ್ಲೀಟ್ ಮೀಟ್ನಲ್ಲಿ ಭಾರತದ ಚಿನ್ನದ ಹುಡುಗಿ ಹಿಮಾ ದಾಸ್ 400 ಮೀಟರ್ ಓಟದಲ್ಲಿ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ.
400 ಮೀ ಓಟದಲ್ಲಿ ಕೇವಲ 52.09 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಹಿಮಾ ತಿಂಗಳ 20 ದಿನಗಳೊಳಗೆ 5ನೇ ಚಿನ್ನಕ್ಕೆ ಮುತ್ತಿಕ್ಕಿದರು. ಈ ಬಗ್ಗೆ ಹಿಮಾ ಟ್ವಿಟ್ಟರ್ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
-
Finished 400m today on the top here in Czech Republic today 🏃♀️ pic.twitter.com/1gwnXw5hN4
— Hima MON JAI (@HimaDas8) July 20, 2019 " class="align-text-top noRightClick twitterSection" data="
">Finished 400m today on the top here in Czech Republic today 🏃♀️ pic.twitter.com/1gwnXw5hN4
— Hima MON JAI (@HimaDas8) July 20, 2019Finished 400m today on the top here in Czech Republic today 🏃♀️ pic.twitter.com/1gwnXw5hN4
— Hima MON JAI (@HimaDas8) July 20, 2019
ಇನ್ನು ಹಿಮಾ ದಾಸ್ ಇದೇ ತಿಂಗಳ 2ರಂದು ಪೋಲೆಂಡ್ನಲ್ಲಿ ನಡೆದಿದ್ದ ಪೊಂಜನಮ್ ಗ್ರ್ಯಾಂಡ್ ಪ್ರಿಕ್ಸ್ನ 200 ಮೀ. ಓಟದಲ್ಲಿ ಚಿನ್ನ, ಜುಲೈ 7ರಂದು ಕುಟ್ನೋ ಅಥ್ಲೆಟಿಕ್ಸ್ನ 200 ಮೀ. ಓಟದಲ್ಲಿ ಚಿನ್ನ ಹಾಗೂ ಜುಲೈ 13ರಂದು ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಕ್ಲಾಡ್ನೋ ಅಥ್ಲೆಟಿಕ್ಸ್ನ 200 ಮೀ. ಓಟದಲ್ಲಿ ಸ್ವರ್ಣ ಗೆದ್ದಿದ್ದರು. ಹಾಗೆಯೇ ಝೆಕ್ ರಿಪಬ್ಲಿಕ್‌ನಲ್ಲಿ ನಡೆದ ಟ್ಯಾಬರ್ ಅಥ್ಲೆಟಿಕ್ಸ್ ಮೀಟ್‌ನ 200 ಮೀ. ಓಟದಲ್ಲಿ 23.25 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿದ ಹಿಮಾ 4ನೇ ಬಂಗಾರದ ಪದಕ ಜಯಿಸಿದ್ದರು.
ಇದೀಗ 400 ಮೀ ಓಟದಲ್ಲಿ ಕೇವಲ 52.09 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಹಿಮಾ ಇದೇ ತಿಂಗಳಲ್ಲಿ 20 ದಿನಗಳೊಳಗೆ 5ನೇ ಚಿನ್ನ ಗೆದ್ದರು. ಒಟ್ಟಾರೆ ತವರೂರು ಅಸ್ಸಾಂ ಪ್ರವಾಹದಲ್ಲಿ ಮುಳುಗಿದ್ದರೂ ಕೂಡ ಹಿಮಾ ದಾಸ್ರ ಚಿನ್ನದ ಬೇಟೆ ಮುಂದುವರೆದಿದೆ.