ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ವೇಟ್ ಲಿಫ್ಟಿಂಗ್ನ 96 ಕೆಜಿ ವಿಭಾಗದಲ್ಲಿ ವಿಕಾಸ್ ಠಾಕೂರ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರ ಎತ್ತುವಿಕೆಯಲ್ಲಿ ದೇಶಕ್ಕೆ 8ನೇ ಪದಕ ಒದಗಿಬಂದಿದೆ.
-
Ludhiana, Punjab | It's a day of great happiness. I was praying to god for a gift of a medal since morning today, on my birthday. He fulfilled my wish!: Asha Thakur, mother of Indian weightlifter Vikas Thakur who won a silver in Men's 96Kg pic.twitter.com/JIXdBBoZUm
— ANI (@ANI) August 2, 2022 " class="align-text-top noRightClick twitterSection" data="
">Ludhiana, Punjab | It's a day of great happiness. I was praying to god for a gift of a medal since morning today, on my birthday. He fulfilled my wish!: Asha Thakur, mother of Indian weightlifter Vikas Thakur who won a silver in Men's 96Kg pic.twitter.com/JIXdBBoZUm
— ANI (@ANI) August 2, 2022Ludhiana, Punjab | It's a day of great happiness. I was praying to god for a gift of a medal since morning today, on my birthday. He fulfilled my wish!: Asha Thakur, mother of Indian weightlifter Vikas Thakur who won a silver in Men's 96Kg pic.twitter.com/JIXdBBoZUm
— ANI (@ANI) August 2, 2022
ಅಮ್ಮನ ಹುಟ್ಟುಹಬ್ಬದಂದೇ ಸಾಧನೆ: ತಾಯಿಯ ಹುಟ್ಟುಹಬ್ಬದಂದೇ ವಿಕಾಸ್ ಠಾಕೂರ್ ಈ ಮಹತ್ವದ ಸಾಧನೆ ಮಾಡಿದ್ದಾರೆ. ಫೈನಲ್ ಪಂದ್ಯದಲ್ಲಿ ಒಟ್ಟು 346 ಕೆಜಿ ಭಾರ (155+199ಕೆಜಿ) ಎತ್ತಿರುವ ವಿಕಾಸ್ ಬೆಳ್ಳಿ ಗೆದ್ದರು. ಮಗನ ಸಾಧನೆಗೆ ತಂದೆ ಬಿ.ಎಲ್.ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸುತ್ತಾ, "ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪುತ್ರ ಹ್ಯಾಟ್ರಿಕ್ ಪದಕ ಸಾಧನೆ ಮಾಡಿದ್ದಾನೆ. 4 ವರ್ಷಗಳ ಕಠಿಣ ಪರಿಶ್ರಮ ಫಲ ನೀಡಿದೆ" ಎಂದರು.
ವಿಕಾಸ್ ಠಾಕೂರ್ ತಾಯಿ ಆಶಾ ಪ್ರತಿಕ್ರಿಯಿಸಿ, "ಇದು ಬಹಳ ಸಂತೋಷದ ದಿನ. ನನ್ನ ಹುಟ್ಟುಹಬ್ಬದ ದಿನವಾದ ಇಂದು ಮಗ ಪದಕದ ಉಡುಗೊರೆ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದೆ. ನನ್ನ ಆಸೆ ಈಡೇರಿದೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಿಕಾಸ್ ಠಾಕೂರ್ ಈ ಹಿಂದೆ 2014ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಹಾಗೂ 2018ರ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ 5 ಚಿನ್ನ, 4 ಬೆಳ್ಳಿ, ಮೂರು ಕಂಚು ಗೆಲ್ಲುವ ಮೂಲಕ 12 ಪದಕ ತನ್ನದಾಗಿಸಿಕೊಂಡಿದೆ.