ETV Bharat / sports

ಕಾಮನ್​ವೆಲ್ತ್​ನಲ್ಲಿ ಚೊಚ್ಚಲ ಚಿನ್ನ ಗೆದ್ದ ಪಿ.ವಿ.ಸಿಂಧು: 4ನೇ ಸ್ಥಾನಕ್ಕೇರಿದ ಭಾರತ - ಈಟಿವಿ ಭಾರತ

ಕಾಮನ್​ವೆಲ್ತ್ ಗೇಮ್ಸ್​​ನ ಬ್ಯಾಡ್ಮಿಂಟನ್‌ ಪಂದ್ಯದಲ್ಲಿ ಎರಡು ಬಾರಿಯ ಒಲಿಂಪಿಕ್​ ಪದಕ ವಿಜೇತೆ ಪಿ.ವಿ.ಸಿಂಧು ಚೊಚ್ಚಲ ಚಿನ್ನದ ಪದಕ ಗೆದ್ದಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಅವರು ಕೆನಡಾ ಆಟಗಾರ್ತಿಯನ್ನು ಮಣಿಸಿದರು.

PV Sindhu wins gold
PV Sindhu wins gold
author img

By

Published : Aug 8, 2022, 3:02 PM IST

Updated : Aug 8, 2022, 3:56 PM IST

ಬರ್ಮಿಂಗ್​ಹ್ಯಾಮ್​: ಕಾಮನ್​ವೆಲ್ತ್​​ ಗೇಮ್ಸ್​​ನ ಮಹಿಳೆಯರ ಸಿಂಗಲ್ಸ್​ ಫೈನಲ್​​​ನಲ್ಲಿ ಪಿ.ವಿ.ಸಿಂಧು ಚೊಚ್ಚಲ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೆ ಜಿಗಿದಿದೆ. ಫೈನಲ್ ಪಂದ್ಯದಲ್ಲಿ ಕೆನಡಾ ಸ್ಪರ್ಧಾಳು ವಿರುದ್ಧ 21-15 21-13 ಅಂತರದಿಂದ ಸಿಂಧು ಗೆಲುವು ದಾಖಲಿಸಿದರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಜಿಯಾ ಮಿನ್ ವಿರುದ್ಧ ಗೆಲುವು ಸಾಧಿಸಿ ಫೈನಲ್​ಗೆ ಲಗ್ಗೆ ಹಾಕಿದ್ದರು. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಈ ಹಿಂದೆ 2014ರಲ್ಲಿ ಕಾಮನ್‌ವೆಲ್ತ್‌ನಲ್ಲಿ ಕಂಚು ಹಾಗೂ 2018ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತ ಇಲ್ಲಿಯವರೆಗೆ 19 ಚಿನ್ನ, 15 ಬೆಳ್ಳಿ, 22 ಕಂಚಿನೊಂದಿಗೆ ಒಟ್ಟು 56 ಪದಕ ಸಂಪಾದಿಸಿದೆ. ಈ ಮೂಲಕ ಪದಕಗಳ ಸಾಲಿನಲ್ಲಿ 4ನೇ ಸ್ಥಾನದಲ್ಲಿದೆ.

  • The phenomenal @Pvsindhu1 is a champion of champions! She repeatedly shows what excellence is all about. Her dedication and commitment is awe-inspiring. Congratulations to her on winning the Gold medal at the CWG. Wishing her the best for her future endeavours. #Cheer4India pic.twitter.com/WVLeZNMnCG

    — Narendra Modi (@narendramodi) August 8, 2022 " class="align-text-top noRightClick twitterSection" data=" ">

ಮೋದಿ ಅಭಿನಂದನೆ: ಮಹಿಳಾ ಸಿಂಗಲ್ಸ್​​ ಬ್ಯಾಡ್ಮಿಂಟನ್​​ನಲ್ಲಿ ಚಿನ್ನ ಗೆದ್ದಿರುವ ಪಿ.ಪಿ. ಸಿಂಧು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದು, ಸಿಂಧು ಚಾಂಪಿಯನ್​​ಗಳ ಚಾಂಪಿಯನ್​ ಆಗಿದ್ದಾರೆ. ಆಟದಲ್ಲಿ ಅವರ ಬದ್ಧತೆ ನಿಜಕ್ಕೂ ವಿಸ್ಮಯಕಾರಿ. ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಅಭಿನಂದನೆಗಳು, ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆ ಎಂದಿದ್ದಾರೆ.

ಇದನ್ನೂ ಓದಿರಿ: ಕಾಮನ್​ವೆಲ್ತ್​ಗೆ ಇಂದು ತೆರೆ..10 ದಿನದಲ್ಲಿ ಭಾರತ 18 ಚಿನ್ನ ಸೇರಿ 55 ಪದಕಗಳ ಬೇಟೆ

Last Updated : Aug 8, 2022, 3:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.