ETV Bharat / sports

ಕಾಮನ್​ವೆಲ್ತ್​ ಗೇಮ್ಸ್​: ಪಾಕಿಸ್ತಾನ ಜಟ್ಟಿಯ ಎತ್ತೆಸೆದು ಚಿನ್ನ ಗೆದ್ದ ಭಾರತದ ದೀಪಕ್​ ಪೂನಿಯಾ - ಕಾಮನ್​ವೆಲ್ತ್​ ಗೇಮ್ಸ್​

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತ ಕುಸ್ತಿಗಳ ಪರಾಕ್ರಮಕ್ಕೆ 5 ಪದಕಗಳು ಒಲಿದಿವೆ. ಇದರಲ್ಲಿ ದೀಪಕ್​ ಪೂನಿಯಾ ಅವರು ಪಾಕಿಸ್ತಾನದ ಆಟಗಾರನಿಗೆ ಮಣ್ಣು ಮುಕ್ಕಿಸಿ ಚಿನ್ನ ಜಯಿಸಿದರು.

deepak
ಭಾರತದ ದೀಪಕ್​ ಪೂನಿಯಾ
author img

By

Published : Aug 6, 2022, 8:59 AM IST

ಬರ್ಮಿಂಗ್​ಹ್ಯಾಮ್​(ಯುಕೆ): ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ಕುಸ್ತಿಪಟುಗಳ ಪಟ್ಟುಗಳಿಗೆ ಚಿನ್ನ ಕೊರಳೇರುತ್ತಿದೆ. ಭಜರಂಗ್​ ಪೂನಿಯಾ, ಸಾಕ್ಷಿ ಮಲಿಕ್​ ಬಳಿಕ ದೀಪಕ್​ ಪೂನಿಯಾ ಅವರು ಕೂಡ ಪಾಕಿಸ್ತಾನದ ಜಟ್ಟಿಯನ್ನು ಬಗ್ಗುಬಡಿದು ಸ್ವರ್ಣ ಸಾಧನೆ ಮಾಡಿದರು.

ಫ್ರೀಸ್ಟೈಲ್ 86 ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ಮೊಹಮ್ಮದ್ ಇನಾಮ್​ಗೆ ಭಾರತದ ಕುಸ್ತಿ ಕಲಿ ದೀಪಕ್​ ಪೂನಿಯಾ ಸೋಲಿನ ರುಚಿ ತೋರಿಸಿದರು. ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ದೀಪಕ್​ ಪಾಕಿ ಆಟಗಾರನಿಗೆ ಒಂದೇ ಒಂದು ಅವಕಾಶ ನೀಡದೇ 3-0 ಅಂತರದಲ್ಲಿ ಪಂದ್ಯ ಗೆದ್ದರು. ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ದೀಪಕ್ ಪೂನಿಯಾಗೆ ಇದು ಮೊದಲ ಪದಕವಾಗಿದೆ.

ಓದಿ: ಕಾಮನ್​ವೆಲ್ತ್​ ಗೇಮ್ಸ್​: 26 ಸೆಕೆಂಡಲ್ಲಿ ಕಂಚು ಗೆದ್ದ ದಿವ್ಯಾ, ಪ್ಯಾರಾ ಪವರ್​ ಲಿಫ್ಟರ್​ ಸುಧೀರ್​ಗೆ ಸ್ವರ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.