ಬರ್ಮಿಂಗ್ಹ್ಯಾಮ್(ಇಂಗ್ಲೆಂಡ್): ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತೀಯ ಪ್ರತಿಭೆಗಳು ಹೊಸ ಹೊಸ ದಾಖಲೆ ನಿರ್ಮಿಸುತ್ತಿದ್ದು, ಒಂದರ ಹಿಂದೆ ಮತ್ತೊಂದು ಪದಕ ಗೆಲ್ಲುತ್ತಿದ್ದಾರೆ. ಇದೀಗ ಭಾರತೀಯ ಯೋಧ ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್ ಚೇಸ್ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದು ಹೊಸದೊಂದು ಇತಿಹಾಸ ನಿರ್ಮಿಸಿದ್ದಾರೆ.
27 ವರ್ಷದ ಆರ್ಮಿ ಮ್ಯಾನ್ ಅವಿನಾಶ್ ಸೇಬಲ್ ಸ್ಟೀಪಲ್ ಚೇಸ್ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ ಈ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಪದಕ ದಕ್ಕಿಸಿಕೊಟ್ಟಿದ್ದಾರೆ. ಮೂಲತಃ ಮಹಾರಾಷ್ಟ್ರದ ಬೀಡ್ನವರಾಗಿರುವ ಅವಿನಾಶ್ 18 ವರ್ಷದವರಾಗಿದ್ದಾಗ ಭಾರತೀಯ ಸೇನೆ ಸೇರಿಕೊಳ್ಳುತ್ತಾರೆ. ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಸೇವೆ ಸಲ್ಲಿಸಿರುವ ಇವರು, ಸ್ಟೀಪಲ್ ಚೇಸ್ನಲ್ಲಿ ಪದಕ ಗೆದ್ದು, ಮಹತ್ವದ ಸಾಧನೆ ಮಾಡಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ 8:11:20 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಗೆದ್ದಿದ್ದು, ಕೀನ್ಯಾದ ಅಬ್ರಹಾಂ ಕಿಬಿವೋಟ್ 8:11:15 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಈ ಹಿಂದೆ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್ಶಿಪ್ನಲ್ಲಿ 8:31:75 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ, 11ನೆ ಸ್ಥಾನ ಪಡೆದಿದ್ದ ಇವರು, ಸದ್ಯ ಬೆಳ್ಳಿ ಪದಕಕ್ಕೆ ಮುತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಬಡ ಕುಟುಂಬದಿಂದ ಬಂದ ಅವಿನಾಶ್: ಮಹಾರಾಷ್ಟ್ರದ ಸಾಧಾರಣ ಕುಟುಂಬದಲ್ಲಿ ಜನಿಸಿರುವ ಅವಿನಾಶ್ ಓರ್ವ ರೈತನ ಮಗ. ಶಾಲೆಗೆ ಹೋಗಲು ಪ್ರತಿದಿನ 6 ಕಿಮೀ ನಡೆದು ಹೋಗಬೇಕಾಗಿತ್ತು. ಅವಿನಾಶ್ ಪ್ರತಿಭೆ ಗುರುತಿಸಿದ್ದ ಶಾಲಾ ಶಿಕ್ಷಕರು ಕ್ರೀಡಾಕೂಟಗಳಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುತ್ತಿದ್ದರು. ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಭಾಗಿಯಾಗುತ್ತಿದ್ದ ಇವರು, ಅನೇಕ ಪ್ರಶಸ್ತಿಗಳನ್ನು ಸಹ ಮುಡಿಗೇರಿಸಿಕೊಂಡಿದ್ದರು. 12ನೇ ತರಗತಿ ವ್ಯಾಸಂಗ ಮುಗಿಯುತ್ತಿದ್ದಂತೆ 18ನೇ ವಯಸ್ಸಿನಲ್ಲಿ ಭಾರತೀಯ ಸೇನೆ ಸೇರಿ, ಸಿಯಾಚಿನ್ನಲ್ಲಿ ಕೆಲಸ ಆರಂಭಿಸುತ್ತಾರೆ. ಈ ವೇಳೆ ಸೇನೆಯಲ್ಲಿ ಆಯೋಜನೆಗೊಳ್ಳುತ್ತಿದ್ದ ಚಾಂಪಿಯನ್ಶಿಪ್ಗಳಲ್ಲಿ ಭಾಗಿಯಾಗಿ, ಸ್ಟೀಪಲ್ ಚೇಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಶುರು ಮಾಡುತ್ತಾರೆ.
-
SILVER FOR SABLE🥈@avinash3000m wins a 🥈in Men's 3000m Steeplechase event at #CommonwealthGames2022 with a Personal Best and National Record (8.11.20)
— SAI Media (@Media_SAI) August 6, 2022 " class="align-text-top noRightClick twitterSection" data="
Congratulations Avinash. India is very proud of you 🤩#Cheer4India #India4CWG2022 pic.twitter.com/lSmP1Ws4sk
">SILVER FOR SABLE🥈@avinash3000m wins a 🥈in Men's 3000m Steeplechase event at #CommonwealthGames2022 with a Personal Best and National Record (8.11.20)
— SAI Media (@Media_SAI) August 6, 2022
Congratulations Avinash. India is very proud of you 🤩#Cheer4India #India4CWG2022 pic.twitter.com/lSmP1Ws4skSILVER FOR SABLE🥈@avinash3000m wins a 🥈in Men's 3000m Steeplechase event at #CommonwealthGames2022 with a Personal Best and National Record (8.11.20)
— SAI Media (@Media_SAI) August 6, 2022
Congratulations Avinash. India is very proud of you 🤩#Cheer4India #India4CWG2022 pic.twitter.com/lSmP1Ws4sk
ಇದನ್ನೂ ಓದಿರಿ: CWG 2022: 10,000 ಕಿ.ಮೀ ನಡಿಗೆಯಲ್ಲಿ ಬೆಳ್ಳಿ ಗೆದ್ದು ಇತಿಹಾಸ ಸೃಷ್ಟಿಸಿದ ಪ್ರಿಯಾಂಕಾ ಗೋಸ್ವಾಮಿ
2019ರಲ್ಲಿ ಆಯೋಜನೆಗೊಂಡಿದ್ದ ವಿಶ್ವ ಚಾಂಪಿಯನ್ಶಿಪ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ. ಅದೇ ವರ್ಷ ದೋಹಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಗೆಲ್ಲುತ್ತಾರೆ. ಇದೀಗ, ಕಾಮನ್ವೆಲ್ತ್ನಲ್ಲಿ ಬೆಳ್ಳಿಗೆ ಮುತ್ತಿಕ್ಕಿ, ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಇವರ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅಭಿನಂದನೆ ಸಲ್ಲಿಸಿದ್ದಾರೆ.