ಮ್ಯಾಡ್ರಿಡ್(ಸ್ಪೇನ್): ಪೋರ್ಚುಗೀಸ್ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ಕ್ಲಬ್‌ನ ಹುಡುಕಾಟದ ನಡುವೆ ತಮ್ಮ ಹಿಂದಿನ ರಿಯಲ್ ಮ್ಯಾಡ್ರಿಡ್ ಕ್ಲಬ್ ಮೈದಾನದಲ್ಲಿ ತರಬೇತಿ ಪುನಾರಂಭಿಸಿದ್ದಾರೆ. ಕಳೆದ ಶನಿವಾರ ಮೊರಾಕ್ಕೊ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದ ದ್ವಿತೀಯಾರ್ಧದಲ್ಲಿ ಬದಲಿ ಆಟಗಾರನಾಗಿ ಇವರು ಕಣಕ್ಕಿಳಿದಿದ್ದರು.
ಕಳೆದ ತಿಂಗಳು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ನಿಂದ ರೊನಾಲ್ಡೊ ಹೊರಬಂದಿದ್ದರು. ಮುಂದಿನ ಜನವರಿಯಲ್ಲಿ ಸೌದಿ ಅರೇಬಿಯಾದ ಅಲ್ ನಸ್ರ್ ಕ್ಲಬ್ ಸೇರುತ್ತಾರೆ ಎಂಬ ವದಂತಿಗಳಿವೆ. ಈ ನಡುವೆ ರಿಯಲ್ ಮ್ಯಾಡ್ರಿಡ್ ಸಿಟಿಯಲ್ಲಿ ಅಭ್ಯಾಸ ಮಾಡಲು ಅನುಮತಿ ಕೋರಿದ್ದರು.
ರಿಯಲ್ ಮ್ಯಾಡ್ರಿಡ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಗೋಲುಗಳನ್ನು ಗಳಿಸಿದ ಆಟಗಾರ ರೊನಾಲ್ಡೊ, ತನ್ನ ತಂಡದೊಂದಿಗಿನ 9 ಆವೃತ್ತಿಗಳಲ್ಲಿ ಎರಡು ಬಾರಿ ಲಾ ಲಿಗಾ ಚಾಂಪಿಯನ್‌ಶಿಪ್ ಮತ್ತು ನಾಲ್ಕು ಚಾಂಪಿಯನ್ಸ್ ಲೀಗ್ ಗೆದ್ದಿದ್ದಾರೆ.
ಇದನ್ನೂ ಓದಿ: ಮೊರಾಕ್ಕೊ ಮೊದಲ ಫೈನಲ್ ಆಸೆಗೆ ತಣ್ಣೀರೆರಚಿದ ಫ್ರಾನ್ಸ್... 2-0 ಗೋಲುಗಳಿಂದ ಗೆದ್ದು ಫೈನಲ್ಗೆ ಎಂಟ್ರಿ