ಟೋಕಿಯೋ: ಶುಕ್ರವಾರ ಪತ್ತೆಯಾದ ಒಂದು ಪ್ರಕರಣ ಸೇರಿದಂತೆ ಟೋಕಿಯೋ ಒಲಿಂಪಿಕ್ಸ್ ಗ್ರಾಮದಲ್ಲಿ ಮೂರು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮೂವರು ಸೋಂಕಿತರಲ್ಲಿ ಕ್ರೀಡಾಪಟುಗಳಿಗಾಗಿ ಗೊತ್ತುಪಡಿಸಿದ ಗೇಮ್ಸ್ ಹೋಟೆಲ್‌ನಲ್ಲಿ ಒಬ್ಬರು ತಂಗಿದ್ದರೆಂದು ತಿಳಿದುಬಂದಿದೆ. ಹಾಗಾಗಿ ಅಲ್ಲಿ ತಂಗಿರುವ ಇತರ ಕ್ರೀಡಾಪಟುಗಳಿಗೂ ಸೋಂಕು ತಗಲಬಹುದಾದ ಆತಂಕ ಎದುರಾಗಿದೆ. ಕ್ರೀಡಾಪಟುಗಳು ಕ್ರೀಡಾಗ್ರಾಮದಲ್ಲಿ ಉಳಿದು ಸೋಂಕಿಗೆ ತುತ್ತಾಗಿರವ ಮೊದಲ ಉದಾಹರಣೆ ಇದಾಗಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಸಂಬಂಧಿಸಿದಂತೆ ಮೂವರು ಅಥ್ಲೀಟ್ ಸೇರಿದಂತೆ ಒಟ್ಟಾರೆ 10 ಪ್ರಕರಣಗಳು ಶನಿವಾರ ಪತ್ತೆಯಾಗಿದೆ ಎಂದು ಒಲಿಂಪಿಕ್ಸ್ ಆಯೋಜಕರು ತಿಳಿಸಿದ್ದಾರೆ. ಇವರಲ್ಲಿ ಐವರು ಸಹಾಯಕ ಸಿಬ್ಬಂದಿಗಳಾದರೆ, ಒಬ್ಬ ಕಾಂಟ್ರ್ಯಾಕ್ಟರ್, ಒಬ್ಬ ಪತ್ರಕರ್ತ ಮತ್ತು ಮೂವರು ಅಥ್ಲೀಟ್‌ಗಳಾಗಿದ್ದಾರೆ. ಒಲಿಂಪಿಕ್ಸ್ ಸಮಿತಿಯ ದಾಖಲೆಯ ಪ್ರಕಾರ, ಒಟ್ಟು 55 ಕೋವಿಡ್ ಪ್ರಕರಣ ದಾಖಲಾಗಿವೆ.
ಆದರೆ ಆಯೋಜಕರು ಇಬ್ಬರು ಅಥ್ಲೀಟ್ಗಳನ್ನು ಎಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿಲಿಲ್ಲ.
ಇದನ್ನೂ ಓದಿ:Tokyo Olympics ಗ್ರಾಮದಲ್ಲಿ ಮೊದಲ ಕೋವಿಡ್ ಪ್ರಕರಣ ಪತ್ತೆ!