ETV Bharat / sports

ತರಬೇತಿಗೆ ಹಣದ ಕೊರತೆ.. ಪ್ರಾಯೋಜಕರಿಲ್ಲದೆ ಕಾರು ಮಾರಾಟಕ್ಕೆ ಮುಂದಾದ ದ್ಯುತೀ ಚಾಂದ್​

author img

By

Published : Jul 11, 2020, 8:06 PM IST

ಕೊರೊನಾ ವೈರಸ್ ಕಾರಣದಿಂದಾಗಿ ಒಲಿಂಪಿಕ್ಸ್ ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಪ್ರಾಯೋಜಕರು ನನಗೆ ನೀಡಿದ ಹಣವನ್ನು ನಾನು ಖರ್ಚು ಮಾಡಿಕೊಂಡಿದ್ದೇನೆ. ಈಗ, ತರಬೇತಿಗಾಗಿ ನನಗೆ ಹಣದ ಅವಶ್ಯಕತೆಯಿದೆ..

Indian athlete Dutee Chand
Indian athleಕಾರು ಮಾರಾಟಕ್ಕೆ ಮುಂದಾದ ದ್ಯುತೀ ಚಾಂದ್​te Dutee Chand

ಹೈದರಾಬಾದ್​ : ಭಾರತದ ಪ್ರಸಿದ್ಧ ಆಥ್ಲೀಟ್​ ದ್ಯುತೀ ಚಾಂದ್​ 2021ಕ್ಕೆ ಮುಂದೂಡಲ್ಪಟ್ಟಿರುವ 2021 ಒಲಿಂಪಿಕ್ಸ್​ ತರಬೇತಿ ಹಣಕಾಸಿನ ಕೊರತೆಯಿರುವುದರಿಂದ ತಮ್ಮ ದುಬಾರಿ ಬೆಲೆಯ ಬಿಎಂಡಬ್ಲೂ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನಿಗದಿತ ಒಲಿಂಪಿಕ್ಸ್‌ನ 2021ಕ್ಕೆ ಮುಂದೂಡಲ್ಪಟ್ಟಿದ್ದರಿಂದ ರಾಜ್ಯ ಸರ್ಕಾರ ಮತ್ತು ಪ್ರಾಯೋಜಕರು ತಮಗೆ ತರಬೇತಿಗೆಂದು ನೀಡಿದ್ದ ಹಣವೆಲ್ಲಾ ಖರ್ಚಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.

ದ್ಯುತೀ 2015ರಲ್ಲಿ ಈ ಕಾರನ್ನು 30 ಲಕ್ಷ ರೂ. ನೀಡಿ ಖರೀದಿಸಿದ್ದರು. ಈ ಕಾರನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದ ಅವರು, ಕೆಲವೇ ಕ್ಷಣಗಳಲ್ಲಿ ಆ ಪೋಸ್ಟ್‌ನ ಡಿಲೀಟ್​ ಮಾಡಿದ್ದರು.

Indian athlete Dutee Chand
ದ್ಯುತೀ ಚಾಂದ್​

"ಇಲ್ಲಿಯವರೆಗೆ ನನ್ನ ತರಬೇತಿ ಸಾಕಷ್ಟು ಉತ್ತಮವಾಗಿ ನಡೆದಿದೆ. ನಾನು ಭುವನೇಶ್ವರದಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಈ ಮೊದಲು, ಟೊಕಿಯೊ ಒಲಿಂಪಿಕ್ಸ್​ಗಾಗಿ ನಮ್ಮ ರಾಜ್ಯ ಸರ್ಕಾರವು ನನಗೆ ನೆರವು ನೀಡಿತ್ತು. ಆದರೆ, ಕೊರೊನಾ ವೈರಸ್ ಕಾರಣದಿಂದಾಗಿ ಒಲಿಂಪಿಕ್ಸ್ ಮುಂದೂಡಲಾಗಿದೆ. ಈ ಸಂದರ್ಭದಲ್ಲಿ ಪ್ರಾಯೋಜಕರು ನನಗೆ ನೀಡಿದ ಹಣವನ್ನು ನಾನು ಖರ್ಚು ಮಾಡಿಕೊಂಡಿದ್ದೇನೆ. ಈಗ, ತರಬೇತಿಗಾಗಿ ನನಗೆ ಹಣದ ಅವಶ್ಯಕತೆಯಿದೆ. ನನಗೆ ಹೊಸ ಪ್ರಾಯೋಜಕರ ಅಗತ್ಯವಿದೆ. ಆದರೆ, ಆದರೆ ಕೊರೊನಾ ವೈರಸ್ ಕಾರಣ ನಾನು ಪ್ರಾಯೋಜಕರನ್ನು ಹುಡುಕಲು ಕಷ್ಟಪಡುತ್ತಿದ್ದೇನೆ. ಸದ್ಯಕ್ಕೆ ತರಬೇತಿಗೆ ಹಣ ಹೊಂದಿಸಲು ನನ್ನ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ" ಎಂದು ದ್ಯುತೀ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇತ್ತೀಚೆಗೆ ಅರ್ಜುನ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ ದ್ಯುತೀ, ಕೋವಿಡ್​-19 ಕ್ರೀಡೆಗಳ ಮೇಲೆ ಪರಿಣಾಮ ಬೀರಿದೆ. ಈ ಸಂದರ್ಭದಲ್ಲಿ ಯಾವುದೇ ಪ್ರಾಯೋಜಕರು ಕೂಡ ನಮ್ಮನ್ನು ಬೆಂಬಲಿಸುವ ಪ್ರಯತ್ನ ಮಾಡುತ್ತಿಲ್ಲ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.