ನವದೆಹಲಿ: ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಕೋಚ್ ಜರ್ಮನ್ನ ಕ್ಲಾಸ್ ಬಾರ್ಟೊನೀಜ್ ಅವರ ಅವಧಿಯನ್ನ 2024ರ ಪ್ಯಾರಿಸ್ ಒಲಿಂಪಿಕ್ಸ್ ವರೆಗೆ ವಿಸ್ತರಿಸಲಾಗಿದೆ ಎಂದು ಭಾರತೀಯ ಆಥ್ಲೆಟಿಕ್ಸ್ ಫಡೆರೇಷನ್(AFI) ಭಾನುವಾರ ಖಚಿತಪಡಿಸಿದೆ.
Neeraj Chopra's coach Klaus Bartonietz: ಟೋಕಿಯೋ ಒಲಿಂಪಿಕ್ಸ್ನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದರು. ಇದು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಪದಕವಾಗಿತ್ತು. ತಮ್ಮ ಐತಿಹಾಸಿಕ ಸಾಧನೆಗೆ ನೆರವಾದ ಜರ್ಮನ್ ಕೋಚ್ ಜೊತೆ ಮುಂದುವರಿಯಲು ಬಯಸಿದ್ದರಿಂದ ಫೆಡರೇಷನ್ ಮುಂದಿನ ಪ್ಯಾರೀಸ್ ಒಲಿಂಪಿಕ್ಸ್ವರೆಗೆ ಕ್ಲಾಸ್ರನ್ನು ಕೋಚ್ ಆಗಿ ಮುಂದುವರಿಸಲು ನಿರ್ಧರಿಸಿದೆ.
"ಒಲಿಂಪಿಕ್ಸ್ನಲ್ಲಿ ಪದಕ ಚಿನ್ನದ ಪದಕ ಗೆದ್ದುಕೊಡ್ಡ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಅವರಿಗೆ ಕೋಚ್ ಆಗಿ ಡಾ.ಕ್ಲಾಸ್ ಬಾರ್ಟೊನೀಜ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್‌ನವರೆಗೂ ಮುಂದುವರಿಯಲಿದ್ದಾರೆ" ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್‌ಐ) ಪ್ರಕಟಣೆಯಲ್ಲಿ ತಿಳಿಸಿದೆ.
2018ರಲ್ಲಿ ನೀರಜ್ ಅವರು ಮೊಣಕೈ ಶಸ್ತ್ರಚಿಕಿತ್ಸೆ ಒಳಗಾಗಿ ಚೇತರಿಕೆ ಕಂಡ ನಂತರ ತಮ್ಮದೇ ದೇಶದ ಜಾವಲಿನ್ನಲ್ಲಿ ವಿಶ್ವ ದಾಖಲೆ ಹೊಂದಿರುವ ಯುವೆ ಹಾನ್ ಅವರ ನಂತರ ಕ್ಲಾಸ್ ಬಾರ್ಟೋನೀಜ್ ಯುವ ಜಾವಲಿನ್ ಎಸೆತಗಾರನ ತರಬೇತುದಾರನಾಗಿ ನೇಮಕವಾಗಿದ್ದರು.
ಇದನ್ನೂ ಓದಿ:ಭಾರತ ವಿರುದ್ಧದ ಏಕದಿನ ಸರಣಿಗೆ 17 ಸದಸ್ಯರ ತಂಡ ಪ್ರಕಟಿಸಿದ ದ. ಆಫ್ರಿಕಾ