ETV Bharat / sports

ಕಾಮನ್​ವೆಲ್ತ್​ ಗೇಮ್ಸ್​: 109 ಕೆಜಿ ವಿಭಾಗದಲ್ಲಿ ಗುರುದೀಪ್​ ಸಿಂಗ್​ಗೆ ಕಂಚು - ಗುರುದೀಪ್​ ಸಿಂಗ್​ಗೆ ಕಂಚು

ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾರತದ ವೇಟ್​ಲಿಫ್ಟರ್​ ಗುರುದೀಪ್​ಸಿಂಗ್ ಅವರು ಕಂಚಿನ ಪದಕ ಜಯಿಸಿದರು. ಇದು ವೇಟ್​ಲಿಫ್ಟಿಂಗ್​ನಲ್ಲಿ 9ನೇ ಪದಕವಾಗಿದೆ.

gurdeep-singh
ಗುರುದೀಪ್​ ಸಿಂಗ್
author img

By

Published : Aug 4, 2022, 11:16 AM IST

ನವದೆಹಲಿ: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ 109 + ಕೆಜಿ ಫೈನಲ್‌ನಲ್ಲಿ ಭಾರತದ ಗುರುದೀಪ್​ ಸಿಂಗ್​ ಕಂಚಿನ ಪದಕ ಜಯಿಸಿದರು. ಫೈನಲ್‌ನಲ್ಲಿ ಗುರುದೀಪ್​ ಸಿಂಗ್ ಸ್ನ್ಯಾಚ್​ನಲ್ಲಿ 167, ಕ್ಲೀನ್​ ಅಂಡ್​ ಜರ್ಕ್​ನಲ್ಲಿ 223 ಕೆಜಿ ಭಾರ ಎತ್ತಿದರು. ಒಟ್ಟು 390 ಕೆಜಿ ತೂಕವನ್ನು ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು.

ಸ್ನ್ಯಾಚ್​ನಲ್ಲಿ ಮೊದಲ ಪ್ರಯತ್ನದಲ್ಲಿ 167 ಕೆಜಿ ಎತ್ತುವಲ್ಲಿ ವಿಫಲರಾದ ಗುರುದೀಪ್​, ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾದರು. ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ ಇನ್ನೂ 6 ಕೆಜಿ ಹೆಚ್ಚಿಸಿಕೊಂಡರು ಆದರೆ, ಪೂರ್ಣಗೊಳಿಸುವಲ್ಲಿ ವಿಫಲವಾದರು. ಕ್ಲೀನ್ ಮತ್ತು ಜರ್ಕ್​ನಲ್ಲಿ ಮೊದಲ ಯತ್ನದಲ್ಲಿ 207 ಕೆಜಿ ಎತ್ತಿದರು. ಎರಡನೇ ಪ್ರಯತ್ನ ವಿಫಲವಾದರೆ, ಮೂರನೇ ಮತ್ತು ಅಂತಿಮ ಪ್ರಯತ್ನದಲ್ಲಿ 223 ಕೆಜಿಯನ್ನು ಯಶಸ್ವಿಯಾಗಿ ಮುಗಿಸಿದರು. ಸಿಂಗ್​ ಒಟ್ಟು 390 ಕೆಜಿ ಭಾರ ಎತ್ತಿದರು.

  • Hardwork and dedication leads to outstanding outcomes…this is what Gurdeep Singh has shown by winning the Bronze medal in weightlifting at the CWG. He has furthered the spirit of joy among our citizens. Congratulations and best wishes to him. pic.twitter.com/DoudsoAKEG

    — Narendra Modi (@narendramodi) August 4, 2022 " class="align-text-top noRightClick twitterSection" data=" ">

ಇನ್ನೊಂದೆಡೆ ಭಾರತದ ಮಹಿಳಾ ವೇಟ್‌ಲಿಫ್ಟರ್ ಪೂರ್ಣಿಮಾ ಪಾಂಡೆ 87 + ಕೆಜಿ ಫೈನಲ್‌ನಲ್ಲಿ ಆರನೇ ಸ್ಥಾನ ಗಳಿಸಿದರು. ಸ್ನ್ಯಾಚ್​ನಲ್ಲಿ 103 ಕೆಜಿ, ಕ್ಲೀನ್ ಅಂಡ್​ ಜರ್ಕ್​ನಲ್ಲಿ 125 ಕೆಜಿ ಸೇರಿ 228 ಕೆಜಿ ಮಾತ್ರ ಎತ್ತಿದರು. ಇದರಿಂದ 6ನೇ ಸ್ಥಾನಕ್ಕೆ ಕುಸಿದು ಪದಕದಾಸೆ ಬಿಟ್ಟರು.

ರಾಷ್ಟ್ರಪತಿ, ಪ್ರಧಾನಿ ಶ್ಲಾಘನೆ: ಗುರುದೀಪ್ ಸಿಂಗ್ ಅವರ ಸಾಧನೆಗೆ ಅಭಿನಂದನೆಗಳು. ಕಾಮನ್‌ವೆಲ್ತ್ ಗೇಮ್ಸ್‌ನ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದೀರಿ. ಮುಂಬರುವ ದಿನಗಳಲ್ಲಿ ಇನ್ನಷ್ಟು ಯಶಸ್ಸಿನ ಹೊಸ ಎತ್ತರಗಳನ್ನು ಸಂಪಾದಿಸಿ ಎಂದು ಶುಭಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಟ್ವೀಟ್​ ಮಾಡಿದ್ದಾರೆ.

ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಅತ್ಯುತ್ತಮ ಫಲಿತಾಂಶಗಳು ಹೊರಹೊಮ್ಮುವಂತೆ ಮಾಡುತ್ತದೆ. ಗುರುದೀಪ್ ಸಿಂಗ್ ಅದನ್ನು ಕಾಮನ್​ವೆಲ್ತ್​ನಲ್ಲಿ ತೋರಿಸಿಕೊಟ್ಟಿದ್ದಾರೆ. ದೇಶದ ಹಮ್ಮೆಯನ್ನು ಹೆಚ್ಚಿಸಿದ ಅವರಿಗೆ ಅಭಿನಂದನೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಹೇಳಿದ್ದಾರೆ.

ಓದಿ: ಕಾಮನ್​ವೆಲ್ತ್​ ಗೇಮ್ಸ್​: ಹೈಜಂಪ್, ಸ್ಕ್ವ್ಯಾಷ್​ನಲ್ಲಿ ಐತಿಹಾಸಿಕ ಕಂಚು, ಜುಡೋದಲ್ಲಿ ಮೂರನೇ ಪದಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.