ETV Bharat / sports

ಕಾಮನ್​ವೆಲ್ತ್ ಗೇಮ್ಸ್‌: ಟೇಬಲ್ ಟೆನ್ನಿಸ್​​​ನಲ್ಲಿ ಚಿನ್ನ, ವೇಟ್‌ ಲಿಫ್ಟಿಂಗ್‌ನಲ್ಲಿ ಬೆಳ್ಳಿ ಗೆದ್ದು ಬೀಗಿದ ಭಾರತ - ಈಟಿವಿ ಭಾರತ ಕನ್ನಡ

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಕಾಮನ್​ವೆಲ್ತ್ ಗೇಮ್ಸ್​​ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಪುರುಷರ ಟೇಬಲ್ ಟೆನ್ನಿಸ್​​ನಲ್ಲಿ ಚಿನ್ನ ಗೆದ್ದರೆ, ವೇಟ್‌ ಲಿಫ್ಟಿಂಗ್‌ ದೇಶದ ಕ್ರೀಡಾಪಟು ಬೆಳ್ಳಿ ಸಾಧನೆ ತೋರಿದರು.

Etv BharatCommonwealth Games 2022
Etv BharatCommonwealth Games 2022
author img

By

Published : Aug 2, 2022, 8:47 PM IST

ಬರ್ಮಿಂಗ್​ಹ್ಯಾಮ್​: ಕಾಮನ್​ವೆಲ್ತ್ ಗೇಮ್ಸ್​​ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಟೇಬಲ್ ಟೆನ್ನಿಸ್ ತಂಡ ಫೈನಲ್​​​ನಲ್ಲಿ ಭರ್ಜರಿ ಗೆಲುವು ದಾಖಲಿಸಿ ಚಿನ್ನಕ್ಕೆ ಕೊರಳೊಡ್ಡಿದೆ. ಲೀಗ್​ ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದ ಗೆಲುವು ಪಡೆದು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದ ಅಚಂತಾ ಕಮಲ್ ನಾಯಕತ್ವದ ತಂಡ ಕ್ವಾರ್ಟರ್ ಫೈನಲ್​ನಲ್ಲಿ ಬಾರ್ಬಡೋಸ್​, ಸಿಂಗಾಪುರ್, ಉತ್ತರ ಐರ್ಲೆಂಡ್ ವಿರುದ್ಧ ಗೆಲುವು ದಾಖಲು ಮಾಡಿತ್ತು. ಇದೀಗ ಸಿಂಗಾಪುರ್ ತಂಡದ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ಅಂತರದಲ್ಲಿ ಗೆಲುವು ದಾಖಲಿಸಿರುವ ತಂಡ ಭಾರತಕ್ಕೆ ಚಿನ್ನ ತಂದುಕೊಟ್ಟಿದೆ.

ಇದನ್ನೂ ಓದಿ: ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಇತಿಹಾಸ ಸೃಷ್ಟಿ: ಲಾನ್​ ಬೌಲ್ಸ್​​ನಲ್ಲಿ ಚಿನ್ನ ಗೆದ್ದ 'ಭಾರತೀ'ಯರು!

ವೇಟ್‌ ಲಿಫ್ಟಿಂಗ್‌ನಲ್ಲಿ ವಿಕಾಸ್ ಠೂಕೂರ್‌ಗೆ ಬೆಳ್ಳಿ: ಇನ್ನೊಂದೆಡೆ, 96 ಕೆಜಿ ವೇಟ್‌ ಲಿಫ್ಟಿಂಗ್‌ ವಿಭಾಗದಲ್ಲಿ ಭಾರತದ ವಿಕಾಸ್‌ ಠಾಕೂರ್ ಬೆಳ್ಳಿ ಪದಕ ಸಾಧನೆ ತೋರಿದ್ದಾರೆ. ಸ್ಪರ್ಧೆಯಲ್ಲಿ ಒಟ್ಟಾರೆ ಇವರು ಒಟ್ಟು 346 ಕೆಜಿ ಭಾರ ಎತ್ತಿದರು. ಠಾಕೂರ್ 2014 ರಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು 2018 ರಲ್ಲಿ ಕಂಚು ಪದಕ ಗೆದ್ದು ಸಂಭ್ರಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.