ETV Bharat / sports

ಕಾಮನ್​ವೆಲ್ತ್​ಗೆ ಇಂದು ತೆರೆ..10 ದಿನದಲ್ಲಿ ಭಾರತ 18 ಚಿನ್ನ ಸೇರಿ 55 ಪದಕಗಳ ಬೇಟೆ

11 ದಿನಗಳಿಂದ ನಡೆಯುತ್ತಿರುವ ಕಾಮನ್​ವೆಲ್ತ್​ ಗೇಮ್ಸ್ ಇಂದು ತೆರೆ ಕಾಣಲಿದೆ. ಭಾರತದ ಸ್ಪರ್ಧಿಗಳು ಅತ್ಯದ್ಭುತ ಪ್ರದರ್ಶನ ತೋರಿ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತ 55 ಪದಕಗಳನ್ನು ಕೊಳ್ಳೆ ಹೊಡೆದು ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ.

commonwealth-game
ಕಾಮನ್​ವೆಲ್ತ್​ಗೆ ಇಂದು ತೆರೆ
author img

By

Published : Aug 8, 2022, 7:28 AM IST

ಬರ್ಮಿಂಗ್‌ಹ್ಯಾಮ್(ಯುಕೆ): ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ನಿನ್ನೆ ಪದಕಗಳ ಸುರಿಮಳೆ. ಒಂದೇ ದಿನ ವಿವಿಧ ವಿಭಾಗದಲ್ಲಿ 18 ಪದಕಗಳನ್ನು ಕೊಳ್ಳೆ ಹೊಡೆದಿದೆ. 6 ಚಿನ್ನ, 4 ಬೆಳ್ಳಿ, 8 ಕಂಚು ಮೆಡಲ್​ಗಳನ್ನು ಭಾರತ ತನ್ನ ಖಾತೆಗೆ ಸೇರಿಸಿಕೊಂಡಿತು. ಈ ಮೂಲಕ ಪದಕ ಪಟ್ಟಿಯಲ್ಲಿ ಒಟ್ಟಾರೆ 55 ಪದಕಗಳಿಂದ 5 ನೇ ಸ್ಥಾನದಲ್ಲಿ ಮುಂದುವರಿದಿದೆ.

ಕುಸ್ತಿ, ವೇಟ್​ ಲಿಫ್ಟಿಂಗ್​ನಲ್ಲಿ ಹೆಚ್ಚು ಪದಕ: ಭಾರತದ ಪೈಲ್ವಾನ್​ಗಳು ಮತ್ತು ವೇಟ್​ ಲಿಫ್ಟರ್​​​​​​ಗಳು ಅತಿ ಹೆಚ್ಚು ಪದಕಗಳನ್ನು ತಂದು ಕೊಟ್ಟಿದ್ದಾರೆ. ಕುಸ್ತಿಯಲ್ಲಿ 6 ಚಿನ್ನ, 1 ಬೆಳ್ಳಿ, 5 ಕಂಚು ಬಂದರೆ, ಭಾರ ಎತ್ತುವ ಸ್ಪರ್ಧೆಯಲ್ಲಿ 1 ಚಿನ್ನ, 3 ಬೆಳ್ಳಿ, 4 ಕಂಚು ಬಂದಿವೆ.

ಅಥ್ಲೆಟಿಕ್ಸ್​ನಲ್ಲಿ 8, ಕ್ರಿಕೆಟ್​ 1, ಪ್ಯಾರಾ ಟೇಬಲ್ ಟೆನಿಸ್​ 4, ಬ್ಯಾಡ್ಮಿಂಟನ್​ ಸೇರಿದಂತೆ ಒಟ್ಟಾರೆ 18 ಚಿನ್ನ, 15 ಬೆಳ್ಳಿ, 22 ಕಂಚಿನ ಸಾಧನೆ ಮಾಡಿದೆ. ಇಂದು ಕಾಮನ್​ವೆಲ್ತ್​ ಗೇಮ್ಸ್​ನ ಕೊನೆಯ ದಿನವಾಗಿದ್ದು, ಬ್ಯಾಡ್ಮಿಂಟನ್​ನಲ್ಲಿ ಫೈನಲ್​ ತಲುಪಿರುವ ಪಿವಿ ಸಿಂಧು ಮತ್ತು ಸೆನ್​ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಮತ್ತಷ್ಟು ಪದಕ ಬರುವ ಸಾಧ್ಯತೆ ಇದೆ.

ಪದಕ ಪಟ್ಟಿ (ಟಾಪ್​ 5)

ದೇಶಚಿನ್ನಬೆಳ್ಳಿಕಂಚುಒಟ್ಟು
ಆಸ್ಟ್ರೇಲಿಯಾ655453172
ಇಂಗ್ಲೆಂಡ್565952167
ಕೆನಡಾ24323490
ನ್ಯೂಜಿಲ್ಯಾಂಡ್19121748
ಭಾರತ18152255

ಓದಿ: CWG 2022ರಲ್ಲಿ ಕಂಚಿನ ಪದಕ: ಭಾರತೀಯ ಮಹಿಳಾ ಹಾಕಿ ತಂಡದ ನೃತ್ಯ ಸಂಭ್ರಮ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.