ಬೆಂಗಳೂರು: ನಾಟಕೀಯ ಬೆಳವಣಿಗೆಯಲ್ಲಿ ಪ್ರಮುಖ ಸ್ಪರ್ಧಿಗಳು ಹಿಂದೆ ಸರಿಯುವುದರೊಂದಿಗೆ ಇಲ್ಲಿ ಮುಕ್ತಾಯಗೊಂಡ ಚಾಂಪಿಯನ್ಸ್ ಯಾಚ್ ಕ್ಲಬ್ ಎಫ್ಎಂಎಸ್ಸಿಐ ರಾಷ್ಟ್ರೀಯ ರ‍್ಯಾಲಿ ಚಾಂಪಿಯನ್ಶಿಪ್ ನಲ್ಲಿ ಎಂಆರ್ಎಫ್ನ ಚೇತನ್ ಶಿವರಾಮ್ ಹಾಗೂ ಡಾ. ಬಿಕ್ಕು ಬಾಬು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
ಅತ್ಯಂತ ಸವಾಲಿನಿಂದ ಕೂಡಿದ್ದ ಹಂತದಲ್ಲಿ ರೆಡ್ ತಂಡದ ಈ ಇಬ್ಬರು ಸವಾರರಿಗೆ ದಿಟ್ಟ ಹೋರಾಟ ನೀಡುವಲ್ಲಿ ಇತರೆ ಆಟಗಾರರು ವಿಫಲರಾದರು. ಪರಿಣಾಮ ಚೇತನ್ ಹಾಗೂ ಬಿಕ್ಕು 1-2 ಸ್ಥಾನವನ್ನು ತಮ್ಮದಾಗಿಸಿಕೊಂಡರು. ನಾಲ್ಕು ಹಾಗೂ ಐದನೇ ಸ್ಥಾನದೊಂದಿಗೆ ಹೋರಾಟ ಆರಂಭಿಸಿದ್ದ ಚೇತನ್ ಹಾಗೂ ಡಾ. ಬಿಕ್ಕು, ಕೊನೆಯ ತನಕವೂ ಸ್ಥಿರತೆಯನ್ನು ಕಾಯ್ದುಕೊಂಡು K-1000 ಯಲ್ಲಿ ಚಾಂಪಿಯನ್ ಹಾಗೂ ರನ್ನರ್ ಅಪ್ ಸ್ಥಾನ ಗಳಿಸಿದರು.
ಹಾಲಿ ಚಾಂಪಿಯನ್ ಹಾಗೂ ಕಳೆದ ದಿನ ಅಗ್ರ ಸ್ಥಾನದಲ್ಲಿದ್ದ ಗೌರವ್ ಗಿಲ್ ದಿನದ ಆರಂಭದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದರು. ಎರಡನೇ ದಿನದಲ್ಲಿ ಅವರ ಕಾರು ಆರಂಭಗೊಳ್ಳಲೇ ಇಲ್ಲ. ಜೆಕೆ ಟೈಯರ್ ಮೊಟೊಸ್ಪೋರ್ಟ್ ತಂಡ ನಿರಾಸೆಯೊಂದಿಗೆ ಎಂಆರ್ಎಫ್ ತಂಡದ ಹಾದಿಯನ್ನು ಸುಗಮಗಮಗೊಳಿಸಿತು.
ಎರಡನೇ ಸುತ್ತನ್ನು ಗೆದ್ದಿದ್ದ ಅಕ್ಷರಾ ತಂಡದ ಚೇತನ್ ಶಿವರಾಮ್ ಇದೇ ರೀತಿಯಲ್ಲಿ ಯಶಸ್ಸು ಕಂಡರು. ಈ ಜಯದೊಂದಿಗೆ ಅವರು ಐ.ಎನ್.ಆರ್.ಸಿ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ಸಹ ಚಾಲಕ ದಿಲೀಪ್ ಚರಣ್ ಅವರೊಂದಿಗೆ ಐಎನ್ಆರ್ಸಿ 3ರಲ್ಲಿ ಒಟ್ಟು 1:47:37:300 ಅವಧಿಯಲ್ಲಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.
ಮಿಲೇನ್ ಜಾರ್ಜ್ ಅವರೊಂದಿಗೆ ಸ್ಪರ್ಧಿಸಿದ್ದ ಡಾ.ಬಿಕ್ಕು ಬಾಬು ಅವರಿಗಿಂತ ಕೇವ 12 ಸೆಕೆಂಡುಗಳ ಮುನ್ನಡೆಯೊಂದಿಗೆ, ಸಮಗ್ರ ಟೀಮ್ ಚಾಂಪಿಯನ್ ಪಟ್ಟ ಗೆದ್ದುಕೊಂಡರು. ದಿನದ ಮೊದಲ ಹಂತ SS5ನಲ್ಲಿ ಡಾ.ಬಿಕ್ಕು, ಚೇತನ್ ಅವರಿಗಿಂತ ಮೇಲುಗೈ ಸಾಧಿಸಿ ಅಗ್ರ ಸ್ಥಾನಿಯಾದರು. SS8 ಹಂತದಲ್ಲೂ ಡಾ. ಬಿಕ್ಕು ಅವರು ಚೇತನ್ ವಿರುದ್ಧ ಮೇಲುಗೈ ಸಾಧಿಸಿದರೂ ಐಎನ್ಆರ್ಸಿ 2 ಟ್ರೋಫಿ ಗೆಲ್ಲಲಾಗಲಿಲ್ಲ.
ಶ್ರೇಷ್ಠ ಸ್ಪರ್ಧಿಗಳು ಅಂತಿಮ ದಿನದಲ್ಲಿ ಮಿಂಚಲಿಲ್ಲ. ಆದರೂ ನಾವು ಉತ್ತಮ ರೀತಿಯಲ್ಲಿ ಸ್ಪರ್ಧೆ ನೀಡುವ ಗುರಿ ಹೊಂದಿದ್ದೆವು. ಐಎನ್ಆರ್ಸಿ 2 ಮತ್ತು 3 ವಿಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಂಡಿರುವುದು ಉತ್ತಮ ಬೆಳವಣಿಗೆ, ಚಾಂಪಿಯನ್ ಯಾರಾಗುತ್ತಾರೆಂದು ಗೊತ್ತಿದ್ದೂ ಇಷ್ಟು ಪ್ರಮಾಣದಲ್ಲಿ ಸ್ಪರ್ಧೆ ಕಂಡಿರುವುದು ಗಮನಾರ್ಹ, ಎಂದು ಐಎನ್ಆರ್ಸಿ ಸಹ ಪ್ರಾಯೋಜಕಿ ಹೇಮಾ ಮಾಲಿನಿ ನಿದಾಮನುರಿ ಹೇಳಿದ್ದಾರೆ.
ಗೌರವ್ ಗಿಲ್ ನಿರ್ಗಮನದ ನಂತರ ಜೆ ಕೆ ತಂಡದ ಫೇವರಿಟ್ SS5 ಗೆದ್ದಿರುವ ಡೀನ್ ಮಸ್ಕರೇನ್ಹಸ್ ಯಶಸ್ಸು ಕಾಣುತ್ತಾರೆಂದು ಎಲ್ಲರ ನಿರೀಕ್ಷಿಯೆಯಾಗಿತ್ತು. ಆದರೆ ಅವರು ಕೂಡ ನಂತರದ ಹಂತದಲ್ಲಿ ವೈಫಲ್ಯ ಕಂಡರು. ಇದರಿಂದ ಫಾಬಿದ್ ಅಹ್ಮರ್ಗೆ ಅವಕಾಶ ಉತ್ತಮವಾಗಿತ್ತು. ಆದರೆ ಎಂಆರ್ಎಫ್ ಚಾಲಕ ವೈಫಲ್ಯಗೊಂಡು ಸ್ಪರ್ಧೆಯಿಂದ ಹೊರನಡೆದರು. ಎಸ್ಯುವಿ ಚಾಲೆಂಜ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಗಗನ್ ಕರಂಭಯ್ಯ 2019ನೇ ಸಾಲಿನ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.