ನವದೆಹಲಿ: ದೇಶದಲ್ಲಿ ಕೋವಿಡ್ 19 ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಇತರ ನಾಲ್ವರು ಭಾರತೀಯ ಗ್ರ್ಯಾಂಡ್‌ಮಾಸ್ಟರ್‌ಗ ಗುರುವಾರ ಆನ್‌ಲೈನ್ ಪ್ರದರ್ಶನ ಪಂದ್ಯಗಳನ್ನಾಡಲಿದ್ದಾರೆ.
ಚೆಸ್ ಡಾಟ್ ಕಾಮ್ ಬ್ಲಿಟ್ಜ್ ಅಥವಾ ಫಿಡೆ(FIDE) ಸ್ಟ್ಯಾಂಡರ್ಡ್ ರೇಟಿಂಗ್ನಲ್ಲಿ 2000 ಕ್ಕಿಂತ ಕಡಿಮೆ ಇರುವ ಯಾವುದೇ ಆಟಗಾರ ಮಾಜಿ ವಿಶ್ವ ಚಾಂಪಿಯನ್ ಆನಂದ್ ಜೊತೆ ಆಡಲು 150 ಯುಎಸ್ಡಿ ಹಾಗೂ ಇತರ ನಾಲ್ವರು ಗ್ರ್ಯಾಂಡ್ ಮಾಸ್ಟರ್ಗಳೊಂದಿಗೆ ಆಡುವುದಕ್ಕೆ 25 ಯುಎಸ್ಡಿ ನೋಂದಣಿ ಮೊತ್ತವಾಗಿ ಪಾವತಿಸಬೇಕಾಗಿದೆ.
ಚೆಸ್ ಡಾಟ್ ಕಾಮ್ನಲ್ಲಿ ಗುರುವಾರ 7 30ಕ್ಕೆ ಪಂದ್ಯಗಳು ಪ್ರಸಾರವಾಗಲಿದ್ದು, ಈ ವೇಳೆ ದೇಣಿಗೆ ಸ್ವೀಕರಿಸಲಾಗುತ್ತದೆ ಎಂದು ತಿಳಿದು ಬಂದಿದೆ. ಒಟ್ಟು 10,000 ಡಾಲರ್‌ಗಳವರೆಗಿನ ಎಲ್ಲಾ ದೇಣಿಗೆಗಳಿಗೆ ಇದು ಹೊಂದಿಕೆಯಾಗಲಿದೆ ಎಂದು ವೆಬ್‌ಸೈಟ್ ಹೇಳಿದೆ.
ವಿಶ್ವನಾಥನ್ ಆನಂದ್, ಕೊನೆರು ಹಂಪಿ, ದ್ರೋಣವಳ್ಳಿ ಹರಿಕಾ, ನಿಹಾಲ್ ಸರಿನ್ ಹಾಗೂ ಪ್ರಗ್ನಾನಂದ ರಮೇಶ್‌ಬಾಬು ಒಳಗೊಂಡ ಏಕಕಾಲಿಕ ಪ್ರದರ್ಶನಗಳಿಂದ ಬರುವ ಎಲ್ಲಾ ದೇಣಿಗೆ ರೆಡ್‌ಕ್ರಾಸ್ ಇಂಡಿಯಾ ಹಾಗೂ ಅಖಿಲ ಭಾರತ ಚೆಸ್ ಫೆಡರೇಶನ್ನ ಚೆಕ್‌ಮೇಟ್ ಕೋವಿಡ್ ನಿಧಿಗೆ ಸೇರಲಿದೆ.
" ಭಾರತ ಕೋವಿಡ್ 19 ವಿರುದ್ಧ ತೀವ್ರವಾಗಿ ಹೋರಾಡುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಸಮಯದಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಬಾಧಿತರಾಗಿದ್ದೇವೆ. ಇದು ಯುವಕ ಅಥವಾ ವಯಸ್ಸಾದ ಒಬ್ಬ ವ್ಯಕ್ತಿ ಸೋಂಕಿಗೆ ಒಳಗಾಗಿದ್ದಾರೆ ಎಂದು ನಾನು ಭಾವಿಸುವುದಿಲ್ಲ. ನಾವೆಲ್ಲರೂ ಭಾರತದಲ್ಲಿ ಕೋವಿಡ್ ಪರಿಹಾರ ಕಾರ್ಯಕ್ರಮಗಳಿಗೆ ಬೆಂಬಲ ನೀಡೋಣ" ಎಂದು ಆನಂದ್ ಚೆಸ್.ಕಾಮ್ ಶೇರ್ ಮಾಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನು ಓದಿ: ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದ ದೀಪಕ್ ಚಹರ್, ಸಿದ್ಧಾರ್ಥ್ ಕೌಲ್