ಮ್ಯಾಡ್ರಿಡ್(ಸ್ಪೇನ್): ಮೊಣಕಾಲ ಗಾಯದ ಸಮಸ್ಯೆಯಿಂದ 11 ತಿಂಗಳು ಬ್ಯಾಡ್ಮಿಂಟನ್ನಿಂದ ದೂರ ಉಳಿದಿದ್ದ ಮಾಜಿ ನಂ.1 ಆಟಗಾರ್ತಿ ಸ್ಪೇನ್ನ ಕರೋಲಿನಾ ಮರಿನ್ ಭಾನುವಾರ ಯುರೋಪಿಯನ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ ಗೆಲುವಿನ ಹಾದಿಗೆ ಮರಳಿದ್ದಾರೆ.
ಮೊಣಕಾಲಿನ ಗಾಯಕ್ಕೊಳಗಾಗಿ ಟೋಕಿಯೋ ಒಲಿಂಪಿಕ್ಸ್ನಿಂದ ಹೊರಗುಳಿದಿದ್ದ ಸ್ಪೇನ್ ಆಟಗಾರ್ತಿ ಯುರೋಪಿಯನ್ ಚಾಂಪಿಯನ್ಶಿಪ್ಗೆ ಸಂಪೂರ್ಣವಾಗಿ ತಯಾರಿ ನಡೆಸಿದ್ದರು. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸ್ಕಾಟ್ಲ್ಯಾಂಡ್ನ ಕಿರ್ಸ್ಟಿ ಗಿಲ್ಮೊರ್ ವಿರುದ್ಧ 21-10, 21-12 ನೇರ ಸೆಟ್ಗಳಿಂದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ.
41 ನಿಮಿಷಗಳ ಕಾಲ ನಡೆದ ಆಟದಲ್ಲಿ ಸ್ಕಾಟ್ಲ್ಯಾಂಡ್ ಆಟಗಾರ್ತಿಯ ವಿರುದ್ಧ ಪಾರಮ್ಯ ಮೆರೆದ ಮರಿನ್ ತನ್ನ ಬಲವಾದ ಹೊಡೆತಗಳಿಂದ ಅಧಿಕಾರಯುತ ಗೆಲುವು ಸಾಧಿಸಿದರು. ಮೂರು ಬಾರಿಯ ವಿಶ್ವ ಚಾಂಪಿಯನ್‌ಶಿಪ್ ಮತ್ತು 2016 ರ ಒಲಿಂಪಿಕ್ ಚಿನ್ನದ ಪದಕ ವಿಜೇತೆ ಮರಿನ್ಳನ್ನು ಎದುರಿಸುವಲ್ಲಿ ಕಿರ್ಸ್ಟಿ ಗಿಲ್ಮೊರ್ ವಿಫಲವಾದರು.
ಓದಿ: ಕೇರಳದಿಂದ ಆಗಮಿಸುವ ಪ್ರತಿಭಾನ್ವಿತ ಬಾಕ್ಸರ್‌ಗಳಿಗೆ ಉಚಿತ ತರಬೇತಿ: ಮೇರಿ ಕೋಮ್