ಅಮೆರಿಕ: ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿರುವ ಸ್ಪೇನ್ನ ಯುವ ಟೆನ್ನಿಸ್ ತಾರೆ ಕಾರ್ಲೋಸ್ ಅಲ್ಕರಾಝ್ ಮತ್ತೆ ಅಗ್ರ ಸ್ಥಾನಕ್ಕೆ ಮರಳಿದ್ದಾರೆ. ಅನುಭವಿ ಆಟಗಾರ ಸರ್ಬಿಯಾದ ನೊವಾಕ್ ಜೋಕೊವಿಕ್ರನ್ನು ಹಿಂದಿಕ್ಕಿರುವ 19 ವರ್ಷದ ಕಾರ್ಲೋಸ್ ಪುನಃ ನಂ. 1 ಪಟ್ಟಕ್ಕೆ ಏರಿದ್ದಾರೆ.
ಭಾನುವಾರ ನಡೆದ ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ರಷ್ಯಾದ ಸ್ಟಾರ್ ಆಟಗಾರ ಡೆನಿಲ್ ಮೆಡ್ವೆಡೆವ್ರನ್ನು 6-3, 6-2 ನೇರ ಸೆಟ್ಗಳಿಂದ ಸೋಲಿಸಿದ ಕಾರ್ಲೋಸ್ ಅಲ್ಕರಾಝ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಗಾಯದಿಂದ ಚೇತರಿಸಿಕೊಂಡು ಕಣಕ್ಕೆ ಮರಳಿರುವ ಕಾರ್ಲೋಸ್ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಸೆಟ್ ಅನ್ನು ಕೇವಲ 36 ನಿಮಿಷಗಳಲ್ಲೇ ಗೆದ್ದ ಕಾರ್ಲೋಸ್ ಆಕ್ರಮಣಕಾರಿ ಆಟದ ಎದುರು ಮೆಡ್ವೆಡೆವ್ ಮಂಕಾದರು. ಅಲ್ಲದೆ, ಮೆಡ್ವೆಡೆವ್ರ ಸತತ 19 ಗೆಲುವುಗಳ ನಾಗಾಲೋಟಕ್ಕೆ ಬ್ರೇಕ್ ಬಿತ್ತು.
-
👑 THE KING IN CALI 👑
— ATP Tour (@atptour) March 20, 2023 " class="align-text-top noRightClick twitterSection" data="
🇪🇸 @carlosalcaraz defeats Medvedev 6-3, 6-2 to capture his first Indian Wells title and reclaim the World No. 1 ranking! @BNPPARIBASOPEN | #TennisParadise pic.twitter.com/H2mhr9JhB0
">👑 THE KING IN CALI 👑
— ATP Tour (@atptour) March 20, 2023
🇪🇸 @carlosalcaraz defeats Medvedev 6-3, 6-2 to capture his first Indian Wells title and reclaim the World No. 1 ranking! @BNPPARIBASOPEN | #TennisParadise pic.twitter.com/H2mhr9JhB0👑 THE KING IN CALI 👑
— ATP Tour (@atptour) March 20, 2023
🇪🇸 @carlosalcaraz defeats Medvedev 6-3, 6-2 to capture his first Indian Wells title and reclaim the World No. 1 ranking! @BNPPARIBASOPEN | #TennisParadise pic.twitter.com/H2mhr9JhB0
ಸ್ಪೇನ್ನ ಯುವ ತಾರೆ ಕಾರ್ಲೋಸ್ ಅಲ್ಕರಾಝ್ ತಮ್ಮ ವೃತ್ತಿಜೀವನದ ಆರಂಭದಿಂದಲೇ ಟೆನ್ನಿಸ್ ಲೋಕದ ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ಅಮೆರಿಕ ಓಪನ್ ಗ್ರಾಂಡ್ಸ್ಲಾಂ ಗೆದ್ದು ನಂಬರ್ 1 ಸ್ಥಾನಕ್ಕೆ ತಲುಪಿದ್ದರು. ಮೆಡ್ವೆಡೆವ್ ವಿರುದ್ಧ 18 ವಿನ್ನರ್ಸ್ ಸಿಡಿಸಿದರು. ಬ್ರೇಕ್ ಪಾಯಿಂಟ್ ಇಲ್ಲದೆಯೇ ಪಂದ್ಯ ಮುಗಿಸಿದರಲ್ಲದೆ, ಇಂಡಿಯನ್ ವೆಲ್ಸ್ ಹಾಗೂ ಮಿಯಾಮಿ ಓಪನ್ ಗೆದ್ದ ಒಂಭತನೇ ಹಾಗೂ ಅಂತ್ಯಂತ ಯುವ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಜೊತೆಗೆ, ಚಿಕ್ಕ ಹರೆಯದಲ್ಲೇ ಮೂರು ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದು ತಮ್ಮದೇ ದೇಶದ ದಿಗ್ಗಜ ಆಟಗಾರ ರಾಫೆಲ್ ನಡಾಲ್ ಅವರ ಸಾಲಿಗೆ ಸೇರಿದ್ದಾರೆ. ನಡಾಲ್ ಕೂಡ 20ನೇ ವಯಸ್ಸಿಗೆ ಕಾಲಿಡುವ ಮುನ್ನವೇ 6 ಮಾಸ್ಟರ್ಸ್ ಪ್ರಶಸ್ತಿ ಗೆದ್ದಿದ್ದರು.
ಇದನ್ನೂ ಓದಿ: ಸತತ ಗೋಲ್ಡನ್ ಡಕ್ಗೆ Sky ಔಟ್: ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?
ಈ ಹಿಂದೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಕಾರ್ಲೋಸ್ 2023ರ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಆಡಿರಲಿಲ್ಲ. ಹೀಗಾಗಿ 10ನೇ ಆಸ್ಟ್ರೇಲಿಯನ್ ಓಪನ್ ಗೆದ್ದ ನೊವಾಕ್ ಜೋಕೊವಿಕ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದರು. ಇದೀಗ ಇಂಡಿಯನ್ ವೆಲ್ಸ್ ಟೆನ್ನಿಸ್ ಟೂರ್ನಿಯಲ್ಲಿನ ಯಶಸ್ಸು ಕಾರ್ಲೋಸ್ರನ್ನು ನಂ. 1 ಪಟ್ಟಕ್ಕೇರಿಸಿದೆ. ಸದ್ಯ ಅಗ್ರಸ್ಥಾನ ಉಳಿಸಿಕೊಳ್ಳಬೇಕಾದರೆ ಕಾರ್ಲೋಸ್ ಮುಂಬರುವ ಮಿಯಾಮಿ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಮತ್ತೊಮ್ಮೆ ಟ್ರೋಫಿ ಗೆಲ್ಲಲೇಬೇಕಿದೆ.
ಸದ್ಯ ಎಟಿಪಿ ರ್ಯಾಂಕಿಂಗ್ಸ್ನಲ್ಲಿ ಕಾರ್ಲೋಸ್ ಅಲ್ಕರಾಝ್ ಅಗ್ರಸ್ಥಾನಿಯಾದರೆ, ಎರಡನೇ ಸ್ಥಾನದಲ್ಲಿ ಸರ್ಬಿಯಾದ ನೊವಾಕ್ ಜೊಕೊವಿಕ್ ಇದ್ದಾರೆ. ಗ್ರೀಕ್ನ ಯುವ ಆಟಗಾರ ಸ್ಟೆಫಾನೋಸ್ ಸಿಟ್ಸಿಪಾಸ್ ಮೂರನೇ ಹಾಗೂ ನಾರ್ವೆಯ ಕಾಸ್ಪರ್ ರುಡ್ 4ನೇ ಸ್ಥಾನ ಹೊಂದಿದ್ದಾರೆ. ಇಂಡಿಯನ್ ವೆಲ್ಸ್ ರನ್ನರ್ ಅಪ್ ಆದ ಡೆನಿಲ್ ಮೆಡ್ವೆಡೆವ್ 5ನೇ ಶ್ರೇಯಾಂಕ ಪಡೆದಿದ್ದಾರೆ. ಪಟ್ಟಿಯಲ್ಲಿ ಇಳಿಮುಖವಾಗಿ ಸಾಗಿರುವ ಸ್ಪೇನ್ನ ಸ್ಟಾರ್ ಆಟಗಾರ ರಾಫೆಲ್ ನಡಾಲ್ 13ನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: ಧೋನಿಗೆ ಕೊನೆಯ ಐಪಿಎಲ್ ಅಲ್ಲ, ಇನ್ನೂ ಮೂರ್ನಾಲ್ಕು ವರ್ಷ ಆಡ್ತಾರೆ: ಶೇನ್ ವ್ಯಾಟ್ಸನ್