ಲಂಡನ್: ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರು ವಿಂಬಲ್ಡನ್ 2023ರ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿದ್ದಾರೆ. ಭಾನುವಾರ ಲಂಡನ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ಅಲ್ಕರಾಜ್ 1-6, 7-6 (6), 6-1, 3-6, 6-4 ಸೆಟ್‌ಗಳಿಂದ ವಿಶ್ವದ ಎರಡನೇ ಶ್ರೇಯಾಂಕದ ಸರ್ಬಿಯಾದ ಲೆಜೆಂಡರಿ ಆಟಗಾರ ನೊವಾಕ್ ಜೊಕೊವಿಕ್ ಅವರನ್ನು ಮಣಿಸಿದರು.
-
The moment 🌟#Wimbledon | @carlosalcaraz pic.twitter.com/sjjE7FhGn4
— Wimbledon (@Wimbledon) July 16, 2023 " class="align-text-top noRightClick twitterSection" data="
">The moment 🌟#Wimbledon | @carlosalcaraz pic.twitter.com/sjjE7FhGn4
— Wimbledon (@Wimbledon) July 16, 2023The moment 🌟#Wimbledon | @carlosalcaraz pic.twitter.com/sjjE7FhGn4
— Wimbledon (@Wimbledon) July 16, 2023
ಈ ಮೂಲಕ 20ರ ಹರೆಯದ ಕಾರ್ಲೋಸ್ ಅಲ್ಕರಾಜ್, ಎರಡನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಳೆದ ವರ್ಷ ನಾರ್ವೆಯ ಕ್ಯಾಸ್ಪರ್ ರೂಡ್ ಅವರನ್ನು ಸೋಲಿಸಿ ಯುಎಸ್ ಓಪನ್ ಪ್ರಶಸ್ತಿ ಗೆದ್ದಿದ್ದರು. ಮತ್ತೊಂದೆಡೆ, ನೊವಾಕ್ ಜೊಕೊವಿಚ್ ಅವರ 24ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಕನಸಿಗೆ ತಡೆ ಬಿತ್ತು. ನೊವಾಕ್ ಈ ಪಂದ್ಯ ಜಯಿಸಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಅತಿ ಹೆಚ್ಚು ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವ ರೋಜರ್ ಫೆಡರರ್ ಅವರ ದಾಖಲೆ ಸರಿಗಟ್ಟುತ್ತಿದ್ದರು. ಫೆಡರರ್ ಎಂಟು ಬಾರಿ ವಿಂಬಲ್ಡನ್ ಟ್ರೋಫಿ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ 24 ಬಾರಿ ಟೆನಿಸ್ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದ ಮಾರ್ಗರೇಟ್ ಕೋರ್ಟ್ ಅವರ ದಾಖಲೆ ಸರಿಗಟ್ಟುತ್ತಿದ್ದರು.
ನಿನ್ನೆ, 4 ಗಂಟೆ 42 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಜೊಕೊವಿಚ್ 5-1 ಅಂತರದಿಂದ ಮುನ್ನಡೆ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಸ್ಪೇನಿಗ ಅಲ್ಕರಾಜ್ ಟೈಬ್ರೇಕರ್‌ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ಟೈಬ್ರೇಕರ್‌ನಲ್ಲಿ ನೊವಾಕ್ ಮಾಡಿದ ತಪ್ಪುಗಳ ಲಾಭ ಪಡೆದ ಅಲ್ಕರಾಜ್ ಪಂದ್ಯದಲ್ಲಿ 1-1 ರಿಂದ ಸಮಬಲ ಸಾಧಿಸಿದರು. ಇದಾದ ಬಳಿಕ ಮೂರನೇ ಸೆಟ್‌ನಲ್ಲಿ 6-1 ಅಂತರದಲ್ಲಿ ಜಯಿಸಿ, ಪಂದ್ಯದಲ್ಲಿ 2-2 ರಲ್ಲಿ ಸಮಬಲ ಸಾಧಿಸಿದರು.
ನಂತರ ಐದನೇ ಮತ್ತು ಕೊನೆಯ ಸೆಟ್‌ನಲ್ಲಿ ಅಲ್ಕರಾಜ್ 6-4 ಅಂತರದಿಂದ ಗೆಲ್ಲುವ ಮೂಲಕ ವಿಂಬಲ್ಡನ್ 2023 ಚಾಂಪಿಯನ್ ಆದರು. ವಿಂಬಲ್ಡನ್ ಪ್ರಶಸ್ತಿ ಗೆದ್ದ ಅಲ್ಕರಾಜ್ 2.5 ಮಿಲಿಯನ್ ಪೌಂಡ್ (ಸುಮಾರು 25 ಕೋಟಿ ರೂ.) ಬಹುಮಾನ ಪಡೆದರು.
-
🇪🇸 𝗡𝗔𝗗𝗔𝗟𝗖𝗔𝗥𝗔𝗭 🇪🇸@RafaelNadal 🤝 @carlosalcaraz #Wimbledon pic.twitter.com/imB0nbhRxK
— Wimbledon (@Wimbledon) July 16, 2023 " class="align-text-top noRightClick twitterSection" data="
">🇪🇸 𝗡𝗔𝗗𝗔𝗟𝗖𝗔𝗥𝗔𝗭 🇪🇸@RafaelNadal 🤝 @carlosalcaraz #Wimbledon pic.twitter.com/imB0nbhRxK
— Wimbledon (@Wimbledon) July 16, 2023🇪🇸 𝗡𝗔𝗗𝗔𝗟𝗖𝗔𝗥𝗔𝗭 🇪🇸@RafaelNadal 🤝 @carlosalcaraz #Wimbledon pic.twitter.com/imB0nbhRxK
— Wimbledon (@Wimbledon) July 16, 2023
ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಕಾರ್ಲೋಸ್ ಅಲ್ಕರಾಜ್ ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅವರನ್ನು ಸೋಲಿಸಿದ್ದರು. ಅಲ್ಕರಾಜ್ 6-3, 6-3, 6-3 ಸೆಟ್‌ಗಳಿಂದ ಮೆಡ್ವೆಡೆವ್ ವಿರುದ್ಧ ಗೆಲುವು ಸಾಧಿಸಿದರು. ಅದೇ ಸಮಯದಲ್ಲಿ, ನೊವಾಕ್ ಜೊಕೊವಿಚ್ ಸೆಮಿಫೈನಲ್‌ನಲ್ಲಿ ಎಂಟನೇ ಶ್ರೇಯಾಂಕದ ಇಟಲಿಯ ಯಾನಿಕ್ ಸಿನ್ನರ್ ಅವರನ್ನು 6-3, 6-4, 7-6 ಸೆಟ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು.
ಇದನ್ನೂ ಓದಿ: INDW vs BANW 1st ODI: ಏಕದಿನ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಬಾಂಗ್ಲಾಗೆ ಶರಣಾದ ಭಾರತ ತಂಡ