ದೋಹಾ(ಕತಾರ್): ಬ್ರೆಜಿಲ್ ಸೆಮಿಸ್ಗೆ ಹೋಗಲು ಇಂದು ಕ್ರೊಯೇಷಿಯಾವನ್ನು ಕ್ವಾರ್ಟರ್-ಫೈನಲ್ನಲ್ಲಿ ಸೋಲಿಸಬೇಕಿದೆ. ಬ್ರೆಜಿಲ್ ಗೋಲುಗಳಿಸಿದಾಗ ಮಾಡುವ ನೃತ್ಯಕ್ಕೆ ಹಲವಾರು ಟೀಕೆಗಳು ವ್ಯಕ್ತವಾಗಿದೆ. ಆದರೂ ಕ್ರೊಯೇಷಿಯಾ ಎದುರು ಗೋಲ್ ಗಳಿಸಿದಾಗಲೂ ನೃತ್ಯ ಮಾಡುವುದಾಗಿ ತಂಡ ಹೇಳಿಕೊಂಡಿದೆ.
'ಈ ನೃತ್ಯ ಬ್ರೆಜಿಲಿಯನ್ ಸಂಸ್ಕೃತಿಯ ಭಾಗವಾಗಿದೆ. ಇದು ನಮ್ಮ ವಿರೋಧಿ ತಂಡವನ್ನು ಅಗೌರವಿಸುವುದು ಅಥವಾ ಅವಹೇಳನ ಮಾಡುವುದು ಅಲ್ಲ. ಇದು ನಮ್ಮ ಸಂಭ್ರಮ. ನಾವು ಯಾರೆಂಬುದನ್ನು ಬಿಂಬಿಸುವ ರೀತಿ ಅಷ್ಟೇ' ಎಂದು ಬ್ರೆಜಿಲ್ ಕೋಚ್ ಟೈಟ್ ಹೇಳಿದ್ದಾರೆ. ಬ್ರೆಜಿಲ್ ಫಾರ್ವರ್ಡ್ ವಿನಿಶಿಯಸ್ ಜೂನಿಯರ್ ಕೂಡ ಬ್ರೆಜಿಲ್ ಯಶಸ್ವಿಯಾದರೆ ಹೆಚ್ಚು ನೃತ್ಯ ಮಾಡುವ ಭರವಸೆ ನೀಡಿದ್ದಾರೆ.
16ನೇ ಸುತ್ತಿನ ಪಂದ್ಯದಲ್ಲಿ ಬ್ರೆಜಿಲ್ ದಕ್ಷಿಣ ಕೊರಿಯಾ ವಿರುದ್ಧ 4-1 ಗೋಲುಗಳಿಂದ ಜಯಗಳಿಸಿದ ನಂತರ ಟೈಟ್ ಸ್ವತಃ ತಮ್ಮ ಆಟಗಾರರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದರು. ಮಾಜಿ ಮ್ಯಾಂಚೆಸ್ಟರ್ ಯುನೈಟೆಡ್ ಮಿಡ್‌ಫೀಲ್ಡರ್ ರಾಯ್ ಕೀನ್ ಅವರು ಕೂಡಾ ಬ್ರೆಜಿಲಿಯನ್ನರ ನೃತ್ಯವನ್ನು ಟೀಕಿಸಿದ್ದರು.
'ಫುಟ್ಬಾಲ್ನಲ್ಲಿ ಗೋಲು ಅತ್ಯಂತ ಪ್ರಮುಖ ಕ್ಷಣವಾಗಿದೆ. ಅದನ್ನು ನೃತ್ಯ ಮಾಡಿ ಸಂಭ್ರಮಿಸುತ್ತೇವೆ. ಆ ಅಂಕಗಳು ಬರಿ ಆಟಗಾರ ಅಥವಾ ತಂಡದ್ದಲ್ಲ, ದೇಶದ್ದು. ನಮಗೆ ಇನ್ನಷ್ಟು ಆಚರಣೆ ಮಾಡುವುದು ಬಾಕಿಯಿದೆ. ಫೈನಲ್ವರೆಗೂ ನಾವು ಸ್ಕೋರ್ ಮಾಡುವುದನ್ನು ಮತ್ತು ನೃತ್ಯಮಾಡುವುದನ್ನು ಮುಂದುವರೆಸುತ್ತೇವೆ ಎಂದು ವಿನಿಶಿಯಸ್ ಜೂನಿಯರ್ ಹೇಳಿದ್ದಾರೆ.
ಇಂದು ಮೊದಲ ನಾಲ್ಕರ ಘಟ್ಟದ ಪಂದ್ಯದಲ್ಲಿ ಬ್ರೆಜಿಲ್ ಮತ್ತು ಕ್ರೊಯೇಷಿಯಾ ತಂಡ ಮುಖಾಮುಖಿಯಾಗುತ್ತಿದೆ. ಬ್ರೆಜಿಲ್‌ನಂತೆ, ಕ್ರೊವೇಷಿಯಾ ವಿಶ್ವಕಪ್‌ನಲ್ಲಿ ಇದುವರೆಗೆ ಎರಡು ಬಾರಿ ಮಾತ್ರ ಸೋಲನುಭವಿಸಿದೆ. ಕ್ರೊವೇಷಿಯಾ ಗುಂಪು ಹಂತದಲ್ಲಿ ಮೊರಾಕೊ ಮತ್ತು ಬೆಲ್ಜಿಯಂ ವಿರುದ್ಧ 0-0 ಡ್ರಾ ಮಾಡುವ ಮೊದಲು ತಂಡವು ಕೆನಡಾವನ್ನು 4-1 ರಿಂದ ಗೋಲುಗಳಿಂದ ಸೋಲಿಸಿತು. 16 ರ ಸುತ್ತಿನ ಹೆಚ್ಚುವರಿ ಸಮಯದಲ್ಲಿ ಕ್ರೊಯೇಷಿಯಾ ಜಪಾನ್ ವಿರುದ್ಧ 1-1 ಡ್ರಾ ಸಾಧಿಸಿತ್ತು, ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ ಗೆದ್ದಿತು.
ಇದನ್ನೂ ಓದಿ: 36 ನಿಮಿಷದಲ್ಲಿ 4 ಗೋಲು ಬಾರಿಸಿದ ಬ್ರೆಜಿಲ್ ಕ್ವಾರ್ಟರ್ಗೆ.. ದಕ್ಷಿಣ ಕೊರಿಯಾ ವಿಶ್ವಕಪ್ನಿಂದ ಔಟ್