ETV Bharat / sports

ಜೂನಿಯರ್​ ಶೂಟಿಂಗ್ ವಿಶ್ವ ಚಾಂಪಿಯನ್​ಶಿಪ್: 3ನೇ ಚಿನ್ನ ಗೆದ್ದ ಮನು ಭಾಕರ್, ಭಾರತಕ್ಕೆ ಅಗ್ರಸ್ಥಾನ​

author img

By

Published : Oct 3, 2021, 5:43 PM IST

ಪೆರುವಿನ ಲಿಮಾದಲ್ಲಿ ನಡೆಯುತ್ತಿರುವ ಚಾಂಪಿಯನ್​ಶಿಪ್​ನಲ್ಲಿ 10 ಮೀಟರ್​ ಏರ್​ ಪಿಸ್ತೂಲ್​ನ ಮಹಿಳೆಯರ ವಿಭಾಗ, ಮಿಶ್ರ ವಿಭಾಗ ಮತ್ತು ಪುರುಷರ ವಿಭಾಗದಲ್ಲಿ 3 ಚಿನ್ನದ ಪದಕ ಮತ್ತು ಪುರುಷರ ಏರ್​ ರೈಫಲ್​ನಲ್ಲಿ ಮತ್ತೊಂದು ಚಿನ್ನದ ಪದಕವನ್ನು ಭಾರತೀಯ ಕ್ರೀಡಾಪಟುಗಳು ಗೆದ್ದಿದ್ದಾರೆ.

ISSF Junior World Championships
ಮನು ಭಾಕರ್​ಗೆ 3ನೇ ಚಿನ್ನ

ನವದೆಹಲಿ: ಪ್ರತಿಭಾನ್ವಿತ ಶೂಟರ್​ ಮನು ಭಾಕರ್ ಐಎಸ್​ಎಸ್​ಎಫ್​ ಜೂನಿಯರ್​ ವಿಶ್ವಚಾಂಪಿಯನ್​ಶಿಪ್​​ನಲ್ಲಿ 3ನೇ ದಿನವಾದ ಇಂದು 2 ಚಿನ್ನದ ಪದಕ ಸೇರಿದಂತೆ ಒಟ್ಟು 3 ಸ್ವರ್ಣ ಪದಕಗಳಿಗೆ ಮುತ್ತಿಕ್ಕಿದ್ದಾರೆ. ಸ್ಟಾರ್​ ಶೂಟರ್​ ಮನು ಭಾಕರ್ ಒಬ್ಬರೇ 3 ಚಿನ್ನದ ಪದಕ ಸಾಧನೆ ಮಾಡಿದ್ದಾರೆ.

ಪೆರುವಿನ ಲಿಮಾದಲ್ಲಿ ನಡೆಯುತ್ತಿರುವ ಚಾಂಪಿಯನ್​ಶಿಪ್​ನಲ್ಲಿ ಭಾರತ 10 ಮೀಟರ್​ ಏರ್​ ಪಿಸ್ತೂಲ್​ನ ಮಹಿಳೆಯರ ವಿಭಾಗ, ಮಿಶ್ರ ವಿಭಾಗ ಮತ್ತು ಪುರುಷರ ವಿಭಾಗದಲ್ಲಿ 3 ಚಿನ್ನದ ಪದಕ ಮತ್ತು ಪುರುಷರ ಏರ್​ ರೈಫಲ್​ನಲ್ಲಿ ಮತ್ತೊಂದು ಚಿನ್ನದ ಪದಕ ಪಡೆದಿದ್ದಾರೆ.

ಮನು ಭಾಕರ್​ ಭಾನುವಾರ 2 ಚಿನ್ನ ಸೇರಿದಂತೆ ಒಟ್ಟು ಚಾಂಪಿಯನ್​ಶಿಪ್​ನಲ್ಲಿ 3 ಚಿನ್ನದ ಪದಕ ಮುಡಿಗೇರಿಸಿಕೊಂಡರು. ಅವರು ಸರಬ್ಜೋತ್​ ಸಿಂಗ್​ ಜೊತೆಯಾಗಿ ಮಿಶ್ರ ತಂಡದ ವಿಭಾಗದಲ್ಲಿ, ರಾದಮ್ ಸಂಗ್ವಾನ್​ ಮತ್ತು ಶಿಖಾ ನರ್ವಾಲ್​ ಜೊತೆಯಾಗಿ ವುಮೆನ್ಸ್​ ತಂಡ ಬೆಲಾರಸ್​ ಮಹಿಳಾ ತಂಡವನ್ನು 16-12ರಲ್ಲಿ ಮಣಿಸಿ 2ನೇ ಚಿನ್ನದ ಪದಕ ಪಡೆದರು. ಎರಡು ದಿನಗಳ ಹಿಂದೆ ಮಹಿಳೆಯರ ವಿಭಾಗದಲ್ಲಿ ತಮ್ಮ ಮೊದಲ ಚಿನ್ನ ಗೆದ್ದಿದ್ದರು.

ಪುರುಷರ ವಿಭಾಗದ ಏರ್​ ಪಿಸ್ತೂಲ್ ವಿಭಾಗದಲ್ಲಿ ನವೀನ್​, ಸರಬ್ಜೋತ್ ಸಿಂಗ್ ಮತ್ತು ಶಿವ ನರ್ವಾಲ್​ ಇದ್ದ ತಂಡ ಬೆಲಾರಸ್ ತಂಡವನ್ನು 16-14ರಲ್ಲಿ ಮಣಿಸಿ ಚಿನ್ನದ ಪದಕ ಪಡೆದರು.

ಭಾರತ ಒಟ್ಟಾರೆ 6 ಚಿನ್ನ, 6 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 14 ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಮೆರಿಕ 4 ಚಿನ್ನ, 4 ಬೆಳ್ಳಿ ಮತ್ತು 2 ಕಂಚು ಪಡೆದು 2ನೇ ಸ್ಥಾನದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.