ಮುಂಬೈ; ಪ್ರೋ ಕಬ್ಬಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್ ತಂಡದಲ್ಲಿ ಆಡುವ ಸ್ಟಾರ್ ಪ್ಲೇಯರ್ ಪವನ್ ಶೆರಾವತ್ ರಾಜ್ ಕುಮಾರ್ ಅಭಿನಯದ ಕಸ್ತೂರಿ ನಿವಾಸ ಸಿನಿಮಾದ 'ಆಡಿಸಿ ನೋಡು...ಬೀಳಿಸಿ ನೋಡು' ಸಾಂಗ್ ಹೇಳುವ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದಾರೆ.
ಜುಲೈ 9ರಂದು 25ನೇ ವಸಂತಕ್ಕೆ ಕಾಲಿಟ್ಟ ಪವನ್ ಶೆರಾವತ್, ಸ್ಟಾರ್ ಸ್ಪೋರ್ಟ್ಸ್ ಕನ್ನಡ ನಿರೂಪಕಿ ರೀನಾ ಡಿಸೋಜಾ ನಡೆಸಿದ ಇನ್ಸ್ಟಾಗ್ರಾಮ್ ಸಂದರ್ಶನದಲ್ಲಿ ಕನ್ನಡದ ಪ್ರಸಿದ್ಧ ಗೀತೆಯನ್ನು ಡಿಸೋಜಾ ಅವರ ಸಹಾಯದಿಂದ ಹೇಳಿದ್ದಾರೆ. ಪವನ್ ಅವರ ಈ ಗೀತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
- " class="align-text-top noRightClick twitterSection" data="
">
ಮೂಲತಃ ದೆಹಲಿಯವರಾಗಿರುವ ಪವನ್ ರೈಲ್ವೇಸ್ ತಂಡದ ಸದಸ್ಯರಾಗಿದ್ದಾರೆ. ಮೊದಲ ಆವೃತ್ತಿಯಿಂದಲೂ ಬೆಂಗಳೂರು ಬುಲ್ಸ್ ತಂಡದಲ್ಲಿದ್ದ ಅವರು ಮೂರನೇ ಆವೃತ್ತಿ ಮೊದಲ ಬಾರಿಗೆ ತಂಡದಲ್ಲಿ ಆಡುವ ಅವಕಾಶ ಪಡೆದರು. ನಾಲ್ಕನೇ ಆವೃತ್ತಿಯವರೆಗೂ ಬೆಂಗಳೂರು ತಂಡದಲ್ಲಿದ್ದ ಅವರು ಮತ್ತೆ 2018ರ ಆವೃತ್ತಿಯಲ್ಲಿ ಬೆಂಗಳೂರು ಸೇರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
ಇದನ್ನೂ ಓದಿ:'ಬೆಂಗಳೂರು ಬುಲ್ಸ್' ರೈಡ್ ಮಷಿನ್ ಬಗ್ಗೆ ನಿಮಗೆಷ್ಟು ಗೊತ್ತು?