ETV Bharat / sports

WFI ಲೈಂಗಿಕ ಕಿರುಕುಳ ಪ್ರಕರಣ: ನಾರ್ಕೋ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ - ಬಜರಂಗ್ ಪುನಿಯಾ - ETV Bharath Kannada news

ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಭಾನುವಾರ ಫೇಸ್​ಬುಕ್​ನಲ್ಲಿ ನಾರ್ಕೋ ಪರೀಕ್ಷೆಗೆ ಸಿದ್ಧ ಎಂದು ಬರೆದುಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಕುಸ್ತಿಪಟುಗಳು ಪತ್ರಿಕಾಗೋಷ್ಠಿ ನಡೆಸಿದರು.

bajrang-punia-said-that-we-all-are-ready-to-get-narco-test-done-in-delhi
WFI ಲೈಂಗಿಕ ಕಿರುಕುಳ ಪ್ರಕರಣ: ನಾರ್ಕೋ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ - ಬಜರಂಗ್ ಪುನಿಯಾ
author img

By

Published : May 22, 2023, 6:13 PM IST

ನಾರ್ಕೋ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ - ಬಜರಂಗ್ ಪುನಿಯಾ

ನವದೆಹಲಿ: ಇಲ್ಲಿನ ಜಂತರ್​ ಮಂತರ್​ನಲ್ಲಿ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ, ಅವರ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು 29ನೇ ದಿನಕ್ಕೆ ತಲುಪಿದೆ. ಈ ನಡುವೆ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ನಾರ್ಕೋ ಟೆಸ್ಟ್ ಕುರಿತು ಹೇಳಿದ್ದಕ್ಕೆ ಪತ್ರಿಕಾಗೋಷ್ಠಿ ನಡೆಸಿ ಕುಸ್ತಿಪಟುಗಳು ಪ್ರತಿಕ್ರಿಯಿಸಿದ್ದಾರೆ.

ಕುಸ್ತಿಪಟು ಬಜರಂಗ್ ಪುನಿಯಾ ಮಾತನಾಡಿ, 'ಈ ಪರೀಕ್ಷೆಗೆ ನಾವು ಸಿದ್ಧರಿದ್ದೇವೆ ಮತ್ತು ಇದು ಸುಪ್ರೀಂಕೋರ್ಟ್‌ನ ಮೇಲ್ವಿಚಾರಣೆಯಲ್ಲಿರಬೇಕು. ನಾರ್ಕೋ ಪರೀಕ್ಷೆಯನ್ನು ಮಾಡಲು ನಾವೆಲ್ಲರೂ ಸಿದ್ಧರಿದ್ದೇವೆ, ಆದರೆ, ಈ ಪರೀಕ್ಷೆಯನ್ನು ಇಡೀ ದೇಶವೇ ನೋಡುವಂತೆ ಲೈವ್ ಆಗಬೇಕು ಎಂದು ಅವರು ಈ ವೇಳೆ ಒತ್ತಾಯಿಸಿದ್ದಾರೆ.

ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಮಾತನಾಡಿ, ಇದರೊಂದಿಗೆ ದೂರು ನೀಡಿರುವ ಬಾಲಕಿಯರು ಕೂಡ ನಾರ್ಕೋ ಟೆಸ್ಟ್ ಮಾಡಿಸಿಕೊಳ್ಳಬೇಕು. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಸ್ಟಾರ್ ಎಂದು ಬಿಂಬಿಸಬಾರದು. ನಾರ್ಕೋ ಟೆಸ್ಟ್ ಮಾಡಿಸುವ ಬಗ್ಗೆ ಮೊದಲು ನಾವು ಕೇಳಿದ್ದೆವು ಈ ಅವರು ಅದನ್ನೇ ಹೇಳಿದ್ದಾರೆ ಎಂದ ಮಾತ್ರಕ್ಕೆ ಅವರನ್ನು ಹೀರೋ ಎಂಬಂತೆ ಬಿಂಬಿಸಬೇಡಿ. ಅವರ ಮೇಲೆ ಅತ್ಯಾಚಾರದ ಆರೋಪ ಇದೆ ಎಂದು ಹೇಳಿದರು.

ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್, ನಾವು ಇಲ್ಲಿ ಪ್ರತಿಭಟನೆ ನಡೆಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ. ಆದರೆ, ಈ ವಿಷಯದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿಭಟನೆಯ ಒಂದು ತಿಂಗಳು ಪೂರ್ಣಗೊಂಡ ನಂತರ, ನಾವು ಮಂಗಳವಾರ ಸಂಜೆ 5 ಗಂಟೆಗೆ ಇಂಡಿಯಾ ಗೇಟ್‌ನಲ್ಲಿ ಕ್ಯಾಂಡಲ್ ಮಾರ್ಚ್ ನಡೆಸುತ್ತೇವೆ. ನೂತನ ಸಂಸತ್ತಿನ ಉದ್ಘಾಟನೆಗೂ ಮುನ್ನ ಮಹಿಳಾ ಸಂಸದರು ಸಭೆ ನಡೆಸಿ ಕುಸ್ತಿಪಟುಗಳ ಪರ ಧ್ವನಿ ಎತ್ತಬೇಕು ಎಂದು ಹೇಳುತ್ತೇವೆ ಎಂದರು.

ಭಾನುವಾರ ಸಂಜೆ ಬಿಜೆಪಿ ಸಂಸದ ಮತ್ತು ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ನಾರ್ಕೋ ಪರೀಕ್ಷೆಗೆ ಸಿದ್ಧವಿದ್ದೇನೆ, ಆಟಗಾಗರು ಸಹ ನಾರ್ಕೋ ಪರೀಕ್ಷೆಗೆ ಒಳಗಾಗಬೇಕು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಇದಾದ ನಂತರ ಈ ಬಗ್ಗೆ ಇಂದು ಕುಸ್ತಿಪಟುಗಳು ಸುದ್ದಿಗೋಷ್ಠಿ ನಡೆಸಿದರು.

ಏನಿದು ಆರೋಪ: ವರ್ಷಾರಂಭದಲ್ಲೇ ಕುಸ್ತಿ ಪಟುಗಲು ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ಮಾಡಿದ್ದರು. ಸರ್ಕಾರ ಇದರ ಬಗ್ಗೆ ತನಿಖೆ ನಡೆಸುವಂತೆ ಪಿಟಿ ಉಷಾ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಒಂದನ್ನು ರಚಿಸಿತ್ತು. ಇತ್ತೀಚೆಗೆ ಸಮಿತಿ ವರದಿಯನ್ನೂ ಸಲ್ಲಿಕೆ ಮಾಡಿದೆ.

ಸಮಿತಿ ವರದಿಯ ಸಲ್ಲಿಕೆ ನಂತರ ಕಳೆದ ತಿಂಗಳು 24 ರಿಂದ ಮತ್ತೆ ಕುಸ್ತಿ ಪಟುಗಳು ಪ್ರತಿಭಟನೆ ಆರಂಭಿಸಿದ್ದರು. ಪೊಲೀಸ್​ ಠಾಣೆಯಲ್ಲಿ ದೂರು ತೆಗೆದುಕೊಳ್ಳುತ್ತಿಲ್ಲಾ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಕೋರ್ಟ್​ ಆದೇಶದ ಮೇರೆಗೆ ಎರಡು ಎಫ್​ಐಆರ್​ ದಾಖಲಾದರೂ ಸಿಂಗ್​ ಅವರನ್ನು ಬಂಧಿಸಲಾಗಿಲ್ಲ. ಬಂಧನ ಮ ಆಡುವ ವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಕುಸ್ತಿ ಪಟುಗಳು ಪಟ್ಟು ಹಿಡಿದ್ದಾರೆ.

ಇದನ್ನೂ ಓದಿ: 'ಈ ಸಲವೂ ಕಪ್​ ನಮ್ಗಿಲ್ಲ': ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್​ಸಿಬಿ, ಅಭಿಮಾನಿಗಳಿಗೆ ಬರೀ ನಿರಾಶೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.