ನೂರ್ ಸುಲ್ತಾನ್: ವಿಶ್ವ ಕುಸ್ತಿ ಚಾಂಪಿಯನ್ಶಿಪ್ನ ಸೆಮಿಫೈನಲ್ನಲ್ಲಿ ಸೋಲುಕಾಣುವ ಮೂಲಕ ಭಾರತದ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಚಿನ್ನ ಗೆಲ್ಲುವ ಕನಸು ನುಚ್ಚುನೂರಾಗಿದೆ.
ಇಂದು ನಡೆದ ಸೆಮಿಫೈನಲ್ನಲ್ಲಿ ಭಜರಂಗ್ ಕಜಕಿಸ್ತಾನದ ದೌಲತ್ ನಿಯಾಜ್ಬೆಕೋವ್ ವಿರುದ್ಧ 9-9 ಸಮಬಲದ ಅಂಕ ಪಡೆದರೂ ಭಜರಂಗ್ರನ್ನು ಸರ್ಕಲ್ನಿಂದ ಹೊರಗೆಸೆದು 4(ಟೆಕ್ನಿಕಲ್ ಪಾಯಿಂಟ್ಸ್)ಅಂಕಪಡೆದಿದ್ದ ದೌಲತ್ರನ್ನು ವಿಜೇತರೆಂದು ನಿರ್ಣಯಿಸಲಾಯಿತು.
ಈ ಸೋಲಿನಿಂದ ಹೊರಬಿದ್ದರೂ ಕಂಚಿಗಾಗಿ ಮತ್ತೊಂದು ಸೆಮಿಫೈನಲ್ನಲ್ಲಿ ಸೋತಿರುವ ಸ್ಲೊವೇನಿಯಾದ ಡೇವಿಡ್ ಹಬಾಟ್ರನ್ನು ಎದುರಿಸಲಿದ್ದಾರೆ.
ಮತ್ತೊಬ್ಬ 57 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದ ರವಿ ಕುಮಾರ್ ಕೂಡ ಸೆಮಿಫೈನಲ್ನಲ್ಲಿ ರಷ್ಯಾದ ಜುರೆವ್ ಯುಗ್ಯುವ್ ವಿರುದ್ದ ಸೋಲು ಕಂಡರು. ಒಲಿಂಪಿಕ್ಗೆ ಅರ್ಹತೆ ಗಿಟ್ಟಿಸಿಕೊಂಡಿರುವ ಅವರೂ ಕೂಡ ನಾಳೆ ಕಂಚಿಗಾಗಿ ಸೆಣಸಾಡಲಿದ್ದಾರೆ.