ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತದ ಸ್ಟಾರ್ ಷಟ್ಲರ್ ಎಚ್ ಎಸ್ ಪ್ರಣಯ್ ಆಸ್ಟ್ರೇಲಿಯನ್ ಓಪನ್ನಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸೆಮಿಫೈನಲ್‌ನಲ್ಲಿ ಪ್ರಣಯ್ ಭಾರತದ ಇನ್ನೊಬ್ಬ ಆಟಗಾರ ಪ್ರಿಯಾಂಶು ರಾಜಾವತ್ ಅವರನ್ನು ಎರಡು ನೇರ ಸೆಟ್ಗಳಿಂದ ಮಣಿಸಿ ಫೈನಲ್‌ನಲ್ಲಿ ಸ್ಥಾನವನ್ನು ಪಡೆದುಕೊಂಡರು.
ಇಂದು (ಶನಿವಾರ) ಕ್ವೇಸೆಂಟರ್ ಕೋರ್ಟ್ 1ರಲ್ಲಿ ನಡೆದ ಪಂದ್ಯದಲ್ಲಿ 43 ನಿಮಿಷಗಳ ಕಾಲ ನಡೆದ ಬಿರುಸಿನ ಹೋರಾಟದಲ್ಲಿ 21-18, 21-12ರಿಂದ ಪ್ರಿಯಾಂಶು ಅವರನ್ನು ಸೋಲಿಸಿದರು. 9ನೇ ಶ್ರೇಯಾಂಕಿತ ಪ್ರಣಯ್ಗೆ ವಿಶ್ವದ 31ನೇ ರ್ಯಾಂಕ್ನ ಪ್ರಿಯಾಂಶು ಅವರನ್ನು ಮಣಿಸುವುದು ಸರಳವಾಗಿರಲಿಲ್ಲ. ಮೊದಲ ಸೆಟ್ನಲ್ಲಿ ಪ್ರಿಯಾಂಶು ಮತ್ತು ಪ್ರಣಯ್ ಸಮಾನವಾಗಿ 18 ಅಂಕವನ್ನು ಗಳಿಸಿದ್ದರು. ಸಣ್ಣ ತಪ್ಪಿನಿಂದಾಗಿ ಪ್ರಿಯಾಂಶು ಮೂರು ಅಂಕವನ್ನು ಕಳೆದುಕೊಂಡು ಸೋಲನುಭವಿಸಿದರು.
-
#AustraliaOpen Badminton🏸: H.S Prannoy sets up final clash against Weng Hongyang in Sydneyhttps://t.co/cMUmcYybIQ
— All India Radio News (@airnewsalerts) August 5, 2023 " class="align-text-top noRightClick twitterSection" data="
">#AustraliaOpen Badminton🏸: H.S Prannoy sets up final clash against Weng Hongyang in Sydneyhttps://t.co/cMUmcYybIQ
— All India Radio News (@airnewsalerts) August 5, 2023#AustraliaOpen Badminton🏸: H.S Prannoy sets up final clash against Weng Hongyang in Sydneyhttps://t.co/cMUmcYybIQ
— All India Radio News (@airnewsalerts) August 5, 2023
ಎರಡನೇ ಗೇಮ್ನಲ್ಲಿ ಪ್ರಣಯ್ 7-3 ಮುನ್ನಡೆ ಸಾಧಿಸಿದರು. ಮತ್ತೊಂದೆಡೆ, ರಾಜಾವತ್ ಸತತ ನಾಲ್ಕು ಪಾಯಿಂಟ್‌ಗಳನ್ನು ಪಡೆದು 7ಕ್ಕೆ ಸಮಗೊಳಿಸಿದರು. ಆದರೆ ಪ್ರಣಯ್ ಬಿಡದೇ ಹೋರಾಟ ನಡೆಸಿ 11-7 ಮುನ್ನಡೆ ಪಡೆದುಕೊಂಡರು. ನಂತರ ಇದೇ ಲೀಡ್ ಅನ್ನು ಉಳಿಸಿಕೊಂಡು 21-12 ರಿಂದ ಸೆಟ್ ವಶಪಡಿಸಿಕೊಂಡರು.
ಭಾನುವಾರ ನಡೆಯಲಿರುವ ಫೈನಲ್ಸ್ನಲ್ಲಿ ಪ್ರಣಯ್ ಅವರು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಸ್ಪರ್ಧಿಸಲಿದ್ದಾರೆ. ವಿಶ್ವದ 24 ಶ್ರೇಯಾಂಕಿತ ಚೀನಾದ ಷಟ್ಲರ್ ವೆಂಗ್ ಹಾಂಗ್ ಯಾಂಗ್ ಮಾಜಿ ಆಲ್-ಇಂಗ್ಲೆಂಡ್ ಚಾಂಪಿಯನ್ ಮಲೇಷ್ಯಾದ ಲೀ ಝಿ ಜಿಯಾ ಅವರನ್ನು ಸೋಲಿಸಿ ಫೈನಲ್ಗೆ ಕಾಲಿಟ್ಟಿದ್ದಾರೆ.
ಪ್ಯಾರಾ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಪಂದ್ಯಾವಳಿ: ಏಸ್ ಷಟ್ಲರ್‌ಗಳಾದ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಅವರು 4 ರಾಷ್ಟ್ರಗಳ ಪ್ಯಾರಾ-ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ. ಪ್ರಮೋದ್ ಭಗತ್ ಎಲ್ಲಾ ವಿಭಾಗಗಳಲ್ಲಿ ಸೆಮಿಸ್‌ಗೆ ಪ್ರವೇಶಿಸಿದರೆ, ಸುಕಾಂತ್ ಕದಮ್ ಎರಡು ವಿಭಾಗಗಳಲ್ಲಿ ಸ್ಥಾನ ಪಡೆದರು.
ಪದ್ಮಶ್ರೀ ವಿಜೇತರು ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ನೆಹಾಲ್ ಗುಪ್ತಾ ಅವರನ್ನು ಸೋಲಿಸಿ ಸೆಮಿಸ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಂಡರು. 44 ನಿಮಿಷ್ ಆಟದಲ್ಲಿ ನೆಹಾಲ್ ಅವರನ್ನು 21-18, 21-18ರಿಂದ ಮಣಿಸಿದ್ದರು. ಪ್ರಮೋದ್ ಸೆಮಿಫೈನಲ್‌ನಲ್ಲಿ ಭಾರತದ ಕುಮಾರ್ ನಿತೇಶ್ ಅವರನ್ನು ಎದುರಿಸಲಿದ್ದಾರೆ.
ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ.1 ಜೋಡಿ ಪ್ರಮೋದ್ ಮತ್ತು ಸುಕಾಂತ್ ತಮ್ಮ ಎರಡೂ ಪಂದ್ಯಗಳನ್ನು ಗೆದ್ದು ಸೆಮಿಸ್‌ನಲ್ಲಿ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಪ್ರಶಸ್ತಿ ಸುತ್ತಿಗೆ ಪ್ರವೇಶಿಸಲು ಭಾರತದ ಕುಮಾರ್ ನಿತೇಶ್ ಮತ್ತು ತರುಣ್ ಅವರನ್ನು ಸೋಲಿಸಬೇಕಿದೆ.
ಮಿಶ್ರ ಡಬಲ್ಸ್‌ನಲ್ಲಿ ಪ್ರಮೋದ್ ಮತ್ತು ಮನೀಶಾ ರಾಮ್‌ದಾಸ್ ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್‌ನ ಲುಕಾಸ್ ಮಜೂರ್ ಮತ್ತು ಫೌಸ್ಟಿನ್ ನೋಯೆಲ್ ಅವರನ್ನು 21-17, 21-14 ರಿಂದ ಮಣಿಸಿದರು. ಅವರು ಸೆಮಿಫೈನಲ್‌ನಲ್ಲಿ ಭಾರತದ ಮಾನಸಿ ಜೋಶಿ ಮತ್ತು ರುತಿಕ್ ರಘುಪತಿ ಅವರನ್ನು ಎದುರಿಸುತ್ತಾರೆ.
ಸುಕಾಂತ್ ಕದಮ್ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಸುಕ್ನತ್ ತರುಣ್ ಅವರನ್ನು ಸೋಲಿಸಿದರು. ಇಬ್ಬರ ನಡುವೆ ಏರ್ಪಟ್ಟ ಬಿಗಿ ಹೋರಾಟದಲ್ಲಿ 23-21, 21-14, 21-14 ರಿಂದ ಗೇಮ್ ಅಂತ್ಯವಾಯಿತು. ಇಬ್ಬರ ನಡುವೆ ಮೊದಲ ಸೆಟ್ನಲ್ಲಿ ತೀವ್ರ ಪೈಪೋಟಿ ಕಂಡು ಬಂತು ವಿನ್ ಪಾಯಿಂಟ್ ಟೈ ಆದ್ದರಿಂದ 23-21ರಿಂದ ಮೊದಲ ಸೆಟ್ ಸುಕಾಂತ್ ಗೆದ್ದುಕೊಂಡರು. ಎರಡು ಮತ್ತು ಮೂರರಲ್ಲಿ 14ಕ್ಕೆ ತರುಣ್ರನ್ನು ಸುಕಾಂತ್ ಕಟ್ಟಿಹಾಕಿ ಸೆಮಿಫೈನಲ್‌ಗೆ ಪ್ರವೇಶ ಪಡೆದರು. ಸೆಮಿಸ್‌ನಲ್ಲಿ ಸುಕಾಂತ್ ಕದಮ್ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ಅವರನ್ನು ಎದುರಿಸಲಿದ್ದಾರೆ.
ಇದನ್ನೂ ಓದಿ: Australia Open: ಸೆಮಿಫೈನಲ್ ತಲುಪಿದ ಪ್ರಣಯ್, ಪ್ರಿಯಾಂಶು; ಕ್ವಾರ್ಟರ್‌ನಲ್ಲಿ ಸಿಂಧುಗೆ ಹಿನ್ನಡೆ