ಕ್ಲಾಡ್ನೋ: ಭಾರತದ ಓಟದ ವಿಭಾಗದಲ್ಲಿ ಕ್ರಾಂತಿಯೆಬ್ಬಿಸುತ್ತಿರುವ ಅಸ್ಸೋಂ ಮೂಲದ ಹಿಮಾ ದಾಸ್ ಒಂದು ವಾರದಲ್ಲಿ ಮೂರನೇ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಜುಲೈ 2ರಂದು ಪೋಲೆಂಡ್ನ ಪೊನ್ಝಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಹಿಮಾ ದಾಸ್ 200 ಮೀ. ಓಟವನ್ನು 23.65 ಸೆಕೆಂಡ್ಗಳಲ್ಲಿ ತಲುಪುವ ಮೂಲಕ ಚಿನ್ನ ಗೆದ್ದಿದ್ದರು. ನಂತರ ಜುಲೈ 7ರಂದು ಕುಂತೊ ಅಥ್ಲೆಟಿಕ್ಸ್ ಕೂಟದ ಮಹಿಳೆಯರ 200 ಮೀ. ಓಟವನ್ನು 23.97 ಸೆಕೆಂಡ್ನಲ್ಲಿ ತಲುಪಿ ಎರಡನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು.
ಇದೀಗ ಶನಿವಾರ ನಡೆದ ಕ್ಲಾಡ್ನೋ ಮೆಮೋರಿಯಲ್ ಅಥ್ಲೆಟಿಕ್ಸ್ನಲ್ಲಿ ಮಹಿಳೆಯರ 200 ಮೀ. ಓಟದ ವಿಭಾಗದಲ್ಲಿ 23.43 ಸೆಕೆಂಡ್ನಲ್ಲಿ ಗುರಿ ತಲುಪುವ ಮೂಲಕ ಮೂರನೇ ಚಿನ್ನದ ಪದಕ ಪಡೆದು ಭಾರತಕ್ಕೆ ಕೀರ್ತಿ ತಂದಿದ್ದಾರೆ.
-
Third gold in a row for @HimaDas8 in less than two weeks. Congratulations @HimaDas8 on winning 200m race with a time of 23.43s at Kladno Athletics Meet 2019 in #CzechRepublic #IndianAthletics #HimaDas pic.twitter.com/PEcYrr0fc9
— Rahul Trehan (@imrahultrehan) July 13, 2019 " class="align-text-top noRightClick twitterSection" data="
">Third gold in a row for @HimaDas8 in less than two weeks. Congratulations @HimaDas8 on winning 200m race with a time of 23.43s at Kladno Athletics Meet 2019 in #CzechRepublic #IndianAthletics #HimaDas pic.twitter.com/PEcYrr0fc9
— Rahul Trehan (@imrahultrehan) July 13, 2019Third gold in a row for @HimaDas8 in less than two weeks. Congratulations @HimaDas8 on winning 200m race with a time of 23.43s at Kladno Athletics Meet 2019 in #CzechRepublic #IndianAthletics #HimaDas pic.twitter.com/PEcYrr0fc9
— Rahul Trehan (@imrahultrehan) July 13, 2019
ಹಿಮಾ ದಾಸ್ ಜೊತೆಗೆ ಇನ್ನಿತರ ಅಥ್ಲೆಟ್ಗಳಾದ ಮೊಹಮ್ಮದ್ ಅನಾಸ್ 400 ಮೀಟರ್ನಲ್ಲಿ ಚಿನ್ನ, ಜಾವೆಲಿನ್ ಥ್ರೋನಲ್ಲಿ ವಿಪಿನ್ ಕಾಸನ, ಅಭಿಷೇಕ್ ಸಿಂಗ್, ದವೀಂದರ್ ಸಿಂಗ್ ಮೊದಲ ಮೂರು ಸ್ಥಾನವನ್ನು ಹಂಚಿಕೊಂಡಿದ್ದಾರೆ. ಶಾಟ್ಪುಟ್ ವಿಭಾಗದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ತೇಜಿಂದರ್ ಪಾಲ್ ಸಿಂಗ್ ತೂರ್ ಕಂಚು ಗೆದ್ದಿದ್ದಾರೆ.