ಹ್ಯಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡವು ತನ್ನ ಮೊದಲ ಎರಡು ಪಂದ್ಯಗಳನ್ನು ದೊಡ್ಡ ಅಂತರದಲ್ಲಿ ಗೆದ್ದಿದೆ. ಭಾರತ ಕಳೆದ ವಾರ ತನ್ನ ಆರಂಭಿಕ ಪಂದ್ಯದಲ್ಲಿ ಉಜ್ಬೇಕಿಸ್ತಾನವನ್ನು 16-0 ಅಂತರದಿಂದ ಸೋಲಿಸಿತು ಮತ್ತು ನಂತರ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ತನ್ನ ಎರಡನೇ ಗೇಮ್‌ನಲ್ಲಿ ಸಿಂಗಾಪುರವನ್ನು 16-1 ರಿಂದ ಸೋಲಿಸಿತು. ನಾಳೆ (ಗುರುವಾರ) ನಡೆಯುವ ಪಂದ್ಯದಲ್ಲಿ ಭಾರತವು 2018ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಜಪಾನ್ ಅನ್ನು ಎದುರಿಸಲಿದೆ. ಈ ಮುಖಾಮುಖಿ ಭಾರತಕ್ಕೆ ಕಠಿಣ ಸವಾಲಾಗಿರಲಿದೆ.
ಸಿಂಗಾಪುರ ವಿರುದ್ಧ ನಾಲ್ಕು ಗೋಲು ಗಳಿಸಿದ ನಾಯಕ ಹರ್ಮನ್‌ಪ್ರೀತ್ ಸಿಂಗ್, "ನಾಳೆ ನಾವು ಎದುರಿಸಲಿರುವ ಸ್ಪರ್ಧೆಯ ಮಟ್ಟದ ಬಗ್ಗೆ ನಮಗೆ ತಿಳಿದಿದೆ. ಜಪಾನ್ ಪ್ರಬಲ ಆಟಗಾರರ ಘಟಕವನ್ನು ಹೊಂದಿದೆ ಮತ್ತು ನಮಗೆ ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ತಿಳಿದಿದೆ. ನಾವು ನಮ್ಮದೇ ಆದ ಆಟದ ಮೇಲೆ ಕೇಂದ್ರೀಕರಿಸಬೇಕು. ಮೈದಾನದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಅಗತ್ಯ ಇರುವ ತಂತ್ರಗಳನ್ನು ಬದಲಾಯಿಸಲು ನಾವು ಸಿದ್ಧರಾಗಿರಬೇಕು. ಜಪಾನ್ ತಮ್ಮ ತಂಡದಲ್ಲಿ ಸಾಕಷ್ಟು ಗೋಲು ಗಳಿಸುವವರನ್ನು ಹೊಂದಿದ್ದಾರೆ ಮತ್ತು ಆದ್ದರಿಂದ ಅವರ ಆಕ್ರಮಣಕಾರಿ ಚಲನೆಯನ್ನು ನಿಭಾಯಿಸಲು ನಮ್ಮ ರಕ್ಷಣೆಯು ಬಲವಾಗಿರಬೇಕು" ಎಂದಿದ್ದಾರೆ.
-
#TeamIndia 🇮🇳 Captain and today's Hat-trick Hero @13harmanpreet has a message for all the Indian Fans.#HockeyIndia #IndiaKaGame #AsianGames #TeamIndia #HangzhouAsianGames #EnRouteToParis #IndianTeam #SunehraSafar pic.twitter.com/qVIRO5ISsa
— Hockey India (@TheHockeyIndia) September 26, 2023 " class="align-text-top noRightClick twitterSection" data="
">#TeamIndia 🇮🇳 Captain and today's Hat-trick Hero @13harmanpreet has a message for all the Indian Fans.#HockeyIndia #IndiaKaGame #AsianGames #TeamIndia #HangzhouAsianGames #EnRouteToParis #IndianTeam #SunehraSafar pic.twitter.com/qVIRO5ISsa
— Hockey India (@TheHockeyIndia) September 26, 2023#TeamIndia 🇮🇳 Captain and today's Hat-trick Hero @13harmanpreet has a message for all the Indian Fans.#HockeyIndia #IndiaKaGame #AsianGames #TeamIndia #HangzhouAsianGames #EnRouteToParis #IndianTeam #SunehraSafar pic.twitter.com/qVIRO5ISsa
— Hockey India (@TheHockeyIndia) September 26, 2023
ಜಪಾನ್ ಸಹ ಏಷ್ಯನ್ ಗೇಮ್ಸ್‌ನಲ್ಲಿ ಇಲ್ಲಿಯವರೆಗೆ ಅಜೇಯವಾಗಿದೆ, ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7-2 ರಿಂದ ಸೋಲಿಸಿತು, ಮತ್ತು ನಂತರ ತನ್ನ ಎರಡನೇ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ವಿರುದ್ಧ 10-1 ಗೆಲುವು ದಾಖಲಿಲಿಸಿದೆ.
ಆಗಸ್ಟ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಚೆನ್ನೈ 2023 ರ ಸೆಮಿಫೈನಲ್‌ನಲ್ಲಿ ಜಪಾನ್ ವಿರುದ್ಧ ಭಾರತದ ಕೊನೆಯ ಮುಖಾಮುಖಿ ಆಗಿತ್ತು, ಆತಿಥೇಯರು 5-0 ಅಂತರದಲ್ಲಿ ಗೆದ್ದರು. ಪೂಲ್ ಪಂದ್ಯದಲ್ಲಿ ಇದೇ ಟೂರ್ನಿಯಲ್ಲಿ ಜಪಾನ್ ವಿರುದ್ಧ ಭಾರತ 1-1 ಡ್ರಾ ಸಾಧಿಸಿತ್ತು. 2013 ರಿಂದ, ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಭಾರತ 21 ಬಾರಿ ಗೆದ್ದಿದೆ. ಜಪಾನ್ ಮೂರು ಬಾರಿ ಗೆದ್ದಿದೆ ಮತ್ತು ಎರಡು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿವೆ.
ವನಿತೆಯ ತಂಡದ ವಿಜಯದ ಆರಂಭ: ಭಾರತದ ಮಹಿಳಾ ಹಾಕಿ ತಂಡವು ಇಂದು ಸಿಂಗಾಪುರ ವಿರುದ್ಧದ ನಡೆದ ಆರಂಭಿಕ ಪಂದ್ಯದಲ್ಲೇ ಬೃಹತ್ ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಮೂಲಕ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಅದ್ಭುತ ಅಭಿಯಾನ ಆರಂಭಿಸಿದೆ. ಪಂದ್ಯ ಎಲ್ಲಾ ನಾಲ್ಕು ಕ್ವಾರ್ಟರ್ಗಳ ಕೊನೆಯಲ್ಲಿ ಸಿಂಗಾಪುರ ವಿರುದ್ಧ ಗೋಲ್ಗಳ ಮಳೆ ಸುರಿಸಿದ ಭಾರತ 13-0 ಅಂತರದಲ್ಲಿ ಜಯ ಸಾಧಿಸಿತು.
ಭಾರತದ ಉಳಿದ ಪಂದ್ಯಗಳು:
ಸೆಪ್ಟೆಂಬರ್ 28: ಭಾರತ ವಿರುದ್ಧ ಜಪಾನ್
ಸೆಪ್ಟೆಂಬರ್ 30: ಭಾರತ ವಿರುದ್ಧ ಪಾಕಿಸ್ತಾನ
ಅಕ್ಟೋಬರ್ 2: ಭಾರತ ವಿರುದ್ಧ ಬಾಂಗ್ಲಾದೇಶ
ಇದನ್ನೂ ಓದಿ: BWF World Junior Championships: ಜಯದ ಓಟ ಮುಂದುವರೆಸಿದ ಜೂನಿಯರ್ಸ್.. ಬ್ರೆಜಿಲ್ ವಿರುದ್ಧ ಭಾರತಕ್ಕೆ ಗೆಲುವು