ಹ್ಯಾಂಗ್‌ಝೌ( ಚೀನಾ): ಶನಿವಾರ ನಡೆದ ಏಷ್ಯನ್ ಗೇಮ್ಸ್ನ ಆರ್ಚರಿ ಮಹಿಳೆಯರ ಸಂಯುಕ್ತ ವೈಯಕ್ತಿಕ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನದ ಪದಕ ಹಾಗೂ ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರೊಳಡ್ಡಿದ್ದಾರೆ. ಮತ್ತೊಂದು ಕಡೆ ಪುರುಷರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಓಜಸ್ ಡಿಯೋಟಾಲೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಅಭಿಷೇಕ್ ವರ್ಮಾ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.
ಮಹಿಳಾ ಕಬಡ್ಡಿ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಚೈನೀಸ್ ತೈಪೆ ವಿರುದ್ಧ ಚಿನ್ನದ ಪದಕ ಗೆದ್ದ ನಂತರ, ಭಾರತ 100 ಪದಕಗಳ ಮೈಲಿಗಲ್ಲನ್ನು ದಾಟಿದೆ. ಭಾರತ ಮಹಿಳಾ ತಂಡ 26-25 ಅಂಕಗಳಿಂದ ಚೈನೀಸ್ ತೈಪೆ ತಂಡವನ್ನು ಸೋಲಿಸಿ ಸ್ವರ್ಣ ಪದಕ ಗೆದ್ದುಕೊಂಡಿದೆ. ಆರ್ಚರಿಯಲ್ಲಿ ಭಾರತ ಈ ಬಾರಿ ದಾಖಲೆಯ ಸಾಧನೆ ಮಾಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಅಷ್ಟೇ ಅಲ್ಲ ಈ ಮೂಲಕ ಭಾರತಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೂ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕಗಳು ಲಭಿಸಿದಂತಾಗಿದೆ. ಇನ್ನಷ್ಟು ಚಿನ್ನದ ಪದಕಗಳು ಪದಕ ಪಟ್ಟಿ ಸೇರುವ ಸಾಧ್ಯತೆಗಳೂ ಇವೆ.
- " class="align-text-top noRightClick twitterSection" data="">
ಓಜಸ್ ಡಿಯೋಟಾಲೆ ಚಿನ್ನ, ಅಭಿಷೇಕ್ ವರ್ಮಾ ಬೆಳ್ಳಿ: ಭಾರತದ ಬಿಲ್ಲುಗಾರ ಓಜಸ್ ಡಿಯೋಟಾಲೆ ಇಂದು ನಡೆದ ಫೈನಲ್ ಪಂದ್ಯದಲ್ಲಿ 148-147 ಅಂಕಗಳ ಅಂತರದಿಂದ ಮತ್ತೋರ್ವ ಭಾರತದ ಸ್ಪರ್ಧಿ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಭಿಷೇಕ್ ವರ್ಮಾ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
-
It is a historic moment for India at the Asian Games. Our Kabaddi Women's team has clinched the Gold! This victory is a testament to the indomitable spirit of our women athletes. India is proud of this success. Congrats to the team. My best wishes for their future endeavours. pic.twitter.com/amfPaGmiHt
— Narendra Modi (@narendramodi) October 7, 2023 " class="align-text-top noRightClick twitterSection" data="
">It is a historic moment for India at the Asian Games. Our Kabaddi Women's team has clinched the Gold! This victory is a testament to the indomitable spirit of our women athletes. India is proud of this success. Congrats to the team. My best wishes for their future endeavours. pic.twitter.com/amfPaGmiHt
— Narendra Modi (@narendramodi) October 7, 2023It is a historic moment for India at the Asian Games. Our Kabaddi Women's team has clinched the Gold! This victory is a testament to the indomitable spirit of our women athletes. India is proud of this success. Congrats to the team. My best wishes for their future endeavours. pic.twitter.com/amfPaGmiHt
— Narendra Modi (@narendramodi) October 7, 2023
ಅದಿತಿ ಗೋಪಿಚಂದ್ ಸ್ವಾಮಿಗೆ ಕಂಚು: ಭಾರತದ ಅದಿತಿ ಗೋಪಿಚಂದ್ ಸ್ವಾಮಿ ಅವರು ಆರ್ಚರಿ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ರೈತ್ ಫಡ್ಲಿ ಅವರನ್ನು 146-140 ಅಂಕಗಳಿಂದ ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಶನಿವಾರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಈ ಮೂಲಕ 40ನೇ ಕಂಚಿನ ಪದಕ ಲಭಿಸಿದೆ.
-
🥇Compound Archer No. 1🥇#KheloIndiaAthlete @VJSurekha wins gold🥇 after defeating Korea with a score of 149-145 at the #AsianGames2022 🤩🥳
— SAI Media (@Media_SAI) October 7, 2023 " class="align-text-top noRightClick twitterSection" data="
With this, Jyothi has won a total of 3️⃣ Gold at AG👌🏻🌟
Super proud of you, champ!! Keep Shining🌟#Cheer4India#JeetegaBharat… pic.twitter.com/SmvgAj8NZn
">🥇Compound Archer No. 1🥇#KheloIndiaAthlete @VJSurekha wins gold🥇 after defeating Korea with a score of 149-145 at the #AsianGames2022 🤩🥳
— SAI Media (@Media_SAI) October 7, 2023
With this, Jyothi has won a total of 3️⃣ Gold at AG👌🏻🌟
Super proud of you, champ!! Keep Shining🌟#Cheer4India#JeetegaBharat… pic.twitter.com/SmvgAj8NZn🥇Compound Archer No. 1🥇#KheloIndiaAthlete @VJSurekha wins gold🥇 after defeating Korea with a score of 149-145 at the #AsianGames2022 🤩🥳
— SAI Media (@Media_SAI) October 7, 2023
With this, Jyothi has won a total of 3️⃣ Gold at AG👌🏻🌟
Super proud of you, champ!! Keep Shining🌟#Cheer4India#JeetegaBharat… pic.twitter.com/SmvgAj8NZn
ಬಿಲ್ಲುಗಾರಿಕೆಯಲ್ಲಿ ಭಾರತಕ್ಕೆ ದಾಖಲೆಯ 12 ಪದಕಗಳನ್ನು ಗಳಿಸಿದೆ. ಮೂಲಕ 17 ವರ್ಷ ವಯಸ್ಸಿನವರು ಇಂಡೋನೇಷ್ಯಾದ ರೈತ್ ಜಿಲಿಜಾಟಿ ಫಡ್ಲಿ ಅವರನ್ನು ಮಹಿಳೆಯರ ಸಂಯುಕ್ತ ವೈಯಕ್ತಿಕ ಕಂಚಿನ ಪ್ಲೇ-ಆಫ್‌ನ ಏಕಪಕ್ಷೀಯ ಪಂದ್ಯದಲ್ಲಿ ಸೋಲಿಸಿದರು. ಎರಡು ತಿಂಗಳ ಹಿಂದೆ ಬರ್ಲಿನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಅದಿತಿ ಸ್ವಾಮಿ ಮುಡಿಗೇರಿಸಿಕೊಂಡಿದ್ದರು ಎಂಬುದು ಗಮನಾರ್ಹ.
2014ರ ಇಂಚಿಯಾನ್ ಆವೃತ್ತಿಯಲ್ಲಿ ಭಾರತ ಒಂದು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿತ್ತು. ಬೆಳಗಿನ ಈ ಮೂರು ಪದಕಗಳೊಂದಿಗೆ ಭಾರತದ ಪದಕಗಳ ಸಂಖ್ಯೆ 100ಕ್ಕೆ ಏರಿಕೆ ಆಗಿದ್ದು, ಪದಕಗಳ ಶತಕದ ಗುರಿಯನ್ನು ತಲುಪಿದೆ. ಇಂದಿನ ಇನ್ನೂ ಹಲವು ಪಂದ್ಯಗಳಲ್ಲಿ ಭಾರತಕ್ಕೆ ಪದಕಗಳು ಖಚಿತ ಆಗಿದೆ.
-
BRONZE FOR ADITI 🏹🥉
— SAI Media (@Media_SAI) October 7, 2023 " class="align-text-top noRightClick twitterSection" data="
🇮🇳's 🔝 Compound Archer and #KheloIndiaAthlete Aditi Gopichand Swami settles for a Bronze medal after defeating Indonesia
at the #AsianGames2022 👏🔥
Well Played, Aditi 👍 Keep up the momentum!#Cheer4India#Hallabol#JeetegaBharat#BharatAtAG22 pic.twitter.com/f3GiFBQpii
">BRONZE FOR ADITI 🏹🥉
— SAI Media (@Media_SAI) October 7, 2023
🇮🇳's 🔝 Compound Archer and #KheloIndiaAthlete Aditi Gopichand Swami settles for a Bronze medal after defeating Indonesia
at the #AsianGames2022 👏🔥
Well Played, Aditi 👍 Keep up the momentum!#Cheer4India#Hallabol#JeetegaBharat#BharatAtAG22 pic.twitter.com/f3GiFBQpiiBRONZE FOR ADITI 🏹🥉
— SAI Media (@Media_SAI) October 7, 2023
🇮🇳's 🔝 Compound Archer and #KheloIndiaAthlete Aditi Gopichand Swami settles for a Bronze medal after defeating Indonesia
at the #AsianGames2022 👏🔥
Well Played, Aditi 👍 Keep up the momentum!#Cheer4India#Hallabol#JeetegaBharat#BharatAtAG22 pic.twitter.com/f3GiFBQpii
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹತ್ವದ ಸಾಧನೆ- ಪ್ರಧಾನಿ ಮೋದಿ ಅಭಿನಂದನೆ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹತ್ವದ ಸಾಧನೆ ಮಾಡಿದೆ. ನಾವು 100 ಪದಕಗಳ ಗಮನಾರ್ಹ ಮೈಲಿಗಲ್ಲನ್ನು ತಲುಪಿರುವ ವಿಷಯವು ಭಾರತದ ಜನರು ರೋಮಾಂಚನಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
-
🇮🇳 𝐃𝐎𝐔𝐁𝐋𝐄 𝐕𝐈𝐂𝐓𝐎𝐑𝐘🥇🥈
— SAI Media (@Media_SAI) October 7, 2023 " class="align-text-top noRightClick twitterSection" data="
🏹Compound Archers Pravin Ojas Deotale (#KheloIndiaAthlete) and @archer_abhishek win the GOLD🥇 and SILVER 🥈respectively at the #AsianGames2022. 🤩🥳
This is the 8th and 9th medal for India and the 6th Gold medal in Compound Archery 🤩
🇮🇳… pic.twitter.com/BYFcQmSl5k
">🇮🇳 𝐃𝐎𝐔𝐁𝐋𝐄 𝐕𝐈𝐂𝐓𝐎𝐑𝐘🥇🥈
— SAI Media (@Media_SAI) October 7, 2023
🏹Compound Archers Pravin Ojas Deotale (#KheloIndiaAthlete) and @archer_abhishek win the GOLD🥇 and SILVER 🥈respectively at the #AsianGames2022. 🤩🥳
This is the 8th and 9th medal for India and the 6th Gold medal in Compound Archery 🤩
🇮🇳… pic.twitter.com/BYFcQmSl5k🇮🇳 𝐃𝐎𝐔𝐁𝐋𝐄 𝐕𝐈𝐂𝐓𝐎𝐑𝐘🥇🥈
— SAI Media (@Media_SAI) October 7, 2023
🏹Compound Archers Pravin Ojas Deotale (#KheloIndiaAthlete) and @archer_abhishek win the GOLD🥇 and SILVER 🥈respectively at the #AsianGames2022. 🤩🥳
This is the 8th and 9th medal for India and the 6th Gold medal in Compound Archery 🤩
🇮🇳… pic.twitter.com/BYFcQmSl5k
ಭಾರತಕ್ಕೆ ಈ ಐತಿಹಾಸಿಕ ಮೈಲಿಗಲ್ಲಿಗೆ ಕಾರಣವಾದ ನಮ್ಮ ಅದ್ಭುತ ಕ್ರೀಡಾಪಟುಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಪ್ರತಿ ವಿಸ್ಮಯಕಾರಿ ಪ್ರದರ್ಶನವು ಇತಿಹಾಸವನ್ನು ನಿರ್ಮಿಸಿದೆ ಮತ್ತು ನಮ್ಮ ಹೃದಯದಲ್ಲಿ ಹೆಮ್ಮೆ ಆವರಿಸಿದೆ. ಅಕ್ಟೋಬರ್ 10 ರಂದು ಆಯೋಜಿರಿಸುವ ನಮ್ಮ ಏಷ್ಯನ್ ಗೇಮ್ಸ್ ತಂಡವನ್ನು ಮತ್ತು ನಮ್ಮ ಕ್ರೀಡಾಪಟುಗಳೊಂದಿಗೆ ಸಂವಾದ ನಡೆಸಲು ನಾನು ಎದುರು ನೋಡುತ್ತಿದ್ದೇನೆ ಎಂದು ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್: ಭಾರತ ತಂಡ ಸಶಕ್ತಗೊಳಿಸಲು ಗಮನಹರಿಸಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ...