ETV Bharat / sports

Asian Games 2023: ಪಿಟಿ ಉಷಾ ದಾಖಲೆ ಸರಿಗಟ್ಟಿದ ವಿತ್ಯಾ ರಾಮರಾಜ್.. ಚೀನಾದಲ್ಲಿ ಪದಕಗಳ ಬೇಟೆಯಾಡುತ್ತಿದ್ದಾರೆ ಭಾರತೀಯರು - ಪಿಟಿ ಉಷಾ ದಾಖಲೆ ಸರಿಗಟ್ಟಿದ ವಿತ್ಯಾ ರಾಮರಾಜ್

Asian Games 2023: ವಿತ್ಯಾ ರಾಮರಾಜ್ ಮಹಿಳೆಯರ 400 ಮೀಟರ್ಸ್ ಹರ್ಡಲ್ಸ್‌ನ ಫೈನಲ್‌ಗೆ ಅರ್ಹತೆ ಪಡೆದರು. ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಇಂದು ಭಾರತೀಯ ಆಟಗಾರರು ಪದಕಗಳ ಬೇಟೆ ಆರಂಭಿಸಿದ್ದಾರೆ. ಈಗಾಗಲೇ ಭಾರತಕ್ಕೆ ಎರಡು ಕಂಚು ಲಭಿಸಿದೆ.

Asian Games 2023  19th asian games  asian games live update  asian games 9th day live update  badminton  bronze medal  bronze in skating  ಇನ್ನೂ ಜಾರಿಯಲ್ಲಿದೆ ಆಟಗಾರರ ಪದಕಗಳ ಹಸಿವು  55 ಪದಕಗಳನ್ನು ಪಡೆದ ಭಾರತ  ಎರಡು ಕಂಚಿನೊಂದಿಗೆ 55 ಪದಕ  ಚೀನಾದಲ್ಲಿ ಪದಕಗಳ ಬೇಟೆಯಾಡುತ್ತಿದ್ದಾರೆ ಭಾರತೀಯರು  ಪಿಟಿ ಉಷಾ ದಾಖಲೆ ಸರಿಗಟ್ಟಿದ ವಿತ್ಯಾ ರಾಮರಾಜ್  ರೋಲರ್ ಸ್ಕೇಟರ್‌ಗಳು ತಮ್ಮ ವಿಭಾಗಗಳಲ್ಲಿ ಕಂಚಿನ ಪದಕ
ಪಿಟಿ ಉಷಾ ದಾಖಲೆ ಸರಿಗಟ್ಟಿದ ವಿತ್ಯಾ ರಾಮರಾಜ್
author img

By ETV Bharat Karnataka Team

Published : Oct 2, 2023, 10:44 AM IST

ಹ್ಯಾಂಗ್​ಝೌ, ಚೀನಾ : ಏಷ್ಯನ್ ಗೇಮ್ಸ್ 2023ರ ಒಂಬತ್ತನೇ ದಿನವಾದ ಇಂದು (Asian Games 2023) ಭಾರತೀಯ ಅಥ್ಲೀಟ್‌ಗಳು ಮೈದಾನಕ್ಕಿಳಿದು ಈಗಾಗಲೇ ಎರಡು ಕಂಚು ತಮ್ಮದಾಗಿಸಿಕೊಂಡಿದ್ದಾರೆ. ಇಂದು ಮುಂಜಾನೆ ಭಾರತೀಯ ಪುರುಷ ಮತ್ತು ಮಹಿಳೆಯರ ರೋಲರ್ ಸ್ಕೇಟರ್‌ಗಳು ತಮ್ಮ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 53ರಿಂದ 55ಕ್ಕೆ ಏರಿಕೆಯಾಗಿದೆ. ಭಾರತೀಯ ಆಟಗಾರರು ಸಾಧ್ಯವಾದಷ್ಟು ಸ್ಪರ್ಧೆಗಳಲ್ಲಿ ಗೆದ್ದು ಪದಕಗಳನ್ನು ತಮ್ಮ ದೇಶಕ್ಕೆ ಅರ್ಪಿಸುವುದು ಅವರ ಮುಖ್ಯ ಉದ್ದೇಶವಾಗಿದೆ.

  • India at Asian Games: Day 9 (2nd Oct) Schedule:

    BIG Highlights:
    ➡️ Mukherjees in TT Mixed Doubles Semis
    ➡️ Shaili Singh (Long Jump)
    ➡️ Parul Chaudhary (3000m SC)
    ➡️ Start of Kabaddi (Women), Archery (Elimination round) & Badminton Individual round

    PS: Pinning this Tweet… pic.twitter.com/rYit3biwkK

    — India_AllSports (@India_AllSports) October 1, 2023 " class="align-text-top noRightClick twitterSection" data=" ">

ಇಂದು ಪದಕಗಳ ಖಾತೆ ತೆರೆದ ಭಾರತ: ಭಾರತೀಯ ರೋಲರ್ ಸ್ಕೇಟರ್‌ಗಳು ಪುರುಷರ ಮತ್ತು ಮಹಿಳೆಯರ 3000 ಮೀಟರ್ ಟೀಮ್ ರಿಲೇ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು. ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರಿದ್ದ ಮಹಿಳಾ ತಂಡ ಸ್ಪರ್ಧೆಯ ಒಂಬತ್ತನೇ ದಿನದಂದು 4:34.861 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಭಾರತದ ಖಾತೆ ತೆರೆದರು. ಭಾರತದ ಕ್ವಾರ್ಟೆಟ್ ಚಿನ್ನದ ಪದಕ ವಿಜೇತರಾದ ಚೈನೀಸ್ ತೈಪೆ (4:19.447) ಮತ್ತು ದಕ್ಷಿಣ ಕೊರಿಯಾ (4:21.146) ನಂತರ ಮುಗಿಸಿದರು.

ಇದಾದ ಬಳಿಕ ಆರ್ಯನ್‌ಪಾಲ್ ಸಿಂಗ್ ಘುಮಾನ್, ಆನಂದ್‌ಕುಮಾರ್ ವೇಲ್‌ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗ್ಲೆ ಅವರು ಪುರುಷರ ತಂಡ ರಿಲೇಯಲ್ಲಿ 4:10.128 ಸೆಕೆಂಡ್‌ಗಳೊಂದಿಗೆ ಎರಡನೇ ಕಂಚಿನ ಪದಕ ಪಡೆದರು.

  • 1st MEDAL of the day 😍

    and it has come from Roller Skating
    Quartet of Aarathy Kasthury Raj, Heeral, Sanjana and Karthika won the Bronze in Speed Skating 3000m Relay race. #IndiaAtAsianGames #AGwithIAS #AsianGames2023

    — India_AllSports (@India_AllSports) October 2, 2023 " class="align-text-top noRightClick twitterSection" data=" ">

ಭಾನುವಾರ ವಿಶೇಷ ದಿನ: ಭಾರತೀಯರಿಗೆ ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾನುವಾರ ಅತ್ಯಂತ ವಿಶೇಷ ದಿನವಾಗಿತ್ತು. ಭಾನುವಾರ ಒಂದೇ ದಿನದಲ್ಲಿ ಭಾರತ ಗರಿಷ್ಠ ಪದಕಗಳನ್ನು ಗೆದ್ದಿದೆ. ಅಕ್ಟೋಬರ್ 1 ರಂದು ಭಾರತ 3 ಚಿನ್ನದ ಪದಕಗಳನ್ನು ಒಳಗೊಂಡಂತೆ ಒಟ್ಟು 15 ಪದಕಗಳನ್ನು ಗೆದ್ದುಕೊಂಡಿತು. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಇದುವರೆಗೆ 13 ಚಿನ್ನ, 22 ಬೆಳ್ಳಿ ಮತ್ತು 20 ಕಂಚು ಸೇರಿದಂತೆ ಒಟ್ಟು 55 ಪದಕಗಳನ್ನು ಗೆದ್ದಿದೆ.

400 ಮೀಟರ್ಸ್ ಹರ್ಡಲ್ಸ್‌ನ ಫೈನಲ್‌ಗೆ ಭಾರತ: ಭಾರತದ ಅಥ್ಲೀಟ್ ವಿತ್ಯಾ ರಾಮರಾಜ್ ಅವರು ಸೋಮವಾರ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ 400 ಮೀ ಹರ್ಡಲ್ಸ್‌ನ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ಪಿಟಿ ಉಷಾ ಅವರ 39 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ್ದಾರೆ. ಇತರ ಅಥ್ಲೀಟ್‌ಗಳಾದ ಜೆಸ್ಸಿ ಸಂದೇಶ್, ಮೊಹಮ್ಮದ್ ಅಫ್ಸಲ್ ಪುಳಿಕ್ಕಲಕತ್ ಮತ್ತು ಕೃಷ್ಣನ್ ಕುಮಾರ್ ಕೂಡ ಪದಕ ಸುತ್ತಿಗೆ ಪ್ರವೇಶಿಸಿದ್ದಾರೆ. ನಾಳೆ ಫೈನಲ್ ನಡೆಯಲಿದೆ.

  • Athletics: Schedule for FINALS in which India has qualified today:

    Men's 400m Hurdles: 3rd Oct | 1705 hrs
    Women's 400m Hurdles: 3rd Oct | 1650 hrs IST
    Men's 800m: 3rd Oct | 1755 hrs IST
    Men's High Jump: 4th Oct | 1630 hrs IST #IndiaAtAsianGames #AGwithIAS

ಟೆನಿಸ್​ ಮೇಲೆ ನಿರೀಕ್ಷೆ: ಇಂದು ಮಹಿಳೆಯರ ಡಬಲ್ ಟೇಬಲ್ ಟೆನಿಸ್ ಈವೆಂಟ್‌ನ ಸೆಮಿಫೈನಲ್ ಪಂದ್ಯವನ್ನು ಸುತೀರ್ಥ ಮುಖರ್ಜಿ ಮತ್ತು ಆಯೇಶಾ ಮುಖರ್ಜಿ ಆಡಲಿದ್ದಾರೆ. ಈ ಸಹೋದರಿಯರ ಜೋಡಿಯಿಂದ ದೇಶವು ಭಾರೀ ನಿರೀಕ್ಷೆಯನ್ನು ಹೊಂದಿದೆ.

ಓದಿ: ಏಷ್ಯನ್​ ಗೇಮ್ಸ್: ರೋಲರ್ ಸ್ಕೇಟಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಪುರುಷ, ಮಹಿಳೆಯರ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.