ETV Bharat / sports

ಕ್ವಾರ್ಟರ್​ ಫೈನಲ್​​ಗೆ ಅಮಿತ್​... ಟೋಕಿಯೋ ಒಲಿಂಪಿಕ್​ ಟಿಕೆಟ್​ಗೆ ಬೇಕು ಒಂದು ಜಯ - ಕ್ವಾರ್ಟರ್​ ಫೈನಲ್​​ ಪ್ರವೇಶಿಸಿದ ಅಮಿತ್

ಪಂಗಲ್​ ತಮ್ಮ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 2019ರ ಆಗ್ನೇಯ ಏಷ್ಯನ್ ಬಾಕ್ಸಿಂಗ್​ ಚಾಂಪಿಯನ್​ ಆಗಿರುವ ಫಿಲಿಫೈನ್ಸ್​ನ ಕಾರ್ಲೋ ಪಾಲಮ್​ ವಿರುದ್ಧ ಸೆಣಸಾಡಲಿದ್ದಾರೆ.

Amit PanAmit Panghal ghal
ಅಮಿತ್ ಪಂಗಲ್
author img

By

Published : Mar 7, 2020, 7:56 PM IST

ಜೋರ್ಡಾನ್: ವಿಶ್ವಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಪಡೆದಿರುವ ಅಮಿತ್​ ಪಂಗಲ್​ ಶನಿವಾರ ನಡೆದ ಏಷ್ಯನ್​ ಒಲಿಂಪಿಕ್​ ಅರ್ಹತಾ ಟೂರ್ನಿಯಲ್ಲಿ ಕ್ವಾರ್ಟರ್​​ ಫೈನಲ್​ ಪ್ರವೇಶಿಸಿದ್ದು, ಟೋಕಿಯೋ ಒಲಿಂಪಿಕ್​ ಟಿಕೆಟ್​ ಗಿಟ್ಟಿಸಿಕೊಳ್ಳಲು ಇನ್ನೊಂದು ಪಂದ್ಯ ಗೆಲ್ಲಬೇಕಿದೆ.

ಶನಿವಾರ ನಡೆದ ಪಂದ್ಯದಲ್ಲಿ ಮಂಗೋಲಿಯಾದ ಎಂಖ್ಮಂಡಖ್ ಖಾರ್ಖು ಅವರನ್ನು 3-2ರಲ್ಲಿ ಮಣಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ. ಈ ಹಿಂದಿನ ಮುಖಾಮುಖಿಯಲ್ಲಿ 5-0ಯಲ್ಲಿ ಸೋಲನುಭವಿಸಿದ ಅಮಿತ್​ ಪಂಗಲ್​ ಇಂದಿಗ ಪಂದ್ಯದಲ್ಲಿ ಆರಂಭದಿಂದಲೂ ಮಂಗೋಲಿಯನ್​ ಬಾಕ್ಸರ್​ ವಿರುದ್ಧ ಮೇಲುಗೈ ಸಾಧಿಸಿದರು.

ಪಂಗಲ್​ ತಮ್ಮ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ 2019ರ ಆಗ್ನೇಯ ಏಷ್ಯನ್ ಬಾಕ್ಸಿಂಗ್​ ಚಾಂಪಿಯನ್​ ಆಗಿರುವ ಫಿಲಿಫೈನ್ಸ್​ನ ಕಾರ್ಲೋ ಪಾಲಮ್​ ವಿರುದ್ಧ ಸೆಣಸಾಡಲಿದ್ದಾರೆ.

ಈ ಪಂದ್ಯದಲ್ಲಿ 24 ವರ್ಷದ ಅಮಿತ್​ ಗೆಲುವು ಪಡೆದರೆ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್​ಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.