ಅಮಾನ್ (ಜೋರ್ಡಾನ್): ಜೋರ್ಡಾನ್‌ನ ಅಮಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೆ ಮೂರು ಚಿನ್ನದ ಪದಕಗಳು ಬಂದಿವೆ. ಮಹಿಳಾ ಬಾಕ್ಸರ್ಗಳಾದ ಲವ್ಲಿನಾ, ಸ್ವೀಟಿ ಹಾಗೂ ಅಲಿಫಿಯಾ ಪಠಾಣ್ ಬಂಗಾರದ ಪದಕಕ್ಕೆ ಗೆದ್ದಿದ್ದಾರೆ.
ಇಂದು ನಡೆದ ಫೈನಲ್ ಪಂದ್ಯಗಳಲ್ಲಿ ಭಾರತದ ಮಹಿಳಾ ಬಾಕ್ಸರ್ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದಕ್ಕೂ ಮುನ್ನ ಮಹಿಳೆಯರ 63 ಕೆಜಿ ವಿಭಾಗದ ಫೈನಲ್‌ನಲ್ಲಿ ಪರ್ವೀನ್ ಹೂಡಾ ಚಿನ್ನದ ಪದಕ ಗೆದ್ದಿದ್ದರು. ಮಹಿಳೆಯರ 52 ಕೆಜಿ ವಿಭಾಗದಲ್ಲಿ ಮೀನಾಕ್ಷಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದರು.
-
Fourth 🥇 for 🇮🇳! 🤩🔝
— Boxing Federation (@BFI_official) November 11, 2022 " class="align-text-top noRightClick twitterSection" data="
Terrific performance champ, congratulations. 🥳#AsianChampionships#PunchMeinHaiDum#Boxing pic.twitter.com/tEQAhMVZko
">Fourth 🥇 for 🇮🇳! 🤩🔝
— Boxing Federation (@BFI_official) November 11, 2022
Terrific performance champ, congratulations. 🥳#AsianChampionships#PunchMeinHaiDum#Boxing pic.twitter.com/tEQAhMVZkoFourth 🥇 for 🇮🇳! 🤩🔝
— Boxing Federation (@BFI_official) November 11, 2022
Terrific performance champ, congratulations. 🥳#AsianChampionships#PunchMeinHaiDum#Boxing pic.twitter.com/tEQAhMVZko
ಈಗ 75 ಕೆಜಿ ವಿಭಾಗದಲ್ಲಿ ಲವ್ಲಿನಾ, 81 ಕೆಜಿ ವಿಭಾಗದಲ್ಲಿ ಸ್ವೀಟಿ ಹಾಗೂ 81 ಕೆಜಿಗೂ ಮೆಲ್ಪಟ್ಟವರ ವಿಭಾಗದಲ್ಲಿ ಅಲಿಫಿಯಾ ಪಠಾಣ್ ಸಹ ಬಂಗಾರದ ಪದಕಕ್ಕೆ ಗೆದ್ದಿದ್ದಾರೆ. ಈ ಮೂಲಕ ಫೈನಲ್ ಪ್ರವೇಶಿಸಿದ ಐವರು ಮಹಿಳಾ ಬಾಕ್ಸರ್ಗಳ ಪೈಕಿ ನಾಲ್ವರು ಚಿನ್ನ ಮತ್ತು ಒಬ್ಬರು ಬೆಳ್ಳಿ ಪದಕ ಗೆದ್ದು ಮಿಂಚಿದ್ದಾರೆ.
-
Hattrick of 🥇! 🥳🔥
— Boxing Federation (@BFI_official) November 11, 2022 " class="align-text-top noRightClick twitterSection" data="
Well done champ, congratulations. 🔝#AsianChampionships#PunchMeinHaiDum#Boxing pic.twitter.com/sFYSWoXxzp
">Hattrick of 🥇! 🥳🔥
— Boxing Federation (@BFI_official) November 11, 2022
Well done champ, congratulations. 🔝#AsianChampionships#PunchMeinHaiDum#Boxing pic.twitter.com/sFYSWoXxzpHattrick of 🥇! 🥳🔥
— Boxing Federation (@BFI_official) November 11, 2022
Well done champ, congratulations. 🔝#AsianChampionships#PunchMeinHaiDum#Boxing pic.twitter.com/sFYSWoXxzp
ಒಲಂಪಿಕ್ ಕಂಚಿನ ಪದಕ ವಿಜೇತೆ ಲವ್ಲಿನಾ ತಮ್ಮ 75 ಕೆಜಿ ವಿಭಾಗದಲ್ಲಿ ಉಜ್ಬೇಕಿಸ್ತಾನ್‌ನ ರುಜ್ಮೆಟೋವಾ ಸೊಖಿಬಾ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ನಂತರ ಫಾರ್ಮ್ ಕಂಡುಕೊಳ್ಳಲು ಹೆಣಗಾಡುತ್ತಿದ್ದ 25 ವರ್ಷದ ಲವ್ಲಿನಾಗೆ ಈ ಗೆಲುವು ಭಾರಿ ಬೂಸ್ಟರ್ ಸಿಕ್ಕಂತೆ ಆಗಿದೆ.
-
LOVLINA GETS 🥇! 🥳✅
— Boxing Federation (@BFI_official) November 11, 2022 " class="align-text-top noRightClick twitterSection" data="
Proud of you champ 👌#AsianChampionships#PunchMeinHaiDum#Boxing pic.twitter.com/2Fk1S1UYBO
">LOVLINA GETS 🥇! 🥳✅
— Boxing Federation (@BFI_official) November 11, 2022
Proud of you champ 👌#AsianChampionships#PunchMeinHaiDum#Boxing pic.twitter.com/2Fk1S1UYBOLOVLINA GETS 🥇! 🥳✅
— Boxing Federation (@BFI_official) November 11, 2022
Proud of you champ 👌#AsianChampionships#PunchMeinHaiDum#Boxing pic.twitter.com/2Fk1S1UYBO
81 ಕೆಜಿ ವಿಭಾಗದಲ್ಲಿ ಸ್ವೀಟಿ ಕಜಕಿಸ್ತಾನದ ಗುಲ್ಸಯಾ ಯೆರ್ಜಾನ್ ಅವರನ್ನು 5-0 ಅಂತರದಿಂದ ಸೋಲಿಸಿ ಬಂಗಾರದ ಪದಕ ಗೆದ್ದರು. 81 ಕೆಜಿಗೂ ಮೆಲ್ಪಟ್ಟವರ ವಿಭಾಗದಲ್ಲಿ ಅಲಿಫಿಯಾ ಪಠಾಣ್ ಸಹ ಅದ್ಭುತ ಪ್ರದರ್ಶನ ನೀಡಿದರು. ಫೈನಲ್‌ನಲ್ಲಿ ಜೋರ್ಡಾನ್‌ನ ಇಸ್ಲಾಂ ಹುಸೈಲಿ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕದ ಬೇಟೆಯಾಡಿದರು.
ಇದನ್ನೂ ಓದಿ: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಚಿನ್ನಕ್ಕೆ ಮುತ್ತಿಕ್ಕಿದ ಪರ್ವೀನ್, ಬೆಳ್ಳಿಗೆ ಕೊರಳೊಡ್ಡಿದ ಮೀನಾಕ್ಷಿ