ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನ ಹಿಂಪಡೆದ ಭಾರತದ ನಿಲುವನ್ನು 5 ಬಾರಿಯ ಮಹಿಳಾ ವಿಶ್ವ ಚಾಂಪಿಯನ್ ಬಾಕ್ಸರ್/ ರಾಜ್ಯಸಭಾ ಸದಸ್ಯೆ ಎಂ.ಸಿ ಮೇರಿ ಕೋಮ್ ಬೆಂಬಲಿಸಿದ್ದಾರೆ.
ಆರ್ಟಿಕಲ್ 370 ವಿಧಿ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರ ಪ್ರದೇಶದ ಅಥ್ಲೀಟ್‌ಗಳಿಗೆ ಉತ್ತಮವಾದ ಸೌಲಭ್ಯಗಳು ಕೇಂದ್ರ ಸರ್ಕಾರದಿಂದ ಲಭ್ಯವಾಗಲಿವೆ. ಕ್ರೀಡಾಳುಗಳು ದೇಶಕ್ಕಾಗಿ ಇನ್ನೂ ಚೆನ್ನಾಗಿ ಸ್ಪರ್ಧಿಸುವಂತಾಗಲಿದೆ ಎಂದರು.
ಕಣಿವೆ ರಾಜ್ಯದಲ್ಲಿ ಕ್ರೀಡಾಳುಗಳಿಗೆ ಅಪಾರವಾದ ಅವಕಾಶಗಳು ದೊರೆಯಲಿವೆ. ಕೇಂದ್ರ ಸರ್ಕಾರ ಉತ್ತಮವಾದ ಮೂಲ ಸೌಕರ್ಯಗಳನ್ನು ಒದಗಿಸಿಕೊಡುತ್ತದೆ ಎಂಬ ಭರವಸೆ ನನಗಿದೆ ಎಂದು ಅಭಿಪ್ರಾಯಪಟ್ಟರು.