ಅರ್ಜೆಂಟೀನಾ : ಫುಟ್ಬಾಲ್ ಪಂದ್ಯ ಆರಂಭಕ್ಕೂ ಮುನ್ನ ಅರ್ಜೆಂಟೀನಾದ ಕೆಲ ಅಭಿಮಾನಿಗಳು ಮೈದಾನದೊಳಗೆ ಗ್ರೆನೇಡ್ ಎಸೆದು ವಿಧ್ವಂಸಕತೆ ಮೆರೆದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ನೆವೆಲ್ಸ್ ಓಲ್ಡ್ ಬಾಯ್ಸ್ ಮತ್ತು ರೊಸಾರಿಯೊ ಸೆಂಟ್ರಲ್ ತಂಡಗಳ ಮಧ್ಯೆ ನಡೆದ ಪಂದ್ಯಕ್ಕೂ ಮುನ್ನ ಕೆಲ ಕಿಡಿಗೇಡಿ ಅಭಿಮಾನಿಗಳು ಮೈದಾನದಲ್ಲಿ ಗ್ರೆನೇಡ್ ಬಾಂಬ್ ಎಸೆದಿದ್ದಾರೆ. ಇದರಿಂದ ಮೈದಾನ ಕುಳಿ ಬಿದ್ದಿದೆ. ಇದನ್ನು ನೆವೆಲ್ಸ್ ಫುಟ್ಬಾಲ್ ಫ್ರಾಂಚೈಸಿ ಟ್ವೀಟ್ ಮಾಡಿದ್ದು, ಬಾಂಬ್ ಸ್ಫೋಟಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
-
The moment a grenade was thrown onto the pitch prior to the Clásico Rosarino. #Newells pic.twitter.com/hFwckz6cq6
— Newell's Old Boys - English (@Newells_en) March 20, 2022 " class="align-text-top noRightClick twitterSection" data="
">The moment a grenade was thrown onto the pitch prior to the Clásico Rosarino. #Newells pic.twitter.com/hFwckz6cq6
— Newell's Old Boys - English (@Newells_en) March 20, 2022The moment a grenade was thrown onto the pitch prior to the Clásico Rosarino. #Newells pic.twitter.com/hFwckz6cq6
— Newell's Old Boys - English (@Newells_en) March 20, 2022
ಇನ್ನು ಬಾಂಬ್ ಸ್ಫೋಟದಿಂದಾಗಿ ಮೈದಾನದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಇದರಿಂದಾಗಿ ನೆವೆಲ್ಸ್ ಓಲ್ಡ್ ಬಾಯ್ಸ್ ಮತ್ತು ರೊಸಾರಿಯೊ ಸೆಂಟ್ರಲ್ ನಡುವಿನ ಫುಟ್ಬಾಲ್ ಪಂದ್ಯ ವಿಳಂಬವಾಗಿ ಆರಂಭಗೊಂಡಿತು.
ಭೀತಿ ಮಧ್ಯೆ ನೆವೆಲ್ಸ್ ತಂಡಕ್ಕೆ ಗೆಲುವು : ಬಾಂಬ್ ಸ್ಫೋಟದ ಮಧ್ಯೆಯೂ ಆರಂಭವಾದ ಪಂದ್ಯದಲ್ಲಿ ನೆವೆಲ್ಸ್ ಓಲ್ಡ್ ಬಾಯ್ಸ್ ತಂಡ ರೊಸಾರಿಯೊ ತಂಡದ ವಿರುದ್ಧ ಗೆಲುವು ಸಾಧಿಸಿದೆ. ಪಂದ್ಯದ ಬಳಿಕ 'ನಮ್ಮಲ್ಲಿ ಗೆಲ್ಲುವ ಶಕ್ತಿ ಇದೆ. ನಿಮ್ಮಲ್ಲಿ ಬಾಂಬ್ಗಳಿವೆ. ಅಷ್ಟೇ ವ್ಯತ್ಯಾಸ.. ಏನೇ ಆದರೂ ಗೆಲುವು ನಮ್ಮದೇ' ಎಂದು ನೆವೆಲ್ಸ್ ತಂಡ ಟ್ವೀಟ್ ಮಾಡಿದೆ.
2016ರ ಬಳಿಕ ಇದೇ ಮೊದಲ ಬಾರಿಗೆ ನೆವೆಲ್ಸ್ ತಂಡ ರೊಸಾರಿಯೊ ವಿರುದ್ಧ ಗೆಲುವು ಸಾಧಿಸಿದ್ದು ವಿಶೇಷ. ಫುಟ್ಬಾಲ್ ದಂತಕಥೆ, ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ನೆವೆಲ್ಸ್ ಓಲ್ಡ್ ಬಾಯ್ಸ್ ತಂಡದಿಂದಲೇ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.
ಓದಿ: ಐಪಿಎಲ್ 2022: 'ಎಂಐ ಅರೆನಾ'ದಲ್ಲಿ ಮುಂಬೈ ಇಂಡಿಯನ್ಸ್ ಮೋಜು ಮಸ್ತಿ..!